ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ತಡೆಯುವಲ್ಲಿ ಸರ್ಕಾರಕ್ಕೆ ಬೆಂಬಲ; ಡಿ ಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ಮಾರ್ಚ್ 27: ಕೊರೊನಾ ಸೋಂಕು ಹರಡದಂತೆ ತಡೆಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರಗಳಿಗೆ ನಮ್ಮ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಹಲವಾರು ಶಾಸಕರು, ಕಾರ್ಯಕರ್ತರು ಡಾಕ್ಟರ್ ಇದ್ದಾರೆ. ಇದರಲ್ಲಿ ಕೆಲವರನ್ನು ಆಯ್ಕೆ ಮಾಡಿ ಟಾಸ್ಕ್ ಫೋರ್ಸ್ ಮಾಡಿದ್ದೇವೆ ಎಂದು ತಿಳಿಸಿದರು.

<br>ವಿಧಿಯೇ ಇಲ್ಲ, ಮಹಾಮಾರಿ ಕೊರೊನಾದೊಂದಿಗೆ ನಾವು ಬದುಕಲೇಬೇಕಂತೆ..!
ವಿಧಿಯೇ ಇಲ್ಲ, ಮಹಾಮಾರಿ ಕೊರೊನಾದೊಂದಿಗೆ ನಾವು ಬದುಕಲೇಬೇಕಂತೆ..!

ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಜೊತೆಗೆ ನಮ್ಮ ಪಕ್ಷದ ಕಾರ್ಯಕರ್ತರು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಒಂದು ಟಾಸ್ಕ್ ಫೋರ್ಸ್ ಮಾಡಿದ್ದೇವೆ. ಈ ಟಾಸ್ಕ್ ಫೋರ್ಸ್ ಅಧ್ಯಕ್ಷ ಮಾಜಿ ಆರೋಗ್ಯ ಸಚಿವ ರಮೇಶ್ ಕುಮಾರ್ ಇರುತ್ತಾರೆ ಎಂದರು.

KPCC President DK Shivakumar Address Press Conference About Coronavirus

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಟಾಸ್ಕ್ ಫೋರ್ಸ್ ಸಂಚಾಲಕರಾಗಿ ಕೆಲಸ ಮಾಡಲಿದ್ದಾರೆ. ಸಾರ್ವಜನಿಕರ ಬಳಿ ಆರ್ ಎಸ್ ಎಸ್ , ಬಿಜೆಪಿ ಒತ್ತಡ ಹಾಕಿ ವಸೂಲಿ ಮಾಡುತ್ತಿದೆ ಆ ರೀತಿಯಲ್ಲಿ ಹಣ , ದವಸ ಧಾನ್ಯಗಳನ್ನು ನಾವು ಮಾಡುವುದಿಲ್ಲ. ನಮ್ಮ ಶಾಸಕರುಗಳು ಕೆಪಿಸಿಸಿ ರಿಲೀಫ್ ಫಂಡ್ ಗೆ ಒಂದು ಲಕ್ಷ ಕೊಡಲೇಬೇಕು, ಇನ್ನೂ ಸಾಮರ್ಥ್ಯ ಇರುವವರು ಹೆಚ್ಚು ಕೊಡಬಹುದು ಎಂದರು.

ನಾಲ್ಕೈದು ದಿನಗಳಿಂದ ಪೊಲೀಸ್ ದೌರ್ಜನ್ಯ ಹೆಚ್ಚಾಗಿದೆ. ಇದನ್ನು ನಮ್ಮ ಪಕ್ಷ ಖಂಡಿಸುತ್ತದೆ. ಹೀಗೆ ವರ್ತನೆ ಮಾಡಿದ ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳಬೇಕು, ಕರ್ಫ್ಯೂ ನೆಪ ಮಾಡಿಕೊಂಡು ದೌರ್ಜನ್ಯ ಮಾಡುವುದನ್ನು ನಿಲ್ಲಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದರು.

English summary
KPCC President DK Shivakumar Address Press Conference About Coronavirus. Karnataka Congress Will Support To State and central government for fighting with Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X