ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಟಿ ರಾಗಿಣಿ ದ್ವಿವೇದಿ ಈಗಲೂ ಬಿಜೆಪಿಯವರ ಸಂಪರ್ಕದಲ್ಲಿದ್ದಾರೆ

|
Google Oneindia Kannada News

ಬೆಂಗಳೂರು, ಸೆ. 09: ಡ್ರಗ್ ಮಾಫಿಯಾ ನಂಟಿನ ಹಿನ್ನೆಲೆ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ವಿಚಾರದಲ್ಲಿ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿವೆ. ನಟಿ ರಾಗಿಣಿ ನಮ್ಮ ಪಕ್ಷದ ಸದಸ್ಯರಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆಗೆ ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹ್ಮದ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಿಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಬಿಜೆಪಿ ನಾಯಕರೊಂದಿಗಿನ ಒಡನಾಟದ ಕುರಿತು ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಡ್ರಗ್ ಮಾಫಿಯಾ ನಂಟಿನ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಅವರು ಇವತ್ತಿಗೂ ಬಿಜೆಪಿಯವರ ಸಂಪರ್ಕದಲ್ಲೇ ಇದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಈಗ ತನಿಖೆ ನಡೆಯುತ್ತಿದೆ ಅದು ಮತ್ತಷ್ಟು ತೀವ್ರವಾಗಬೇಕು ಎಂದು ಆಗ್ರಹಿಸಿದ್ದಾರೆ.

KPCC Working President Saleem Ahmed Made Allegations That Ragini Is Still In Touch With Bjp Leaders

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಗಿಣಿ ಜೊತೆ ಚುನಾವಣೆಗಳಲ್ಲಿ ಪ್ರಚಾರ ಮಾಡಿದ್ದಾರೆ. ಹೀಗಿರುವಾಗ ಅವರು ಬಿಜೆಪಿ ಪಕ್ಷದ ಸದಸ್ಯರಲ್ಲ ಎಂದು ಹೇಳುತ್ತಾರೆ? ಸಚಿವ ಸಿ.ಟಿ. ರವಿ ಅವರು ಕೂಡ ಡ್ರಗ್ ತನಿಖೆಯಲ್ಲಿ ಒತ್ತಡವಿದೆ ಎಂದು ಹೇಳಿದ್ದರು ಎಂದಿದ್ದಾರೆ.

KPCC Working President Saleem Ahmed Made Allegations That Ragini Is Still In Touch With Bjp Leaders

Recommended Video

ಚಿತ್ರೋದ್ಯಮ ಬಂದ್ ? ಇವರಿಗೆಲ್ಲ ತುಂಬಾ loss! | Shivarajkumar | Filmibeat Kannada

ಯುವಕರು ದಾರಿ ತಪ್ಪಲು ಈ ಡ್ರಗ್ಸ್ ಮಾಫಿಯಾ ಕಾರಣವಾಗಿದೆ. ಸಿಎಂ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ ಅವರು ವಿಶೇಷ ಟಾಸ್ಕ್ ಪೋರ್ಸ್ ರಚಿಸಬೇಕು. ಹೊಸ ಸಮಿತಿ ಮಾಡಿ ಡ್ರಗ್ ಮಾಫಿಯಾ ತಡೆಗಟ್ಟುವ ಬಗ್ಗೆ ಗಮನಹರಿಸಬೇಕು. ಬೆಂಗಳೂರು ವಿಶ್ವ ಡ್ರಗ್ ಸಿಟಿಯಾಗುತ್ತಿದೆ. ಮಾಫಿಯಾದಲ್ಲಿ ಯಾರೇ ಇರಲಿ ಅವರ ಮೇಲೆ ಕ್ರಮವಾಗಬೇಕು. ಡ್ರಗ್ಸ್ ದಂಧೆಗೆ ಕಡಿವಾಣ ಹಾಕಬೇಕು. ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲೀಂ ಅಹ್ಮದ್ ಒತ್ತಾಯ ಮಾಡಿದ್ದಾರೆ.

English summary
KPCC working president Salim Ahmed has made serious allegations that actress Ragini, who is being detained by the drug mafia, is still in touch with the BJP leaders. Know more about his allegation,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X