ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಗಣೇಶ ಹಬ್ಬ ಮತ್ತು ರಾಜಕೀಯ ಪಕ್ಷಗಳ ನಾಯಕರು!

|
Google Oneindia Kannada News

ಬೆಂಗಳೂರು, ಸೆ. 09: "ಜೀವ, ಜೀವನ ಬಹಳ ಮುಖ್ಯ. ನಾವು ಬದುಕಿದರೆ ಮಾತ್ರ ಮುಂದೆ ಏನಾದರು ಸಾಧನೆ ಮಾಡಬಹುದು" ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ವಿತರಿಸುವುದರ ಜೊತೆಗೆ ಪದ್ಮನಾಭನಗರ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಗೌರಿ ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದರು.

"ಗಣೇಶ ಹಬ್ಬವನ್ನು ಆಯೋಜಿಸಲು ಸರ್ಕಾರ ಅನುಮತಿ ಕೊಟ್ಟಿದೆ. ಗೌರಿ ಮತ್ತು ಗಣೇಶ ಹಬ್ಬವು ಸಹೋದರತ್ವವನ್ನು ಸಂಕೇತಿಸುತ್ತದೆ. ನಾವು ಹಬ್ಬವನ್ನು ದೊಡ್ಡ ರೀತಿಯಲ್ಲಿ ಆಯೋಜಿಸಲು ಬಯಸಿದ್ದರೂ, ಕೋವಿಡ್ ಸಾಂಕ್ರಾಮಿಕವು ಬ್ರೇಕ್ ಹಾಕಿದೆ. ಕೋವಿಡ್ ಶೀಘ್ರದಲ್ಲೇ ಕಡಿಮೆಯಾಗುವುದರಿಂದ ಮುಂದಿನ ವರ್ಷ ನಾವು ಹಬ್ಬವನ್ನು ದೊಡ್ಡ ರೀತಿಯಲ್ಲಿ ಆಯೋಜಿಸಬಹುದು. ಒಂದು ವಾರ್ಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಸಾರ್ವಜನಿಕ ಗಣೇಶ ಕೂರಿಸಲು ಬಯಸಿದಲ್ಲಿ ಅವರು ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಎಇಇ ಯಿಂದ ಅನುಮತಿ ಪಡೆಯಬೇಕು. ಕೋವಿಡ್ ನಿಯಂತ್ರಣಕ್ಕಾಗಿ ನಾವು ಈ ವ್ಯವಸ್ಥೆ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಈ ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುವದನ್ನು ಕಂಡಾಗ ಬೇಸರವಾಗುತ್ತದೆ" ಎಂದು ಆರ್. ಅಶೋಕ್ ಹೇಳಿದರು.

ಗಣೇಶ ಮೂರ್ತಿ ವಿಸರ್ಜನೆ ವ್ಯವಸ್ಥೆ!

ಗಣೇಶ ಮೂರ್ತಿ ವಿಸರ್ಜನೆ ವ್ಯವಸ್ಥೆ!

"ಯಡಿಯೂರು ಕೆರೆಯಲ್ಲಿ ಗಣೇಶ ಮೂರ್ತಿಗಳನ್ನು ಸುರಕ್ಷಿತವಾಗಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇಂದು ನಾನು ಅಧಿಕಾರಿಗಳೊಂದಿಗೆ ಖುದ್ದು ಪರಿಶೀಲನೆ ನಡೆಸಿದ್ದೇನೆ. ಯಡಿಯೂರು ಅಲ್ಲದೆ, ಬೆಂಗಳೂರಿನಾದ್ಯಂತ ಸುಮಾರು 12 ಕೆರೆಗಳಲ್ಲಿ ಸುರಕ್ಷಿತವಾಗಿ ವಿಸರ್ಜನೆಯ ಮಾಡಲು ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಸುರಕ್ಷಿತವಾಗಿ, ಜಾಗೃತೆಯಿಂದ ಹಬ್ಬ ಆಚರಿಸಬೇಕು" ಎಂದು ಆರ್. ಅಶೋಕ್ ಹೇಳಿದ್ದಾರೆ.

ಬೆಂಗಳೂರಿಗೂ ನಿಯಮ ಅನ್ವಯ!

ಬೆಂಗಳೂರಿಗೂ ನಿಯಮ ಅನ್ವಯ!

ಇದೇ ಸಂದರ್ಭದಲ್ಲಿ ಮತ್ತೊಂದು ಮಹತ್ವದ ವಿಚಾರವನ್ನು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. "ರಾಜ್ಯಾದ್ಯಂತ ಸಾರ್ವಜನಿಕ ಗಣೇಶೋತ್ಸವ ಹಾಗೂ ಮನೆಯಲ್ಲಿ ಗಣಪತಿಯನ್ನು ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ರೂಪಿಸಿದ ನೀತಿ, ನಿಯಮಗಳು ಬೆಂಗಳೂರಿಗೂ ಅನ್ವಯಿಸುತ್ತದೆ" ಎಂದಿದ್ದಾರೆ. ಜೊತೆಗೆ ಬೆಂಗಳೂರಿನ ವಾರ್ಡ್‌ಗಳಲ್ಲಿ ಎಷ್ಟು ಕಡೆ ಗಣೇಶೋತ್ಸವ ನಡೆಸಬೇಕೆಂಬುದನ್ನು ಆಯಾ ವಾರ್ಡ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ" ಎಂದು ಅಶೋಕ್ ತಿಳಿಸಿದ್ದಾರೆ.

ಗಣೇಶ ಮೂರ್ತಿ ವಿತರಿಸಿದ ರಾಮಲಿಂಗಾರೆಡ್ಡಿ!

ಗಣೇಶ ಮೂರ್ತಿ ವಿತರಿಸಿದ ರಾಮಲಿಂಗಾರೆಡ್ಡಿ!

ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಗುರುವಾರ ಸುಮಾರು 500 ಪರಿಸರ ಗಣೇಶನ ಮೂರ್ತಿಗಳನ್ನು ಸ್ಥಳೀಯ ನಾಗರಿಕರಿಗೆ ಉಚಿತವಾಗಿ ಹಂಚಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, "ಪರಿಸರ ಸಂರಕ್ಷಣೆಗೆ ಪರಿಸರ ಗಣೇಶ ಮೂರ್ತಿಗಳನ್ನು ಸ್ಥಾಪನೆ ಮಾಡಬೇಕು. ಜೊತೆಗೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಾಗರೂಕತೆಯಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಬೇಕು" ಎಂದು ಮನವಿ ಮಾಡಿದರು.

ಗಣೇಶ ಮೂರ್ತಿ ತಯಾರಕರನ್ನು ಭೇಟಿ ಮಾಡಿದ ಡಿಕೆಶಿ

ಗಣೇಶ ಮೂರ್ತಿ ತಯಾರಕರನ್ನು ಭೇಟಿ ಮಾಡಿದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಮಾವಳ್ಳಿಯ ಗಣೇಶ ಮೂರ್ತಿ ತಯಾರಕರು ಹಾಗೂ ಮಾರಾಟಗಾರರನ್ನು ಭೇಟಿ ಮಾಡಿದ್ದಾರೆ.


ಮನೆಯಲ್ಲಿ 2 ಅಡಿ ಎತ್ತರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರದ ಗಣೇಶ ಮೂರ್ತಿ ಇಡಬೇಕೆಂಬ ನಿಯಮ ಸರಿಯಲ್ಲ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುರುವಾರ ಮೂರ್ತಿ ತಯಾರಕರನ್ನು ಭೇಟಿ ಮಾಡಿದ್ದಾರೆ. "ಈ ನಿರ್ಬಂಧ ಹೇರುವ ಮೂಲಕ ಮೂರ್ತಿ ತಯಾರಕರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ. ತಕ್ಷಣ ಆ ಆದೇಶ ಹಿಂಪಡೆಯಬೇಕು ಅಥವಾ ಮೂರ್ತಿ ತಯಾರಿಕರಿಗೆ ಪರಿಹಾರ ನೀಡಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

Recommended Video

ಹಬ್ಬ ಮಾಡೋಕೆ ಹೆದರಿದ ಜನಸಾಮಾನ್ಯರು | Oneindia Kannada

English summary
KPCC President D.K. Shivakumar has met Ganesh idol makers and dealers in Mavalli Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X