ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ನಿಯಂತ್ರಣಕ್ಕೆ ಬೆಂಗಳೂರು ಸುತ್ತ ನಾಲ್ಕು ಟೋಲ್ ರಸ್ತೆಗಳು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 30: ನಗರದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ವಿಪರೀತವಾಗುತ್ತಿದೆ. ಅದರ ಜತೆಗೆ ನಿಯಂತ್ರಣಕ್ಕಾಗಿ ಎಷ್ಟೇ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಿ, ರಸ್ತೆಗಳನ್ನು ಸುಂದರವಾಗಿ ಮಾಡಿದರೂ ಟ್ರಾಫಿಕ್‌ ಜಾಮ್‌ಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

ಇದೀಗ ಟ್ರಾಫಿಕ್ ನಿಯಂತ್ರಣಕ್ಕೆ ಮತ್ತೊಂದು ಮಾಸ್ಟರ್ ಪ್ಲಾನ್ ತಯಾರಿಸಿದೆ ಅದೇನಂತೀರಾ ಬೆಂಗಳೂರು ಸುತ್ತ ನಾಲ್ಕು ಟೋಲ್ ರಸ್ತೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೆಆರ್ ಡಿಸಿಎಲ್ ಮೂಲಕ ರಸ್ತೆ ಟೋಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ.

ನೈಸ್‌ ರಸ್ತೆಯ 2 ಮಾರ್ಗದಲ್ಲಿ ಟೋಲ್‌ ಪ್ಲಾಜಾ ವಿಸ್ತರಣೆ: ಎಲ್ಲೆಲ್ಲಿ? ನೈಸ್‌ ರಸ್ತೆಯ 2 ಮಾರ್ಗದಲ್ಲಿ ಟೋಲ್‌ ಪ್ಲಾಜಾ ವಿಸ್ತರಣೆ: ಎಲ್ಲೆಲ್ಲಿ?

ಭಾರಿ ಸರಕು ಸಾಗಣೆ ವಾಹನಗಳು ಸೇರಿದಂತೆ ಬೆಂಗಳೂರು ನಗರಕ್ಕೆ ಬಂದು ಹೋಗುವ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ, ಇವುಗಳ ಜತೆಗೆ ದೇವನಹಳ್ಳಿ ಏರ್‌ಪೋರ್ಟ್ ತಕುಪಲು ಬೆಂಗಳೂರು ನಗರದೊಳಗೆ ಬಂದು ಹೋಗುವ ವಾಹನಗಳು ವಿಪರೀತವಾಗಿದೆ.

ನಗರದೊಳಗೆ ಬರದೆ ಏರ್‌ಪೋರ್ಟ್‌ಗೆ ತೆರಳಲು ವ್ಯವಸ್ಥೆ

ನಗರದೊಳಗೆ ಬರದೆ ಏರ್‌ಪೋರ್ಟ್‌ಗೆ ತೆರಳಲು ವ್ಯವಸ್ಥೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳು ನಗರದೊಳಗೆ ಬರದೆ ನೇರವಾಗಿ ಏರ್‌ಪೋರ್ಟ್ ಗೆ ತೆರಳುವ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿದೆ.

ನಾಲ್ಕು ಟೋಲ್ ರಸ್ತೆಗಳು ಎಲ್ಲೆಲ್ಲಿ?

ನಾಲ್ಕು ಟೋಲ್ ರಸ್ತೆಗಳು ಎಲ್ಲೆಲ್ಲಿ?

ಹೊಸಕೋಟೆ, ಬೂದಿಗೆರೆ, ಮೈಲೇನಹಳ್ಳು, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಹಾರೋಹಳ್ಳಿ, ಉರುಗನದೊಡ್ಡಿ, ಕೆಐಎಡಿಬಿ ಕೈಗಾರಿಕಾ ಪ್ರದೇಶ, ಜಿಗಣಿ, ಆನೇಕಲ್ ರಸ್ತೆ, ಆನೇಕಲ್, ಅತ್ತಿಬೆಲೆ, ಸರ್ಜಾಪುರ, ವರ್ತೂರು, ವೈಟ್‌ಫೀಲ್ಡ್, ಹೊಸ ಕೋಟೆ ರಸ್ತೆ, ನೆಲಮಂಗಲ, ಮಧುರೆ, ಬ್ಯಾಥಾ ಮಾರ್ಗದಲ್ಲಿ ಟೋಲ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ.

ಏರ್‌ಪೋರ್ಟ್‌ ಬಳಿ ಬಿಎಂಟಿಸಿ ಬಸ್‌ಗಳು ಸದ್ಯಕ್ಕೆ ಟೋಲ್‌ ಕಟ್ಟಬೇಕಿಲ್ಲ ಏರ್‌ಪೋರ್ಟ್‌ ಬಳಿ ಬಿಎಂಟಿಸಿ ಬಸ್‌ಗಳು ಸದ್ಯಕ್ಕೆ ಟೋಲ್‌ ಕಟ್ಟಬೇಕಿಲ್ಲ

ಟೋಲ್ ಲೆಕ್ಕಾಚಾರ ಹೀಗಿದೆ

ಟೋಲ್ ಲೆಕ್ಕಾಚಾರ ಹೀಗಿದೆ

ಈ ನಾಲ್ಕು ಟೋಲ್ ರಸ್ತೆಗಳನ್ನು ಅಭಿವೃದ್ಧಪಡಿಸಲು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಸರ್ಕಾರ ಮುಂದಾಗಿದೆ. ಬಳಿಕ ಟೋಲ್ ಸಂಗ್ರಹದಿಂದ ಬರುವ ಸಂಪನ್ಮೂಲದಿಂದ ಶೇ.50ರಷ್ಟು ಸಾಲ ಮತ್ತು ಬಡ್ಡಿಯನ್ನು ಮರುಪಾವತಿ ಮಾಡುವುದು, ಉಳಿದ ಶೇ.50ರಷ್ಟು ಸಾಲ ಮತ್ತು ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ.

English summary
To curb traffic jam in Bengaluru city, Karnataka Road Development Corporation Limited is planning to develop four new roads with toll surrounding the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X