ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ 12 ರಸ್ತೆಗಳ ನಿರ್ವಹಣೆ ಕೆಆರ್‌ಡಿಸಿಎಲ್‌ ಪಾಲು

|
Google Oneindia Kannada News

ಬೆಂಗಳೂರು, ನವೆಂಬರ್ 30 : ಬೆಂಗಳೂರು ನಗರದ 12 ವಾಹನ ದಟ್ಟಣೆ ಹೆಚ್ಚಿರುವ ರಸ್ತೆಗಳ ನಿರ್ವಹಣೆ ಕೆಆರ್‌ಡಿಸಿಎಲ್‌ ಪಾಲಾಗಿದೆ. ಕರ್ನಾಟಕ ಸರ್ಕಾರ ರಸ್ತೆಗಳನ್ನು ಹಸ್ತಾಂತರ ಮಾಡಿ ಆದೇಶ ಹೊರಡಿಸಿದೆ.

ಪರ-ವಿರೋಧ ಚರ್ಚೆಗಳ ನಡುವೆಯೇ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು 5 ವರ್ಷಗಳ ಅವಧಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌)ಕ್ಕೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ರಸ್ತೆಗಳು ಇವೆ.

ಗೊರಗುಂಟೆಪಾಳ್ಯದಲ್ಲಿ ಶೀಘ್ರವೇ ಸಿಗ್ನಲ್ ರಹಿತ ರಸ್ತೆ ಗೊರಗುಂಟೆಪಾಳ್ಯದಲ್ಲಿ ಶೀಘ್ರವೇ ಸಿಗ್ನಲ್ ರಹಿತ ರಸ್ತೆ

'ಬೆಂಗಳೂರು ವಿಶೇಷ ಮೂಲ ಸೌಕರ್ಯ ಯೋಜನೆ'ಗಾಗಿ 477.29 ಕೋಟಿ ರೂ. ಹಣವನ್ನು ಮೀಸಲಿಡಲಾಗಿತ್ತು. ಈಗ ಹಣ ಅನುದಾನ ಸಹ ಕೆಆರ್‌ಡಿಸಿಎಲ್ ಪಾಲಾಗಲಿದೆ. ಪ್ರತಿ ರಸ್ತೆ ವ್ಯಾಪ್ತಿಗೆ ಒಂದು ಕಾರಿಡಾರ್ ಎಂದು ಮಾಡಿ, ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ.

ಬೆಂಗಳೂರು-ಕನಕಪುರ 4 ಪಥದ ರಸ್ತೆ ಕಾಮಗಾರಿ ಮತ್ತೆ ಆರಂಭ ಬೆಂಗಳೂರು-ಕನಕಪುರ 4 ಪಥದ ರಸ್ತೆ ಕಾಮಗಾರಿ ಮತ್ತೆ ಆರಂಭ

Road

ನಗರದ ರಸ್ತೆಗಳ ನಿರ್ವಹಣೆ ಹೊಣೆ ಬಿಬಿಎಂಪಿಯದ್ದು. ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ಸ್ಥಳೀಯ ಆಡಳಿತ ನೋಡಿಕೊಳ್ಳಬೇಕು. ಆದರೆ, ಕರ್ನಾಟಕ ಸರ್ಕಾರ ಬೆಂಗಳೂರು ನಗರದ 12 ಪ್ರಮುಖ ರಸ್ತೆಗಳ ನಿರ್ವಹಣೆಯನ್ನು ಕೆಆರ್‌ಡಿಸಿಎಲ್‌ಗೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆ; ಬೆಂಗಳೂರಿನ 20 ರಸ್ತೆ ಅಭಿವೃದ್ಧಿ ಸ್ಮಾರ್ಟ್‌ ಸಿಟಿ ಯೋಜನೆ; ಬೆಂಗಳೂರಿನ 20 ರಸ್ತೆ ಅಭಿವೃದ್ಧಿ

ಕೆಆರ್‌ಡಿಸಿಎಲ್ ಫುಟ್ ಪಾತ್ ನಿರ್ಮಾಣ, ಸೈಕಲ್ ಮತ್ತು ಬಸ್ ಲೇನ್ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಿದೆ. ರಸ್ತೆಗಳು ಗುಂಡಿ ಮುಕ್ತವಾಗಿರುವಂತೆ ನೋಡಿಕೊಳ್ಳಲಿದೆ. ಹೊರವರ್ತುಲ ರಸ್ತೆ ಸೇರಿದಂತೆ 12 ರಸ್ತೆಗಳು ಈ ವ್ಯಾಪ್ತಿಗೆ ಸೇರುತ್ತವೆ.

Recommended Video

Mask ಧರಿಸದವರಿಗೆ Fine ಕೇಳಿದ್ರೆ ಏನಾಗುತ್ತೆ ಗೊತ್ತಾ | Oneindia Kannada

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 13 ಸಾವಿರ ಕಿ. ಮೀ. ರಸ್ತೆ ಇದೆ. ಇವುಗಳಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳು ಸೇರಿವೆ. ವಾಹನ ದಟ್ಟಣೆ ಹೆಚ್ಚಿರುವ ಕಾರಿಡಾರ್ ನಿರ್ವಹಣೆ ಮಾಡಲು ಪಾಲಿಕೆಗೆ ಪ್ರತ್ಯೇಕವಾದ ಅನುದಾನವಿಲ್ಲ. ಆದ್ದರಿಂದ, ನಿರ್ವಹಣೆ ಹಸ್ತಾಂತರ ಮಾಡಲಾಗಿದೆ ಎಂಬ ವಾದವೂ ಕೇಳಿ ಬರುತ್ತಿದೆ.

English summary
Karnataka Road Development Corporation (KRDCL) will maintain 12 road of the Bengaluru city for next 5 years. Roads which see the maximum volume of traffic will developed by KRDCL.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X