ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಪಿಸಿಸಿ ಅಧ್ಯಕ್ಷರೇ ಆರೋಪಿಯನ್ನು ರಕ್ಷಿಸುತ್ತಿದ್ದಾರಾ? ಭಾರೀ ವಿವಾದಕ್ಕೆ ಕಾರಣವಾದ ಡಿಕೆಶಿ ನಡೆ

|
Google Oneindia Kannada News

ಬೆಂಗಳೂರು, ಮಾರ್ಚ್ 21: ಪ್ರವಾದಿ ಪೈಗಂಬರ್ ಬಗ್ಗೆ ಸಾಮಾಜಿಕ ತಾಣದಲ್ಲಿ ಹಾಕಲಾದ ಪೋಸ್ಟ್ ಒಂದು ರಾಜಧಾನಿಯ ಎರಡು ಪ್ರದೇಶವನ್ನು ಹೇಗೆ ಹೊತ್ತಿ ಉರಿಸಿತ್ತು ಎನ್ನುವುದು ಗೊತ್ತಿರುವ ವಿಚಾರ.

ಕೆ.ಜಿ ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರೇ ಶಾಮೀಲಾಗಿ, ಆರೋಪಿ ಸ್ಥಾನದಲ್ಲಿ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಈ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ನಡೆದುಕೊಂಡ ರೀತಿಯ ಬಗ್ಗೆ ಪಕ್ಷದಲ್ಲೇ ಚರ್ಚೆ ನಡೆದಿತ್ತು.

'ಮಹಾನ್ ನಾಯಕ'ನ ರಾಜಕೀಯ ಭವಿಷ್ಯಕ್ಕೆ ಇತಿಶ್ರೀ ಹಾಡುತ್ತಾ 'ಸಂತ್ರಸ್ತ ಯುವತಿ'ಯ 'ಆ' ಹೇಳಿಕೆ?'ಮಹಾನ್ ನಾಯಕ'ನ ರಾಜಕೀಯ ಭವಿಷ್ಯಕ್ಕೆ ಇತಿಶ್ರೀ ಹಾಡುತ್ತಾ 'ಸಂತ್ರಸ್ತ ಯುವತಿ'ಯ 'ಆ' ಹೇಳಿಕೆ?

ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಮಾಜಿ ಮೇಯರ್ ಸಂಪತ್ ರಾಜ್ ನಡುವಿನ ವೈಮನಸ್ಸಿನಿಂದ, ಶಾಸಕರ ಮನೆ ಬೆಂಕಿಗೆ ಆಹುತಿಯಾಗಿತ್ತು. ಈ ವಿಚಾರದಲ್ಲಿ ಸಂಪತ್ ರಾಜ್ ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದಿದ್ದಾರೆ.

 ಜಾರಕಿಹೊಳಿ ಸಿಡಿ ಪ್ರಕರಣದ ಹಿಂದಿನ ರೂವಾರಿ? ಬಿಎಸ್ವೈ, ಡಿಕೆಶಿ ಹೆಸರು ಪ್ರಸ್ತಾವಿಸಿದ 2 ಪಕ್ಷಗಳು! ಜಾರಕಿಹೊಳಿ ಸಿಡಿ ಪ್ರಕರಣದ ಹಿಂದಿನ ರೂವಾರಿ? ಬಿಎಸ್ವೈ, ಡಿಕೆಶಿ ಹೆಸರು ಪ್ರಸ್ತಾವಿಸಿದ 2 ಪಕ್ಷಗಳು!

ಅಖಂಡ ಶ್ರೀನಿವಾಸಮೂರ್ತಿಯವರು ರಾಜ್ಯ ಮತ್ತು ಕೇಂದ್ರದ ಕಾಂಗ್ರೆಸ್ ಮುಖಂಡರ ಬಳಿ ತಮ್ಮ ನೋವನ್ನು ತೋಡಿಕೊಂಡಿದ್ದರು. ಆದರೆ, ಆರೋಪಿ ಸ್ಥಾನದಲ್ಲಿರುವವರ ಜೊತೆಗೆ, ಡಿ.ಕೆ.ಶಿವಕುಮಾರ್ ನಡೆದುಕೊಂಡ ರೀತಿ, ಈಗ ಪಕ್ಷದಲ್ಲೇ ಭಾರೀ ವಿವಾದಕ್ಕೆ ಗುರಿಯಾಗಿದೆ.

 ಶ್ರೀನಿವಾಸಮೂರ್ತಿ ಮನೆ ಬೆಂಕಿಯಿಟ್ಟ ಪ್ರಕರಣ

ಶ್ರೀನಿವಾಸಮೂರ್ತಿ ಮನೆ ಬೆಂಕಿಯಿಟ್ಟ ಪ್ರಕರಣ

ಶ್ರೀನಿವಾಸಮೂರ್ತಿ ಮನೆಗೆ ಬೆಂಕಿಯಿಟ್ಟ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ಒಬ್ಬರಾಗಿರುವ ಮಾಜಿ ಕಾರ್ಪೋರೇಟರ್ ಎ.ಆರ್. ಜಾಕೀರ್ ಕೂಡಾ ಒಬ್ಬರು. ಇವರನ್ನು ಕಳೆದ ಡಿಸೆಂಬರ್ ತಿಂಗಳಲ್ಲಿ ಬಂಧಿಸಲಾಗಿತ್ತು. ಇವರ ಅಣ್ಣನ ಮಗಳ ಮದುವೆ, ಶುಕ್ರವಾರ (ಮಾ 19) ನಡೆದಿತ್ತು.

 ಜಾಕೀರ್ ಅಣ್ಣನ ಮಗಳ ಮದುವೆ ಕಾರ್ಯಕ್ರಮವಲ್ಲಿ ಡಿ.ಕೆ.ಶಿವಕುಮಾರ್

ಜಾಕೀರ್ ಅಣ್ಣನ ಮಗಳ ಮದುವೆ ಕಾರ್ಯಕ್ರಮವಲ್ಲಿ ಡಿ.ಕೆ.ಶಿವಕುಮಾರ್

ಅರಮನೆ ಮೈದಾನದಲ್ಲಿ ನಡೆದ ಈ ಮದುವೆ ಕಾರ್ಯಕ್ರಮವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಭಾಗವಹಿಸಿದ್ದರು. ಅಲ್ಲದೇ, ಜಾಕೀರ್ ಜೊತೆಗೆ ಭೋಜನ ಸವಿದಿದ್ದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೂಡಾ ಹಾಜರಿದ್ದರು.

 ಫೋಟೋ ಕಾಂಗ್ರೆಸ್ ವಲಯದಲ್ಲಿ ಈಗ ಚರ್ಚೆಗೆ ಗ್ರಾಸ

ಫೋಟೋ ಕಾಂಗ್ರೆಸ್ ವಲಯದಲ್ಲಿ ಈಗ ಚರ್ಚೆಗೆ ಗ್ರಾಸ

ಈ ಫೋಟೋ ಕಾಂಗ್ರೆಸ್ ವಲಯದಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ. ಅಖಂಡ ಶ್ರೀನಿವಾಸಮೂರ್ತಿಗೆ ತೊಂದರೆಯಾಗಿದ್ದರೂ, ಕಾಂಗ್ರೆಸ್ ಅಧ್ಯಕ್ಷರು ಅವರನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವ ಆರೋಪಕ್ಕೆ ಈ ವಿದ್ಯಮಾನ ಮತ್ತಷ್ಟು ಇಂಬು ನೀಡುವಂತಿದೆ.

Recommended Video

ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧೆ ಮಾಡುತ್ತೆ !! | Kumaraswamy | Oneindia Kannada
 ಶಿಸ್ತು ಸಮಿತಿ ನನಗೆ ನೋಟಿಸ್ ನೀಡುತ್ತಿದೆ

ಶಿಸ್ತು ಸಮಿತಿ ನನಗೆ ನೋಟಿಸ್ ನೀಡುತ್ತಿದೆ

ಅಖಂಡ ಶ್ರೀನಿವಾಸಮೂರ್ತಿಯವರು ಹಲವು ಬಾರಿ ಈ ವಿಚಾರದಲ್ಲಿ ಬೇಸರವನ್ನು ವ್ಯಕ್ತ ಪಡಿಸಿದ್ದರು. ಬಹಿರಂಗ ಹೇಳಿಕೆಯನ್ನು ನೀಡಬಾರದು ಎಂದು ಕೆಪಿಸಿಸಿ ಇವರಿಗೆ ಎಚ್ಚರಿಕೆಯನ್ನೂ ನೀಡಿತ್ತು. "ಶಿಸ್ತು ಸಮಿತಿ ನನಗೆ ನೋಟಿಸ್ ನೀಡುತ್ತಿದೆ ಎನ್ನುವ ವಿಚಾರ ತಿಳಿಯಿತು. ಕಮಿಟಿಯ ಮುಂದೆ ಎಲ್ಲಾ ವಿಚಾರವನ್ನು ಮತ್ತೊಮ್ಮೆ ಹೇಳುತ್ತೇನೆ"ಎಂದು ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ.

English summary
KPCC President D K Shivakumar Attended Marriage Function Of Former Corporator A R Zakir One Of The Accused Of D J Halli Incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X