• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಂದ್ರ ಸರ್ಕಾರ ಬೆಂಗಳೂರನ್ನು ಕಡೆಗಣಿಸುತ್ತಿದೆ : ಕೃಷ್ಣ ಬೈರೇಗೌಡ

|

ಬೆಂಗಳೂರು, ಏಪ್ರಿಲ್ 10 : 'ಬೆಂಗಳೂರು ನಗರದಿಂದ ಸಾಫ್ಟ್‌ ವೇರ್ ರಫ್ತು ಒಂದರಿಂದಲೇ ದೇಶಕ್ಕೆ 80 ಸಾವಿರ ಕೋಟಿ ಆದಾಯ ಬರುತ್ತಿದೆ. ಆದರೆ ಕೇಂದ್ರ ಸರಕಾರ ಬೆಂಗಳೂರು ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ' ಎಂದು ಕೃಷ್ಣ ಬೈರೇಗೌಡ ಆರೋಪ ಮಾಡಿದರು.

ಬುಧವಾರ ಬೆಳಗ್ಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಗೆದ್ದಲಹಳ್ಳಿ ಪಾರ್ಕ್‌ನಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಮತಯಾಚನೆ ಮಾಡಿದರು. ವಾಕಿಂಗ್‌ಗೆ ಆಗಮಿಸಿದ್ದ ಜನರೊಂದಿಗೆ ಸಭೆ ನಡೆಸಿದರು.

ವಿಳಾಸದ ವಿಚಾರದಲ್ಲಿ ಸಿದ್ದರಾಮಯ್ಯ, ಡಿವಿಎಸ್ ನಡುವೆ ಕಿತ್ತಾಟ!

ಬೆಂಗಳೂರು ನಗರದ ಸಂಚಾರ ದಟ್ಟಣೆ ಸಮಸ್ಯೆ ಕುರಿತು ಮಾತನಾಡಿದ ಅವರು, 'ಬೆಂಗಳೂರು ನಗರದ ಸಾಫ್ಟ್‌ವೇರ್ ರಫ್ತು ಒಂದರಿಂದಲೇ ದೇಶಕ್ಕೆ 80 ಸಾವಿರ ಕೋಟಿ ಆದಾಯ ಬರುತ್ತಿದೆ. ಆದರೆ ಕೇಂದ್ರ ನಗರದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ' ಎಂದು ಆರೋಪಿಸಿದರು.

ಬೆಂಗಳೂರು ಉತ್ತರ ಚುನಾವಣಾ ಪುಟ

'ಫೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ ಸಹಕಾರ ನೀಡಲು ಮೀನಮೇಷ ಎಣಿಸುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಹಣ ಕೊಟ್ಟಿಲ್ಲ. ರಸ್ತೆ ನಿರ್ಮಾಣ ಯೋಜನೆಗೂ ಹಣ ಬಿಡುಗಡೆ ಮಾಡಿಲ್ಲ' ಎಂದು ದೂರಿದರು.

ಕೃಷ್ಣ ಬೈರೇಗೌಡರದ್ದು 420 ಬುದ್ಧಿ ಎನ್ನಬೇಕೆ ಎಂದು ಸದಾನಂದ ಗೌಡ ಪ್ರಶ್ನೆ

'ರಾಜ್ಯದ ಬರ ನಿರ್ವಹಣೆಗೆ ಸಹಾಯ ಕೇಳಿದಾಗಲೂ ಕೇಂದ್ರ ಸೂಕ್ತ ನೆರವು ನೀಡಲಿಲ್ಲ. ಮಹಾರಾಷ್ಟ್ರ ರಾಜ್ಯಕ್ಕೆ 4 ಸಾವಿರ ಕೋಟಿ ನೆರವು ಕೊಟ್ಟ ಕೇಂದ್ರದ ಬಿಜೆಪಿ ಸರಕಾರ ಕರ್ನಾಟಕ ರಾಜ್ಯಕ್ಕೆ ಬರೀ 940 ಕೋಟಿ ಕೊಟ್ಟಿದೆ' ಎಂದು ಹೇಳಿದರು.

'ನಮ್ಮ ರಾಜ್ಯದಿಂದ ಹೆಚ್ಚು ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಆದರೆ, ನಮ್ಮ ಪರ ಅವರು ಕೇಂದ್ರದಲ್ಲಿ ಧ್ವನಿ ಎತ್ತುತ್ತಿಲ್ಲ. ಮಾತನಾಡುವುದಕ್ಕೇ ಭಯ ಪಡುತ್ತಾರೆ' ಎಂದು ಕೃಷ್ಣ ಬೈರೇಗೌಡ ಅವರು ಆರೋಪ ಮಾಡಿದರು.

English summary
Bangalore North lok sabha seat Congress-JD(S) candidate Krishna Byre Gowda election campaign in Hebbal assembly constituency along with Hebbal Congress MLA Byrathi Suresh on April 10, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X