ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಪ್ರಚಾರವನ್ನು ಅರ್ಧಕ್ಕೆ ಬಿಟ್ಟು ಡಿಕೆ ಶಿವಕುಮಾರ್ ವಾಪಸಾಗಿದ್ದೇಕೆ?

|
Google Oneindia Kannada News

ಬೆಂಗಳೂರು, ಮಾರ್ಚ್ 27: ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆಂದು ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಚಾರವನ್ನು ಅರ್ಧಕ್ಕೆ ಬಿಟ್ಟು ವಾಪಸಾಗಿದ್ದೇಕೆ?.

ಏಪ್ರಿಲ್ 6 ರಂದು ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಕೃಷ್ಣಗಿರಿ ಜಿಲ್ಲೆಯ ಕ್ಷೇತ್ರಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದರು. ಡಿಎಂಕೆ ಅಭ್ಯರ್ಥಿ ಮುರುಗನ್ ಪರ ಇಂದು ಪ್ರಚಾರ ನಡೆಸಿದ್ದರು. ಆದರೆ ಪ್ರಚಾರ ಮಾಡುತ್ತಿರುವ ಅವರು ಕಾರ್ಯಕ್ರಮದಿಂದ ಏಕಾಏಕಿ ತೆರಳಿದ್ದಾರೆ.

ಡಿಕೆಶಿ ಸಿಡಿಲೇಡಿಗೆ ದುಡ್ಡು ಕೊಟ್ಟು ಗೋವಾಗೆ ಕಳುಹಿಸಿದ್ರಾ ?ಡಿಕೆಶಿ ಸಿಡಿಲೇಡಿಗೆ ದುಡ್ಡು ಕೊಟ್ಟು ಗೋವಾಗೆ ಕಳುಹಿಸಿದ್ರಾ ?

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ಸುದ್ದಿಗೋಷ್ಠಿ ಬೆನ್ನಲ್ಲೇ ಡಿಕೆಶಿ ಪ್ರಚಾರ ಸಭೆ ಬಿಟ್ಟು ಹೊರನಡೆದಿದ್ದಾರೆ. ಅವರು ಚುನಾವಣಾ ಪ್ರಚಾರದ ವೇಳೆಯೂ ಡಿಕೆಶಿ ತಮ್ಮ ಮೊಬೈಲ್‌ನ್ನು ಪದೇ ಪದೇ ನೋಡುತ್ತಿದ್ದರು.

KPCC President DK Shivakumar Quits Election Campaign Return Towards Bengaluru

ಇದಲ್ಲದೆ, ಡಿಎಂಕೆ ಅಭ್ಯರ್ಥಿ ಮುರುಗನ್ ಪರ ಪ್ರಚಾರ ಮಾಡುತ್ತಿದ್ದ ಶಿವಕುಮಾರ್ ಕಾರ್ಯಕ್ರಮದಿಂದ ಏಕಾಏಕಿ ತೆರಳಿದರು. ಕಾರ್ಯಕ್ರಮದ ನಡುವೆ ಮತ್ತೊಂದು ಮೊಬೈಲ್ ಕರೆ ಸ್ವೀಕರಿಸಿ ಫೋನ್‌ನಲ್ಲಿ ಮಾತನಾಡುತ್ತಲೇ ತೆರಳಿ ಕಾರಿನಲ್ಲಿ ಆಸೀನರಾದರು. ಹಾಗೆಯೇ ಅವರು ಮತ್ತೊಂದು ಕಾರ್ಯಕ್ರಕ್ಕೆ ಗೈರಾಗಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

Recommended Video

ಇಬ್ಬರ ರಾಜಕೀಯ ಭವಿಷ್ಯಕ್ಕೆ ಖಳನಾಯಕಿ ಆಗ್ತಾರ ಸಿಡಿ ಗರ್ಲ್ | Oneindia Kannada

ಹಾಗೆಯೇ ಡಿಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಿವಾಸದೆದುರು ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಡಿಕೆ ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ರಮೇಶ್ ಜಾರಕಿಹೊಳಿ ನಿವಾಸದೆದುರು ಯುವ ಕಾಂಗ್ರೆಸ್ ಪ್ರತಿಭಟನೆ ಶುರು ಮಾಡಿದೆ.

English summary
KPCC President DK Shivakumar Quits Election Campaign Return Towards Bengaluru. After Ramesh Jarkiholi Press meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X