ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ. ಆರ್. ಪುರ ಕದನ; 4 ಬಿಬಿಎಂಪಿ ಸದಸ್ಯರನ್ನು ಉಚ್ಚಾಸಿದ ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ನವೆಂಬರ್ 20 : ಕೆ. ಆರ್. ಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕದನ ರಂಗೇರಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರು ಬಿಬಿಎಂಪಿ ಸದಸ್ಯರನ್ನು ಕಾಂಗ್ರೆಸ್ ಉಚ್ಛಾಟನೆ ಮಾಡಿದೆ. ಡಿಸೆಂಬರ್‌ 5ರಂದು ಉಪ ಚುನಾವಣೆ ನಡೆಯಲಿದೆ.

ಬುಧವಾರ ಕರ್ನಾಟಕ ಕಾಂಗ್ರೆಸ್ ನಾಲ್ವರು ಬಿಬಿಎಂಪಿ ಸದಸ್ಯರನ್ನು ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ. ಈ ಮುಖಂಡರುಗಳು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಕಾಂಗ್ರೆಸ್ ಬಿಡಲು ಇದ್ದ ಕಾರಣಗಳನ್ನು ಬಿಚ್ಚಿಟ್ಟ ಎಸ್‌ಟಿ ಸೋಮಶೇಖರ್ ಕಾಂಗ್ರೆಸ್ ಬಿಡಲು ಇದ್ದ ಕಾರಣಗಳನ್ನು ಬಿಚ್ಚಿಟ್ಟ ಎಸ್‌ಟಿ ಸೋಮಶೇಖರ್

ವಾರ್ಡ್ ನಂ 53 (ಬಸವಪುರ) ಜಯಪ್ರಕಾಶ್, ವಾರ್ಡ್ ನಂ 55 (ದೇವಸಂದ್ರ) ಶ್ರೀಕಾಂತ್, ವಾರ್ಡ್‌ ನಂ 56 (ಎ. ನಾರಾಯಣಪುರ) ಸುರೇಶ್, ವಾರ್ಡ್‌ ನಂ 81 (ವಿಜ್ಞಾನ ನಗರ) ಎಚ್. ಜಿ. ನಾಗರಾಜ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ಉಪ ಕದನಕ್ಕೆ ಮುನ್ನ ಬಂದ ಐಟಿ, ಜೆಡಿಎಸ್ ಅಭ್ಯರ್ಥಿಗೆ ನೋಟಿಸ್ ಉಪ ಕದನಕ್ಕೆ ಮುನ್ನ ಬಂದ ಐಟಿ, ಜೆಡಿಎಸ್ ಅಭ್ಯರ್ಥಿಗೆ ನೋಟಿಸ್

KR Puram By Elections Congress Expels Leaders

ಕೆ. ಆರ್. ಪುರ ಉಪ ಚುನಾವಣೆಯಲ್ಲಿ ನಾರಾಯಣಸ್ವಾಮಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಬೈರತಿ ಬವಸರಾಜ ಕಣದಲ್ಲಿದ್ದಾರೆ. ನಾರಾಯಣಸ್ವಾಮಿ ವಿರುದ್ಧ ನಾಲ್ವರು ಬಿಬಿಎಂಪಿ ಸದಸ್ಯರು ಕೆಲಸ ಮಾಡುತ್ತಿದ್ದಾರೆ ಎಂಬ ದೂರುಗಳು ಕೆಪಿಸಿಸಿಗೆ ಬಂದಿತ್ತು.

ಸಚಿವ ಸ್ಥಾನ ಉಳಿಯಬೇಕಾದ್ರೆ ಚುನಾವಣೆ ಗೆಲ್ಲಿಸಬೇಕು- ಬಿಎಸ್ ವೈ ಸಚಿವ ಸ್ಥಾನ ಉಳಿಯಬೇಕಾದ್ರೆ ಚುನಾವಣೆ ಗೆಲ್ಲಿಸಬೇಕು- ಬಿಎಸ್ ವೈ

ನಾಲ್ವರು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ.

English summary
Karnataka Congress expelled 4 BBMP corporator's who worked against party candidate in KR Puram by elections. Narayana Swamy party candidate in by election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X