ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ವಿರುದ್ಧ ಬೇಗ್ ವಾಗ್ದಾಳಿ, ಕೆಪಿಸಿಸಿಯಿಂದ ನೋಟಿಸ್

|
Google Oneindia Kannada News

ಬೆಂಗಳೂರು, ಮೇ 21: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರ ವೈಖರಿ, ಎಕ್ಸಿಟ್ ಪೋಲ್, ಎನ್ಡಿಎ ಅಧಿಕಾರಕ್ಕೇರುವ ಸಾಧ್ಯತೆ ಕುರಿತಂತೆ ಮಾಜಿ ಸಚಿವ, ಶಾಸಕ ರೋಷನ್ ಬೇಗ್ ಅವರು ಗರಂ ಆಗಿದ್ದಾರೆ. ಇದೇ ಮೂಡ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ರೋಷನ್ ಬೇಗ್ ಹೇಳಿಕೆಗೆ ಕಾಂಗ್ರೆಸ್ಸಿಗರು ಫುಲ್ ಗುಸ್ಸಾ: ಕೋಳಿ, ಕಬಾಬ್ ರೋಷನ್ ಬೇಗ್ ಹೇಳಿಕೆಗೆ ಕಾಂಗ್ರೆಸ್ಸಿಗರು ಫುಲ್ ಗುಸ್ಸಾ: ಕೋಳಿ, ಕಬಾಬ್

ಮುಸ್ಲಿಮರ ಬೆಂಬಲ ಯಾವತ್ತಿದ್ದರೂ ಕಾಂಗ್ರೆಸ್ಸಿಗೆ ಎಂದು ಎಲ್ಲೂ ಶಾಸನ ವಿಧಿಸಿಲ್ಲ. ನಮ್ಮ ರಕ್ಷಣೆ, ಸ್ವಾಭಿಮಾನ ಉಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದರೆ ಮಾತ್ರ ನಮ್ಮ ಬೆಂಬಲ, ಸಂದರ್ಭಕ್ಕೆ ತಕ್ಕಂತೆ ನಾವು (ಮುಸ್ಲಿಮರು) ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ, ಅವಶ್ಯಕತೆಬಿದ್ದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಬೆಂಬಲಿಸಲು ನಾವು ಹಿಂಜರಿಯುವುದಿಲ್ಲ ಎನ್ನುವ ಎಚ್ಚರಿಕೆಯನ್ನು ರೋಷನ್ ಬೇಗ್ ನೀಡಿದ್ದರು.

'ರಾಮಮಂದಿರವನ್ನು ಭಾರತದಲ್ಲಲ್ಲದೆ ಪಾಕಿಸ್ತಾನದಲ್ಲಿ ಕಟ್ಟೋಕಾಗುತ್ತಾ?' 'ರಾಮಮಂದಿರವನ್ನು ಭಾರತದಲ್ಲಲ್ಲದೆ ಪಾಕಿಸ್ತಾನದಲ್ಲಿ ಕಟ್ಟೋಕಾಗುತ್ತಾ?'

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಿಟ್ಟಿಗೆದ್ದು, ಕಾಂಗ್ರೆಸ್ ಸೋತರೇ ಇವರುಗಳೇ ಕಾರಣ ಎಂಬರ್ಥದಲ್ಲಿ ರೋಷನ್ ಬೇಗ್ ಹೇಳಿದ್ದರು. ಪಕ್ಷದ ಹಿರಿಯ ಮುಖಂಡರ ವಿರುದ್ಧ ಮಾತನಾಡಿದ ರೋಷನ್ ಬೇಗ್ ಅವರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ವೈ ಘೋರ್ಪಡೆ ಅವರು ನೋಟಿಸ್ ಕಳಿಸಿದ್ದಾರೆ. ಒಂದು ವಾರದಲ್ಲಿ ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವಂತೆ ಸೂಚಿಸಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

KPCC notice to MLA Roshan Baig over statement against Siddaramaiah

ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಈ ಬಾರಿ ಟಿಕೆಟ್ ನೀಡಿಲ್ಲ, ಪ್ರಚಾರದ ವೈಖರಿ ನೋಡಿದರೆ ಈ ಬಾರಿ ಫಲಿತಾಂಶವನ್ನು ಊಹಿಸಬಹುದಾಗಿತ್ತು. ಎನ್ಡಿಎ ಸರ್ಕಾರ ರಚನೆ ಬಗ್ಗೆ ಎಕ್ಸಿಟ್ ಪೋಲ್ ನಲ್ಲಿ ವರದಿ ಬಂದಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ರೋಷನ್ ಬೇಗ್ ಹೇಳಿದ್ದರು.

English summary
KPCC General Secy Venkatrao Y Ghorpade sends notice to Congress MLA Roshan Baig over his statement against AICC General Secretary KC Venugopal, KPCC President Dinesh Gundu Rao & CLP leader Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X