• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿಯಲ್ಲಿ 4ಜಿ ಮಾದರಿಯ ಬೃಹತ್ ಹಗರಣದ ಆರೋಪ

|

ಬೆಂಗಳೂರು, ಸೆಪ್ಟೆಂಬರ್ 23: ಬಹೃತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬೃಹತ್ ಹಗರಣವೊಂದು ನಡೆದಿದೆ ಎಂದು ಆರೋಪಿಸಲಾಗಿದೆ. 2015 ರಿಂದ 2020ರ ತನಕ ನಡೆದ ಕಾಮಗಾರಿಗಳ ಗುತ್ತಿಗೆಯನ್ನು ಒಂದೇ ಸಂಸ್ಥೆಗೆ ನೀಡಲಾಗಿದೆ ಎಂಬುದು ಆರೋಪ.

ಬೆಂಗಳೂರು ನವ ನಿರ್ಮಾಣ ಪಕ್ಷ ಅಂಕಿ-ಅಂಶಗಳ ಸಮೇತ ಮಾಹಿತಿಯನ್ನು ನೀಡಿದೆ. "ಬಿಬಿಎಂಯಲ್ಲಿ ನಡೆದ 4ಜಿ ಮಾದರಿ ಹಗರಣವಿದು" ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಆರೋಪ ಮಾಡಿದ್ದಾರೆ.

ಬಿಬಿಎಂಪಿ ಆಸ್ತಿ ತೆರಿಗೆ ಹಗರಣ; ಎಸಿಬಿ ತನಿಖೆಗೆ ಆದೇಶ

"ಕಳೆದ 5 ವರ್ಷಗಳಲ್ಲಿ 28,314 ವಿವಿಧ ಯೋಜನೆಗಳ ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ. ಕೆಲವೊಂದು ಕಾಮಗಾರಿಗೆ ಟೆಂಡರ್ ಕರೆಯದೇ ನೇರವಾಗಿ ನೀಡಲಾಗಿದೆ. ಇದಕ್ಕಾಗಿ ಶೇ 10ರಷ್ಟು ಕಮೀಷನ್ ಪಡೆಯಲಾಗಿದೆ" ಎಂದು ಆರೋಪಿಸಲಾಗಿದೆ.

198 ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ ಬಿಬಿಎಂಪಿ

ಐದು ವರ್ಷಗಳ ಅವಧಿಯಲ್ಲಿ 63,629 ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 21,653 ಕೋಟಿಯಾಗಿದೆ. ಸೆಪ್ಟೆಂಬರ್ 10ಕ್ಕೆ ಪಾಲಿಕೆ ಕೌನ್ಸಿಲ್ ಅವಧಿ ಮುಕ್ತಾಯಗೊಂಡಿದ್ದು, ಪ್ರಸ್ತುತ ಸರ್ಕಾರ ಆಡಳಿತ ನೋಡಿಕೊಳ್ಳಲು ಆಡಳಿತಾಧಿಕಾರಿ ನೇಮಕ ಮಾಡಿದೆ.

ಬಿಬಿಎಂಪಿ: ಬಯಲಾಯ್ತು ಸಾವಿರ ಕೋಟಿಯ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ!

10 ಸಾವಿರ ಕೋಟಿ ರೂ. ಕಾಮಗಾರಿ

10 ಸಾವಿರ ಕೋಟಿ ರೂ. ಕಾಮಗಾರಿ

2015 ರಿಂದ 2020ರ ಅವಧಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ 10 ಸಾವಿರ ಕೋಟಿ ರೂ. ಕಾಮಗಾರಿಯನ್ನು ನೀಡಲಾಗಿದೆ. ಒಂದೇ ಸಂಸ್ಥೆಗೆ ಬಹುಕೋಟಿ ರೂ. ಮೌಲ್ಯದ ಕಾಮಗಾರಿ ನೀಡುವ ಮೂಲಕ ಬಹುದೊಡ್ಡ ಹಗರಣ ಮಾಡಲಾಗಿದೆ ಎಂಬುದು ಆರೋಪ.

198 ವಾರ್ಡ್‌ಗಳಲ್ಲೂ ನೀಡಲಾಗಿದೆ

198 ವಾರ್ಡ್‌ಗಳಲ್ಲೂ ನೀಡಲಾಗಿದೆ

198 ವಾರ್ಡ್‌ಗಳಲ್ಲಿಯೂ ಕೆಆರ್‌ಐಡಿಎಲ್‌ಗೆ ಕಾಮಗಾರಿ ನೀಡಲಾಗಿದೆ. ಐದು ವರ್ಷಗಳಲ್ಲಿ 21,653 ಕೋಟಿ ಮೌಲ್ಯದ 63,629 ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ನೀಡಲಾಗಿದ್ದು, ಇದರಲ್ಲಿ 10,018 ಕೋಟಿ ರೂ. ಮೌಲ್ಯದ 28,314 ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಉಳಿದ ಕಾಮಗಾರಿ ಪ್ರಗತಿಯಲ್ಲಿದೆ.

ಶೇ 10ರಷ್ಟು ಕಮೀಷನ್ ಪಡೆಯಲಾಗಿದೆ

ಶೇ 10ರಷ್ಟು ಕಮೀಷನ್ ಪಡೆಯಲಾಗಿದೆ

ಉದ್ದೇಶಪೂರ್ವಕವಾಗಿ ಒಂದೇ ಸಂಸ್ಥೆಗೆ ಅನೇಕ ಕಾಮಗಾರಿಗಳನ್ನು ನೀಡಲಾಗಿದೆ. ಪ್ರತಿ ಯೋಜನೆಯಲ್ಲಿಯೂ ಶೇ 10ರಷ್ಟು ಕಮೀಷನ್ ಪಡೆಯಲಾಗಿದೆ. ಪಾಲಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಇದು ಉದಾಹರಣೆಯಾಗಿದೆ ಎಂದು ಬೆಂಗಳೂರು ನವ ನಿರ್ಮಾಣ ಪಕ್ಷ ಆರೋಪಿಸಿದೆ.

ವೆಬ್‌ಸೈಟ್‌ನಲ್ಲಿ ಮಾಹಿತಿ

ವೆಬ್‌ಸೈಟ್‌ನಲ್ಲಿ ಮಾಹಿತಿ

ಬೆಂಗಳೂರು ನವ ನಿರ್ಮಾಣ ಪಕ್ಷ ನಗರದ ವಾರ್ಡ್‌ನಲ್ಲಿ ನಡೆದಿರುವ ಕಾಮಗಾರಿಗಳನ್ನು ವಾರ್ಡ್‌ವಾರು ವಿಂಗಡನೆ ಮಾಡಿ ವೆಬ್‌ಸೈಟ್‌ನಲ್ಲಿ ಹಾಕಿದೆ. ಜನರು ತಮ್ಮ ವಾರ್ಡ್‌ನಲ್ಲಿ ನಡೆದಿರುವ ಕಾಮಗಾರಿಗಳ ವಿವರಗಳನ್ನು ಇಲ್ಲಿ ಪಡೆಯಬಹುದಾಗಿದೆ.

English summary
Bengaluru NavaNirmana Party (BNP) has alleged that in the last five years BBMP several projects given to a single contractor. Karnataka Rural Infrastructure Development Ltd (KRIDL) bagged projects without any tender process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X