ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಪಿಎಸ್ಸಿಯ ಎಸ್‌ಡಿಎ, ಎಫ್‌ಡಿಎ ಪರೀಕ್ಷೆಗಳು ಮುಂದೂಡಿಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 3: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಫೆ. 04 ರಂದು ನಡೆಸಲು ಉದ್ದೇಶಿಸಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳ ಪರೀಕ್ಷೆಯನ್ನು ಮುಂದೂಡಿದೆ.

ಈ ಸಂಬಂಧ ತನ್ನ ವೆಬ್ ಸೈಟ್ ನಲ್ಲಿ ಅಧಿಕೃತ ಪ್ರಕಟಣೆ ನೀಡಿರುವ ಕೆ.ಪಿ.ಎಸ್ಸಿ, ಫೆ.04 ರಂದು ನಡೆಸಲು ನಿಗಧಿಯಾಗಿದ್ದ ಎಫ್.ಡಿ.ಎ ಪರೀಕ್ಷೆಗಳನ್ನು ಪೋಸ್ಟ್ ಪೋನ್ ಮಾಡಿರುವುದಾಗಿ ಸ್ಪಷ್ಟಪಡಿಸಿದೆ. ಈ ಮಾಹಿತಿ ಆಧಾರಿಸಿ ಜಸ್ಟ್ ಕನ್ನಡ ಡಾಟ್ ಇನ್, ಕೆ.ಪಿ.ಎಸ್ಸಿ ಮೂಲವನ್ನು ಸಂಪರ್ಕಿಸಿದಾಗ, ಫೆ.04 ರಂದು ಬಂದ್ ನಡೆಸಲು ಕೆಲ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಹಿತದೃಷ್ಠಿ ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ಮುಂದೂಡುವುದು ಅನಿವಾರ್ಯ ಎಂದರು.

ಕೆಪಿಎಸ್‌ಸಿಯ ಎಫ್‌ಡಿಎ, ಎಸ್‌ಡಿಎ ಪರೀಕ್ಷೆ ಪ್ರವೇಶ ಪತ್ರ ಪ್ರಕಟಕೆಪಿಎಸ್‌ಸಿಯ ಎಫ್‌ಡಿಎ, ಎಸ್‌ಡಿಎ ಪರೀಕ್ಷೆ ಪ್ರವೇಶ ಪತ್ರ ಪ್ರಕಟ

ಎಫ್ ಡಿಎ, ಎಸ್ ಡಿಎ ಲಿಖಿತ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡ ಕೆಲ ದಿನಗಳ ಬಳಿಕವೇ ಈ ಪರೀಕ್ಷೆಗಳನ್ನು ಮುಂದೂಡಲಾಗುತ್ತದೆ ಎಂಬ ವದಂತಿ ಕೆಲವೆಡೆ ಹಬ್ಬಿತ್ತು. ಆದರೆ ಆಗ ಈ ವಿಷಯ ತಳ್ಳಿಹಾಕಿದ್ದ ಕೆಪಿಎಸ್ಸಿ ಈಗಾಗಲೇ ಪ್ರಕಟಿಸಿರುವ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರವೇ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದರು. ಆದರಂತೆ ವೇಳಾಪಟ್ಟಿ ಯಂತೆ ಎಫ್‌ಡಿಎ ಹುದ್ದೆಗಳಿಗೆ ಫೆಬ್ರವರಿ 4 ರಂದು ಹಾಗೂ ಎಸ್‌ಡಿಎ ಹುದ್ದೆಗಳಿಗೆ ಫೆಬ್ರವರಿ 11 ರಂದು ಲಿಖಿತ ಪರೀಕ್ಷೆ ನಡೆಸಲು ದಿನಾಂಕ ನಿಗಧಿಯಾಗಿತ್ತು.

KPSC postpones FDA, SDA exams

ಲಿಖಿತ ಪರೀಕ್ಷೆ ನಡೆಸಲು ಪೂರಕವಾಗಿ ಜನವರಿ 26ರ ಒಳಗೆ ಪರೀಕ್ಷೆಯ ಪ್ರವೇಶ ಪತ್ರವನ್ನು ಅಭ್ಯರ್ಥಿಗಳಿಗೆ ವೆಬ್‌ ಮೂಲಕ ಒದಗಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳ ಹಂಚಿಕೆ ಮತ್ತಿತರ ಕೆಲಸಗಳು ಕೂಡ ಪೂರ್ಣಗೊಂಡಿತ್ತು.

ಒಟ್ಟು 1, 812 ಹುದ್ದೆಗಳಿಗೆ ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆಯೇ ನೇಮಕಾತಿ ನಡೆಯಲಿದ್ದು, ಪ್ರಥಮ ದರ್ಜೆ ಸಹಾಯಕರು ಒಟ್ಟು 961 ಹುದ್ದೆ ಹಾಗೂ ದ್ವಿತೀಯ ದರ್ಜೆ ಸಹಾಯಕರು ಒಟ್ಟು 851 ಹುದ್ದೆಗಳ ನೇಮಕಾತಿಗೆ ಸೆಪ್ಟಂಬರ್ ನಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಹೊರಡಿಸಿತ್ತು ಎಂಬುದನ್ನು ಸ್ಮರಿಸಿಕೊಳ್ಳಬಹುದು.

ಆದರೆ ಇದೀಗ ಕೆಲ ಸಂಘಟನೆಗಳು ಫೆ.04 ರಂದು ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷೆ ಮುಂದೂಡಲಾಗಿದೆ.

English summary
Karnataka Public Service Commission has been postponed First and second Division Assistant exams which were scheduled on February 4 following Bengaluru bandh called by pro Kannada organizations seeking Mahadayi issue resolve.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X