ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡ ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ಮೇ 8: ತಾವು ನೀಡಿದ ರಚನಾತ್ಮಕ ಸಲಹೆ ಸ್ವೀಕರಿಸುವ ಬದಲು, ತಾವು ಎತ್ತಿ ತೋರಿಸುವ ಲೋಪದೋಷಗಳನ್ನು ತಿದ್ದಿಕೊಳ್ಳುವ ಬದಲು ಸಚಿವರುಗಳು ತಮ್ಮ ವಿರುದ್ಧ ಪ್ರತಿದಾಳಿ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಲಾಕ್ ಡೌನ್ ನಿಂದ ವೃತ್ತಿ ಆಧಾರಿತ ಸಮುದಾಯಗಳು, ರೈತರು, ಕಾರ್ಮಿಕರು, ಉದ್ದಿಮೆದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಶುಕ್ರವಾರ ಕರೆದಿದ್ದ ಕಾಂಗ್ರೆಸ್ ಸೇರಿದಂತೆ ನಾನಾ ಪಕ್ಷಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದ ಡಿಕೆ ಶಿವಕುಮಾರ್ ಅವರು, 'ಪ್ರತಿಪಕ್ಷವಾಗಿ ನಾವು ನಮ್ಮ ಕರ್ತವ್ಯ ಮಾಡಬಾರದೇ? ಸರಕಾರದ ಅನ್ಯಾಯ, ಅಕ್ರಮಗಳನ್ನು ನೋಡಿಕೊಂಡು ಸುಮ್ಮನ್ನಿರಬೇಕೇ' ಎಂದು ಪ್ರಶ್ನಿಸಿದರು.

'ಅಧ್ಯಕ್ಷನಾಗಿದ್ದೇನೆ ಅಂತಾ ತೋರಿಸಲಿಕ್ಕೆ ಮಾತ್ರ ಡಿಕೆಶಿ ಆರೋಪಗಳು''ಅಧ್ಯಕ್ಷನಾಗಿದ್ದೇನೆ ಅಂತಾ ತೋರಿಸಲಿಕ್ಕೆ ಮಾತ್ರ ಡಿಕೆಶಿ ಆರೋಪಗಳು'

ನಾಚಿಕೆಗೇಡಿನ ಸಂಗತಿ

ನಾಚಿಕೆಗೇಡಿನ ಸಂಗತಿ

‘ನೀವು ಪ್ರತಿಪಕ್ಷ ನಾಯಕ ಹಾಗೂ ಪಕ್ಷದ ಅಧ್ಯಕ್ಷರಾಗಿದ್ದಾಗ ಸುಮ್ಮನೇ ಕೂತಿದ್ದಿರಾ? ಸರ್ಕಾರದ ಲೋಪದೋಷಗಳನ್ನು ಎತ್ತಿ ಹಿಡಿಯಲಿಲ್ಲವೇ? ನೀವು ಮಾಡಿದ ಕೆಲಸವನ್ನೇ ಇಂದು ನಾವು ಮಾಡಿದರೇ ಅದು ತಪ್ಪೇ? ನಮ್ಮ ಸಲಹೆ ಹಾಗೂ ಟೀಕೆಗಳನ್ನು ಸ್ವೀಕರಿಸುವ ವಿಶಾಲ ಮನೋಭಾವ ನಿಮ್ಮ ಸಚಿವರುಗಳಿಗೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ' ಎಂದು ಕಿಡಿಕಾರಿದರು.

ಮರು ಪ್ಯಾಕಿಂಗ್ ಮಾಡಿ ವಂಚನೆ

ಮರು ಪ್ಯಾಕಿಂಗ್ ಮಾಡಿ ವಂಚನೆ

ಸರ್ಕಾರದ ವತಿಯಿಂದ ಅಕ್ಷಯ ಫೌಂಡೇಷನ್ ನೀಡಿದ ಆಹಾರ ಪದಾರ್ಥಗಳ ಮೇಲೆ ಬಿಜೆಪಿ ನಾಯಕರಾದ ಅರವಿಂದ ಲಿಂಬಾವಳಿ ಅವರು ತಮ್ಮ ಹೆಸರು ಹಾಕಿಕೊಂಡು ದುರ್ಬಳಕೆ ಮಾಡಿಕೊಂಡಿದ್ದು, ಸರ್ಜಾಪುರ, ಆನೆಕಲ್ ಗಳಲ್ಲಿ ಬಡವರಿಗೆ ಸೇರಬೇಕಾಗಿದ್ದ ಅಕ್ಕಿ, ಮಕ್ಕಳು ಮತ್ತು ಬಾಣಂತಿಯರಿಗೆ ಸೇರಬೇಕಿದ್ದ ಬೇಳೆ, ಸಕ್ಕರೆಗಳನ್ನು ಮರು ಪ್ಯಾಕಿಂಗ್ ಮಾಡಿದ ಫೋಟೋ ಮತ್ತಿತರ ದಾಖಲೆಗಳನ್ನು ಡಿಕೆ ಶಿವಕುಮಾರ್ ಸಭೆಯಲ್ಲಿ ತೋರಿಸಿದರು.

ಪ್ರಶ್ನೆ ಮಾಡಬಾರದೆ?

ಪ್ರಶ್ನೆ ಮಾಡಬಾರದೆ?

‘ನಿಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮಂತ್ರಿಗಳು ಈ ರೀತಿ ಅಕ್ರಮಗಳನ್ನು ಮಾಡುತ್ತಿರುವಾಗ ಅದನ್ನು ಪ್ರಶ್ನೆ ಮಾಡಬಾರದೆ? ನಾವು ನೋಡಿಕೊಂಡು ತೆಪ್ಪಗೆ ಕೂರಬೇಕೇ? ಹಾಗಾದ್ರೆ ವಿರೋಧ ಪಕ್ಷದ ನಾಯಕರುಗಳಾಗಿ ನಮ್ಮ ಕೆಲಸ ಏನು? ನೀವು ಕೂಡ ಕೆಲಸ ಮಾಡಿಲ್ಲವೇ? ಆಗಿನ ಸರ್ಕಾರಗಳು ಅವುಗಳನ್ನು ತಿದ್ದುಕೊಂಡಿಲ್ಲವೇ? ಈಗ ನಾನು ನನ್ನ ಕೆಲಸ ಮಾಡುತ್ತಿರುವಾಗ ನನ್ನ ವಿರುದ್ಧ ನಿಮ್ಮ ಸಚಿವರು ಯಾಕೆ ಮಾತನಾಡುತ್ತಿದ್ದಾರೆ? ಇಂತಹ ಕೀಳುಮಟ್ಟದ ರಾಜಕಾರಣ ಮಾಡುವುದನ್ನು ಬಿಟ್ಟು, ನೆಟ್ಟಗೆ ಕೆಲಸ ಮಾಡಲು ನಿಮ್ಮ ಸಚಿವರುಗಳಿಗೆ ಹೇಳಿ' ಎಂದು ಮುಖ್ಯಮಂತ್ರಿಗಳಿಗೆ ಖಾರವಾಗಿ ಹೇಳಿದರು.

ಬೀದಿಗಿಳಿದು ಹೋರಾಡುವುದೂ ಗೊತ್ತಿದೆ

ಬೀದಿಗಿಳಿದು ಹೋರಾಡುವುದೂ ಗೊತ್ತಿದೆ

‘ನಾವು ಕಷ್ಟದ ಸಮಯದಲ್ಲಿ ರಾಜಕೀಯ ಬದಿಗೊತ್ತಿ ನಿಮಗೆ ಸಂಪೂರ್ಣ ಸಹಕಾರ ನೀಡಲಿಲ್ಲವೇ? ಇಡೀ ಪಕ್ಷ ನಿಮ್ಮ ಬೆನ್ನಿಗೆ ನಿಂತಿಲ್ಲವೇ? ನಿಮಗೂ ಸ್ವಲ್ಪ ಆತ್ಮಸಾಕ್ಷಿ ಇರಬೇಕಲ್ಲವೇ? ನಾವು ಕೊಟ್ಟ ಸಹಕಾರವನ್ನು ನಮ್ಮ ನ್ಯೂನ್ಯತೆ, ದೌರ್ಬಲ್ಯ ಎಂದು ಭಾವಿಸಬೇಡಿ. ನಮಗೆ ಸಹಕಾರ ಕೊಡುವುದೂ ಗೊತ್ತಿದೆ. ತಪ್ಪು ಮಾಡಿದಾಗ ಬೀದಿಗಿಳಿದು ಹೋರಾಡುವುದೂ ಗೊತ್ತಿದೆ' ಎಂದು ಎಚ್ಚರಿಸಿದರು.

English summary
KPCC President DK Shivakumar Upset With Karnataka CM Yediyurappa. KPCC President DK Shivakumar Attending CM Meeting On Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X