ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಪಿಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿಗೆ 50ಕ್ಕೂ ಹೆಚ್ಚು ಬೆದರಿಕೆ ಕರೆ

|
Google Oneindia Kannada News

ಬೆಂಗಳೂರು, ಜೂನ್ 12: ಕೆಪಿಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಮಹಿಳಾ ನಾಯಕರಿಯರು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 'ಭವ್ಯಾ ಅವರಿಗೆ ತೇಜೋವಧೆ ಮಾಡುವ 50ಕ್ಕೂ ಹೆಚ್ಚು ಕರೆಗಳು ಬಂದಿವೆ, ಈ ಬಗ್ಗೆ ಪೊಲೀಸರಿಗೆ ದೂರು ಕೊಡಲಾಗಿದೆ, ಇದು ಒಬ್ಬ ಮಹಿಳೆ ಅಲ್ಲದೇಶದ ಮಹಿಳೆಯರ ಪ್ರಶ್ನೆ' ಎಂದರು.

ಬಿಂದು ಗೌಡ ಅವರ ವಿರುದ್ಧವೂ ತೇಜೋವಧೆ ಮಾಡುತ್ತಿದ್ದಾರೆ, ನಮ್ಮ ನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನೂ ಅವಹೇಳನ ಮಾಡುತ್ತಿದ್ದಾರೆ ಎಂದು ದೂರಿದರು.

KPCC Spokesman Bhavya Narasimhamurthy Is Eeceiving Life Threatening Calls

ನಕಲಿ ಖಾತೆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡಲಾಗುತ್ತಿದೆ, ಇದರ ಹಿಂದಿರುವವರು ಯಾರು, ಅವರನ್ನು ಪತ್ತೆ ಮಾಡಲು ಪೊಲೀಸರಿಂದ ಸಾಧ್ಯವಾಗುತ್ತಿಲ್ಲವೇ?, ಇವರಿಗೆ ತೊಂದರೆ ಕೊಡುತ್ತಿರುವವರು ಯಾರು ಎಂಬುದು ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.

'ಧೈರ್ಯವಿದ್ದರೆ ಚರ್ಚೆಗೆ ಬನ್ನಿ, ಅದನ್ನು ಬಿಟ್ಟು ತೇಜೋವಧೆ ಮಾಡಬೇಡಿ, ಇದರ ಹಿಂದೆ ಯುವ ರಾಜಕಾರಣಿಗಳು ಇರುವುದು ತಿಳಿದುಬಂದಿದೆ, ಶೋಭಾ, ಶಶಿಕಲಾ ಜೊಲ್ಲೆ ಇಲ್ವಾ ಯಾಕೆ ಅವರ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, 'ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ, ಮಹಿಳೆಯರನ್ನು ಲಕ್ಷ್ಮೀ, ಸರಸ್ವತಿ ಎಂದು ಪೂಜೆ ಮಾಡುತ್ತೇವೆ, ನಮಗೆ ಪೂಜೆ ಬೇಡ ಮರ್ಯಾದಿ ಕೊಟ್ಟರು ಸಾಕು' ಎಂದು ಹೇಳಿದರು.

Recommended Video

Renukacharya ಅವರು ಹೋಮ ಮಾಡಿ ಸಂಕಷ್ಟಕ್ಕೀಡಾದರು | Oneindia Kannada

ಸಾಮಾಜಿಕ ಜಾಲತಾಣ ಸುರಕ್ಷಿತವಾಗಿಲ್ಲ, ಮಹಿಳೆಯರಿಗೆ ಇಷ್ಟೊಂದು ಬೆದರಿಕೆ ಕರೆ ಬರುತ್ತಿದೆ ಎಂದರೆ ಹೇಗೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಬಿಜೆಪಿಯಲ್ಲೂ ಮಹಿಳೆಯರಿದ್ದಾರೆ, ಅವರ ಬಗ್ಗೆಯೂ ಈ ರೀತಿ ಕರೆ ಬಂದರೆ ಹೇಗೆ, ಆ ರೀತಿ ಮಹಿಳೆಯರನ್ನು ಹೆದರಿಸುವುದು ಸರಿಯಲ್ಲ, ಸದಸನದಲ್ಲೂ ಇದನ್ನು ಗಮನಕ್ಕೆ ತರುತ್ತೇನೆ ಎಂದರು ಹೇಳಿದರು.

English summary
Congress Women Leaders Soumya Reddy, Pushpa Amaranath, Bhavya Narasimhamurthy conducts press meet at KPCC office to condemn KPCC spokesman Bhavya Narasimhamurthy receiving life threatening calls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X