ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್‌ ಮೆಟ್ರೋ ಮಾರ್ಗದ ಸರ್ವೇ ಆರಂಭ, ನಿಲ್ದಾಣಗಳೆಷ್ಟು?, ಸಮೀಕ್ಷೆ ಹೇಗೆ?

|
Google Oneindia Kannada News

ಬೆಂಗಳೂರು, ಏ.25: ಕೆಆರ್‌ಪುರಂ-ಕೆಂಪೇಗೌಡ ಏರ್‌ಪೋರ್ಟ್‌ ಮಾರ್ಗದಲ್ಲಿ ಸರ್ವೇ ಆರಂಭಗೊಂಡಿದೆ.

ಏ.23ರಿಂದಲೇ ಹೊರಮಾವು, ಚನ್ನಸಂದ್ರ, ಕಲ್ಯಾಣನಗರ, ಎಚ್‌ಆರ್‌ಬಿಆರ್‌ ಲೇಔಟ್‌, ನಾಗವಾರ, ವೀರಣ್ಣಪಾಳ್ಯ ಮತ್ತು ಕೆಂಪಾಪುರದಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೋ ನಿಗಮ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಕಾರ್ಯವನ್ನು ಪೂರ್ಣಗೊಳಿಸಿ ವರದಿಯನ್ನು ನೀಡಲಿದೆ.

ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್ ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್

ಕೆಆರ್‌ಪುರಂ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ 16 ನಿಲ್ದಾಣಗಳ ಪೈಕಿ ಎಂಟು ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಶೀಘ್ರವೇ ಆರಂಭಗೊಳ್ಳಲಿದ್ದು, ಈಗಾಗಲೇ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

2018ರಲ್ಲೇ ಅನುಮತಿ ಸಿಕ್ಕಿತ್ತು

2018ರಲ್ಲೇ ಅನುಮತಿ ಸಿಕ್ಕಿತ್ತು

2018ರಲ್ಲೇ 2ನೇ ಹಂತದ ಮೆಟ್ರೋ ಭೂಸ್ವಾಧೀನಕ್ಕೆ ಅನುಮತಿ ಸಿಕ್ಕಿತ್ತು ಈ ಹಿನ್ನೆಲೆಯಲ್ಲಿ ಇದೀಗ ಸರ್ವೇ ಕಾರ್ಯ ಆರಂಭವಾಗಿದೆ. ಎಚ್‌ಆರ್‌ಬಿಆರ್‌, ಚನ್ನಸಂದ್ರ, ನಾಗವಾರ ಸೇರಿದಂತೆ ಪ್ರತಿ 8 ನಿಲ್ದಾಣಗಳಿಗೂ ತಲಾ 2 ಸಾವಿರ ಚದರ ಮೀಟರ್‌ನಷ್ಟು ಪ್ರದೇಶದ ಅಗತ್ಯವಿದೆ.ಅಗತ್ಯಕ್ಕೆ ತಕ್ಕಂತೆ ಭೂಸ್ವಾಧೀನ ಮಾಡಿಕೊಳ್ಳಲು ಮೆಟ್ರೋ ನಿಗಮ ನಿರ್ಧರಿಸಿದೆ.

ಒಟ್ಟು 29 ನಿಲ್ದಾಣಗಳು

ಒಟ್ಟು 29 ನಿಲ್ದಾಣಗಳು

ಮೆಟ್ರೋ 2ನೇ ಹಂತದ ಯೋಜನೆಯಲ್ಲಿ ಸಿಲ್ಕ್‌ಬೋರ್ಡ್‌-ಕೆಆರ್‌ಪುರಂ ಮಾರ್ಗ 13 ನಿಲ್ದಾಣ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ 16 ನಿಲ್ದಾಣ ಹೀಗೆ ಒಟ್ಟು 29 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು

ಏರ್‌ಪೋರ್ಟ್‌ ಮೆಟ್ರೋ ಮಾರ್ಗದಲ್ಲಿ ಕಸ್ತೂರಿನಗರ ಕೈಬಿಟ್ಟ ಬಿಎಂಆರ್‌ಸಿಎಲ್

ಏರ್‌ಪೋರ್ಟ್‌ ಮೆಟ್ರೋ ಮಾರ್ಗದಲ್ಲಿ ಕಸ್ತೂರಿನಗರ ಕೈಬಿಟ್ಟ ಬಿಎಂಆರ್‌ಸಿಎಲ್

ಬೆಂಗಳೂರು ಮೆಟ್ರೋ ನಿಗಮವು ಕೆಂಪೇಗೌಡ ಏರ್‌ಪೋರ್ಟ್‌ಗೆ ನಿರ್ಮಿಸುತ್ತಿರುವ ಎರಡನೇ ಹಂತದ ಮೆಟ್ರೋ ಮಾರ್ಗದಿಂದ ಕಸ್ತೂರಿನಗರ ನಿಲ್ದಾಣವನ್ನು ಕೈಬಿಟ್ಟಿದೆ.

ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ ಏರ್‌ಪೋರ್ಟ್ ಮಾರ್ಗದಲ್ಲಿ 17 ನಿಲ್ದಾಣವನ್ನು ಗುರುತಿಸಲಾಗಿದೆ. ಒಟ್ಟು 33.4 ಕಿ.ಮೀ ವ್ಯಾಪ್ತಿಯಲ್ಲಿ 17 ನಿಲ್ದಾಣಗಳು ಬರಲಿವೆ. ಕೆಆರ್ ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಧ್ಯೆ ಕೆಆರ್ ಪುರಂ, ಚನ್ನಸಂದ್ರ, ಹೊರಮಾವು, ಕಲ್ಯಾಣನಗರ, ಎಚ್‌ಆರ್‌ಬಿಆರ್ ಲೇಔಟ್, ಎಚ್‌ಬಿಆರ್ ಲೇಔಟ್, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ ಕ್ರಾಸ್, ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು, ಕೋಗಿಲು ಕ್ರಾಸ್, ಪೆರಿಫೆರಲ್ ರಿಂಗ್ ರಸ್ತೆ, ಟ್ರಂಪೆಟ್ ಇಂಟರ್ ಸೆಕ್ಷನ್ ಹಾಗೂ ಕೆಐಎದಲ್ಲಿ ಎರಡು ನಿಲ್ದಾಣಗಳು ಬರಲಿವೆ.

ಏರ್‌ಪೋರ್ಟ್‌ನಲ್ಲಿ ಬರುವ ಎರಡು ನಿಲ್ದಾಣಗಳು ಸುರಂಗ ಮಾರ್ಗಗಳಾಗಿರುತ್ತವೆ. ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ ಕಸ್ತೂರಿನಗರ ನಿಲ್ದಾಣವನ್ನು ಕೈಬಿಟ್ಟಿದೆ.
ಮೆಟ್ರೋ ನಿಲ್ದಾಣ ನಿರ್ಮಿಸಲು ಜಾಗದ ಕೊರತೆ ಇರುವ ಕಾರಣ ನಿರ್ಮಾಣ ಯೋಜನೆ ಕೈಬಿಡಲಾಗಿದೆ. ಚನ್ನಸಂದ್ರ, ಹೊರಮಾವು, ಕಲ್ಯಾಣನಗರದಲ್ಲಿ ಇನ್ನೂ ಭೂಮಿ ಖರೀದಿಸಬೇಕಿದೆ.

ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣ

ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣ

ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಎರಡನೇ ಹಂತದಲ್ಲಿ ಬರುವ ಸುರಂಗ ಮಾರ್ಗವನ್ನು ಚಿಕ್ಕ ಗಾತ್ರದಲ್ಲಿ ನಿರ್ಮಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಎರಡನೇ ಹಂತದಲ್ಲಿ ಒಟ್ಟು 12ಸುರಂಗ ಮಾರ್ಗ ನಿಲ್ದಾಣಗಳು ಬರಲಿದೆ. ಮೊದಲ ಹಂತದ ಮೆಟ್ರೋಗಿಂತ ಚಿಕ್ಕದಾಗಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜಾಗದ ಅಭಾವದಿಂದಾಗಿ ಚಿಕ್ಕ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಎರಡನೇ ಹಂತದ ನಾಗವಾರ-ಗೊಟ್ಟಿಗೆರೆ ಮಾರ್ಗದಲ್ಲಿ 72.1 ಕಿ.ಮೀ ಸುರಂಗ ನಿಲ್ದಾಣಗಳು ಬರಲಿವೆ. ಬ್ಯಾಂಬೂ ಬಜಾರ್, ಪಾಟರಿ ರಸ್ತೆ, ಶಿವಾಜಿನಗರ, ಎಂಜಿ ರಸ್ತೆ, ವೆಲ್ಲಾರ ಜಂಕ್ಷನ್, ಮೈಕೋ ಲೇಔಟ್, ಲಾಂಗ್‌ಫರ್ಡ್ ಜಂಕ್ಷನ್, ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್ ಕಾಲೇಜು, ನಾಗವಾರ ನಿಲ್ದಾಣಗಳು ಸುರಂಗ ನಿಲ್ದಾಣಗಳಾಗಿವೆ.

ಸುರಂಗ ಮಾರ್ಗದ ಉದ್ದವನ್ನು 210 ಮೀಟರ್ ಕಡಿಮೆ ಮಾಡಲಾಗಿದೆ. ಮೊದಲೇ ಹಂತದ ಕಬ್ಬನ್ ಪಾರ್ಕ್, ವಿಧಾನಸೌಧ, ಸರ್‌ ಎಂವ ವಿಶ್ವೇಶ್ವರಯ್ಯ ನಿಲ್ದಾಣ, ಕೆಂಪೇಗೌಡ ನಿಲ್ದಾಣದಲ್ಲಿ 272 ಮೀ ಉದ್ದ, 24 ಮೀ ಅಗಲವಿದೆ.

English summary
State government and bmrcl are conducting joint survey for KR Puram-Airport Metro land
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X