ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ 3ನೇ ಪ್ರವೇಶ ದ್ವಾರ ಸಾರ್ವಜನಿಕರಿಗೆ ಮುಕ್ತ

|
Google Oneindia Kannada News

ಬೆಂಗಳೂರು, ಜೂನ್ 29: ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮೂರನೇ ಪ್ರವೇಶ ದ್ವಾರ ಇಂದು ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಕೇಂದ್ರ ಸಚಿವ ಸುರೇಶ್ ಅಂಗಡಿ ಉದ್ಘಾಟಿಸಲಿದ್ದಾರೆ. 1.3 ಕರೆ ವಿಸ್ತೀರ್ಣದಲ್ಲಿ ಈ ಪ್ರವೇಶದ್ವಾರ ಸೇರಿ ಪ್ರಯಾಣಿಕರಿಗೆ ಅಗತ್ಯವಿರುವ ಇನ್ನಿತರೆ ವ್ಯವಸ್ಥೆ ಮಾಡಲಾಗಿದೆ. 3 ವರ್ಷಗಳ ಹಿಂದೆ ಆತಂಭವಾಗಿದ್ದ ಕಾಮಗಾರಿ 2017ರ ಜನವರಿಯಲ್ಲಿ ಮುಗಿಯಬೇಕಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಮುಂದಕ್ಕೆ ಹೋಗುತ್ತಿತ್ತು.

KSR station 3rd entrance gate will open today
ರೈಲು ನಿಲ್ದಾಣದ ಪ್ರವೇಶಕ್ಕೆ ಸದ್ಯ ಎರಡು ಪ್ರವೇಶ ದ್ವಾರಗಳಿದ್ದು, ನಿತ್ಯ ಲಕ್ಷಾಂತರ ಜನರು ನಿಲ್ದಾಣಕ್ಕೆ ಬರುತ್ತಿದ್ದು, ಅವರಿಗೆ ಟಿಕೆಟ್ ನೀಡುವುದು, ಅವರ ಸಮಸ್ಯೆಗಳನ್ನು ಪರಿಸಹರಿಸುವುದು ಸೇರಿ ಇನ್ನಿತರೆ ಕೌಂಟರ್ ಗಳು ಎರಡು ಪ್ರವೇಶ ದ್ವಾರದಲ್ಲಿದೆ.

ಇದೀಗ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಎದುರಿನಲ್ಲಿ ಮತ್ತೊಂದು ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಜೊತೆಗೆ ಮೆಟ್ರೋ ನಿಲ್ದಾಣದಿಂದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬರಲು ಅನುಕೂಲವಾಗುವಂತೆ ಪಾದಚಾರಿ ಮೇಲ್ಸೇತುವೆಯನ್ನೂ ಕೂಡ ನಿರ್ಮಿಸಲಾಗಿದೆ.

English summary
KSR station 3rd entrance gate will open today, after 3 years finally Krantiveera sangolli rayanna raileay station gets 3rd entrance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X