ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಾಕ್ಷೇತ್ರದಲ್ಲಿ ಕೃಷ್ಣ ಸಂಧಾನ-ಮಂತ್ರ ಮಯೂರಿ ಯಕ್ಷಗಾನ, ಮಿಸ್ ಮಾಡ್ಲೇಬೇಡಿ

|
Google Oneindia Kannada News

ಬೆಂಗಳೂರು, ಜೂನ್ 13: ಯಕ್ಷಸಿಂಧೂರ ಕಲಾಮಂಡಳಿಯು ಇದೇ ಜೂನ್ 15ರಂದು ಕೃಷ್ಣ ಸಂಧಾನ- ಮಂತ್ರ ಮಯೂರಿ ಯಕ್ಷಗಾನವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸ್ತುತಪಡಿಸುತ್ತಿದೆ.

ರಾತ್ರಿ 10 ಗಂಟೆಗೆ ಯಕ್ಷಗಾನ ಆರಂಭವಾಗಲಿದೆ. ಊರಿನ ತಿರುಗಾಟ ಮುಗಿಸಿದ ಮೇಳಗಳು ರಾಜಧಾನಿಯತ್ತ ಮುಖ ಮಾಡುತ್ತಿವೆ. ಆಟಕ್ಕಾಗಿ ಕಾಯುತ್ತಿರುವ ಕಲಾಕ್ಷೇತ್ರದ ಕಲಾರಸಿಕರ ವಲಯಕ್ಕೆ ನಿರೀಕ್ಷೆ ಹೆಚ್ಚುತ್ತಿದೆ .

ದುಬೈನಲ್ಲಿ ನೂತನ ಮಕ್ಕಳ ಯಕ್ಷಗಾನ ತಂಡದ ಉದ್ಘಾಟನೆದುಬೈನಲ್ಲಿ ನೂತನ ಮಕ್ಕಳ ಯಕ್ಷಗಾನ ತಂಡದ ಉದ್ಘಾಟನೆ

ಈ ಬಾರಿ ಜೂನ್‌‌ನಲ್ಲೆ ಪೌರಾಣಿಕ ಮತ್ತು ಸಾಮಾಜಿಕ ಉಭಯ ಪ್ರೇಕ್ಷಕ ವರ್ಗಕ್ಕೂ ಒಂದೇ ದಿನ ಸವಿ ಉಣಬಡಿಸಲು ಯಕ್ಷಸಿಂಧೂರ ತಂಡ ಸಜ್ಜಾಗುತ್ತಿದೆ . ತೆಂಕುತಿಟ್ಟಿನ ಭಾರಿ ಬಿಸಿಯ ವಾಕ್ ವೈಖರಿಯ ಜೋಡಿ ಪೆರ್ಮದೆ ಜಯಪ್ರಕಾಶ್ ಶೆಟ್ಟರ ಕೌರವನಿಗೆ ರಂಗಾಭಟ್ಟರ ಕೃಷ್ಣ , ಇದು ಈಗಾಗಲೇ ಪ್ರೇಕ್ಷಕರಲ್ಲಿ ಚರ್ಚೆಯಾಗುತ್ತಿದೆ . ಇಬ್ಬರು ಅತ್ಯುತ್ತಮ ಕೂಟದ ಕಲಾವಿದರು ಆಟದಲ್ಲಿ ಅದೂ ಬಡಗಿನಲ್ಲಿ ಹಿಲ್ಲೂರು ಗಾನ ಸಾರಥ್ಯದಲ್ಲಿ ಹೇಗೆ ಸಂಧಾನ ಮಾತುಕತೆ ಮಾಡಲಿದ್ದಾರೆ ಎನ್ನುವುದಕ್ಕೆ ನೀವು ಸಾಕ್ಷಿಯಾಗಬೇಕು .

Krishna Sandhana Yakshagana at Ravindra Kalakshetra

ಇನ್ನು ಊರಿನ ತಿರುಗಾಟದಲ್ಲಿ ಜನಮೆಚ್ಚುಗೆಯ ಪ್ರಸಂಗ ಮಂತ್ರ ಮಯೂರಿ . ಈಗ ಚಾಲ್ತಿಯಲ್ಲಿರುವ ಸ್ತ್ರೀ ವೇಷಧಾರಿ ಸುಧೀರ್ ಉಪ್ಪೂರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಹಟ್ಟಿಯಂಗಡಿ ಮೇಳದ ಹಿಟ್ ಪ್ರಸಂಗವಿದು. ಅವಳಿ ರಂಗಸ್ಥಳದಲ್ಲಿ ಪ್ರದರ್ಶನಗೊಳ್ಳುವ ಈ ಪ್ರಸಂಗದ ಕಥಾಹಂದರ ಈಗಾಗಲೇ ಸದ್ದು ಮಾಡುತ್ತಿದೆ .

ಯಕ್ಷಗಾನ ಕಲಾವಿದರಿಗೆ ಮಾಸಾಶನ- ಖಾದರ್ ಭರವಸೆಯಕ್ಷಗಾನ ಕಲಾವಿದರಿಗೆ ಮಾಸಾಶನ- ಖಾದರ್ ಭರವಸೆ

ಐರಬೈಲ್ ಆನಂದ ಶೆಟ್ಟಿ , ಸುರೇಶ ಶೆಟ್ಟಿ , ಹೆನ್ನಾಬೈಲ್ ವಿಶ್ವನಾಥ , ಪ್ರಶಾಂತ ಗಾಣಿಗ , ನಿತೀನ್ ಶೆಟ್ಟಿ , ಭರತ್ ಪರ್ಕಳ , ಹಳ್ಳಾಡಿ ಜಯರಾಮ ಶೆಟ್ಟಿ , ಯಳಬೇರು ಶೇಖರ ಶೆಟ್ಟಿ , ದೇವಲ್ಕುಂದ , ಕಿರಾಡಿ , ರಾಜೇಶ್ ಬೈಕಾಡಿ , ಅಮಾಸ್‌ಬೈಲ್ , ಇನ್ನಿತರರ ರಂಗವೈಭವದ ಆಟ ಕಾಣಬೇಕೆಂಬ ಕುತೂಹಲಕ್ಕೆ ಕಲಾಕ್ಷೇತ್ರವೇ ದಾರಿ.

English summary
Kala Sindhura Kalamandali is presenting krishna Sandhana Mantra mayuri Yakshagana at Ravindra Kalakshetra Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X