ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಪಿಎಎಸ್ ಸಿ ಪ್ರಶ್ನೆ ಪತ್ರಿಕೆ ಲೀಕ್: ಪೊಲೀಸ್ ಕಾನ್‌ಸ್ಟೇಬಲ್ ಸೆರೆ

|
Google Oneindia Kannada News

ಬೆಂಗಳೂರು, ಜನವರಿ 27: ಕರ್ನಾಟಕ ಲೋಕ ಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಾಮೀಲಾಗಿರುವ ಪೊಲೀಸ್ ಪೇದೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ತಾಲೂಕಿನ ಅಗಡಿ ಗ್ರಾಮದ ಪೇದೆ ಬೆಂಗಳೂರಿನ ಜಿಲ್ಲಾ ಶಸಸ್ತ್ರ ಮೀಸಲು ಪಡೆಯಲ್ಲಿ ಕಾನ್‌ಸ್ಟೇಬಲ್ ಬಂಧಿತ ಆರೋಪಿ. ಮಂಗಳವಾರ ಬೆಳಗ್ಗೆ ಹಾವೇರಿ ತಾಲೂಕಿನಲ್ಲಿ ಆರೋಪಿ ಪೇದೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಬಂಧನಕ್ಕೆ ಒಳಗಾಗಿದ್ದ ಕೆಪಿಎಸ್ ಶಿ ಶೀಘ್ರ ಲಿಪಗಾರ್ತಿ ಸನಾ ಬೇಡಿ ವಾಟ್ಸಪ್ ಮೂಲಕ ಪ್ರಶ್ನೆ ಪತ್ರಿಕೆಯನ್ನು ಕಳುಹಿಸಿದ್ದಳು. ಪ್ರಶ್ನೆ ಪತ್ರಿಕೆ ಕುರಿತು ಬೇಡಿ ಜತೆ ಪೇದೆ ಚಾಟ್ ಮಾಡಿದ್ದ. ಸನಾ ಬೇಡಿಯ ವಾಟ್ಸಪ್ ಸಂದೇಶ ಮಾಹಿತಿ ಆಧರಿಸಿ ಪೇದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೆಪಿಎಸ್ ಸಿ ಹೆಬ್ಬಾಗಿಲಿನಿಂದಲೇ ಪ್ರಶ್ನೆ ಪತ್ರಿಕೆ ಲೀಕ್ : ಆಯೋಗದ ಇಬ್ಬರು ನೌಕರರು ಸೆರೆ !ಕೆಪಿಎಸ್ ಸಿ ಹೆಬ್ಬಾಗಿಲಿನಿಂದಲೇ ಪ್ರಶ್ನೆ ಪತ್ರಿಕೆ ಲೀಕ್ : ಆಯೋಗದ ಇಬ್ಬರು ನೌಕರರು ಸೆರೆ !

ಕೆಪಿಎಸ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಈವರೆಗೂ ಹದಿನೈದು ಆರೋಪಿಗಳನ್ನು ಬಂಧಿಸಿದ್ದು, 82 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಮೊದಲು ಪ್ರಶ್ನೆ ಪತ್ರಿಕೆಯು ಪರೀಕ್ಷಾ ಕೇಂದ್ರಗಳ ಭದ್ರತಾ ಕೊಠಡಿಗಳಲ್ಲಿ ಲೀಕ್ ಆಗಿತ್ತು. ಇದೀಗ ಕೆಪಿಎಸ್ ಸಿ ಕೇಂದ್ರ ಕಚೇರಿಯಿಂದಲೇ ಸೋರಿಕೆಯಾಗಿರುವುದು ಕೆಪಿಎಸ್ ಸಿ ಗೆ ನುಂಗುಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

KPSC Fda paper leak : constable arrested

Recommended Video

ಅಂಗಡಿಗಳ ಮುಂದೆ ರಾರಾಜಿಸಲಿದೆ ಕನ್ನಡ ಫಲಕ-ಇಲ್ಲದಿದ್ರೆ Trade License Cancel ! | Oneindia Kannada

ಬಂಧಿತ ಪ್ರಮುಖ ಆರೋಪಿಗಳಾದ ಚಂದ್ರು, ರಾಚಪ್ಪ ಹಾಗೂ ಸನಾ ಬೇಡಿಯ ಕರೆ ಮಾಹಿತಿ ಆಧರಿಸಿ ಬಂಧನ ಕಾರ್ಯಾಚರಣೆ ಮುಂದುವರೆದಿದ್ದು, ಮತ್ತಷ್ಟು ಆರೋಪಿಗಳು ಸಿಕ್ಕಿ ಬೀಳಲಿದ್ದಾರೆ. ಕೆಲ ದಿನಗಳ ಹಿಂದೆಯೇ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು, ಸಾಕಷ್ಟು ಅಭ್ಯರ್ಥಿಗಳನ್ನು ಸಂಪರ್ಕಿಸಿ ಹಣ ಪಡೆಯಲಾಗಿದೆ. ಹಣ ನೀಡಿ ಪ್ರಶ್ನೆ ಪತ್ರಿಕೆ ಪಡೆದವರಿಗೂ ಸಿಸಿಬಿ ಕಂಟಕ ಎದುರಾಗಿದೆ. ಇನ್ನು ಕೆಪಿಎಸ್ ಸಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
CCB police have arrested DAR constable, in the KPSC Paper leak case know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X