ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೂರ್ಣಚಂದ್ರ ತೇಜಸ್ವಿಯ ಕರ್ವಾಲೋ ಇ ಬುಕ್ ಲೋಕಾರ್ಪಣೆ

|
Google Oneindia Kannada News

ಬೆಂಗಳೂರು, ಜುಲೈ 21: ಕನ್ನಡದ ಎರಡು ತಲೆಮಾರಿನ ಓದುಗರನ್ನು ಇನ್ನಿಲ್ಲದಂತೆ ಪ್ರಭಾವಿಸಿದ ಬರಹಗಾರ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳು ಮೊದಲ ಬಾರಿಗೆ ಅಧಿಕೃತವಾಗಿ ಡಿಜಿಟಲ್ ಅಂಗಳಕ್ಕೆ ಕಾಲಿಡುತ್ತಿವೆ. ಇದೇ ಮೊದಲ ಬಾರಿಗೆ ತೇಜಸ್ವಿ ಕೃತಿಯೊಂದು ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಬಿಡುಗಡೆಯಾಗುತ್ತಿದೆ. ಮೊದಲ ಹಂತದಲ್ಲಿ ಅವರ ಅತ್ಯಂತ ಜನಪ್ರಿಯ ಕಾದಂಬರಿ ಕರ್ವಾಲೊ ಇಂದು ಮೈಲ್ಯಾಂಗ್ ಆಪ್ ಅಲ್ಲಿ ಬಿಡುಗಡೆಯಾಗಿದೆ.

ಕನ್ನಡ ಪುಸ್ತಕ ಓದುವ ಯಾವ ಯುವಕ/ಯುವತಿಯರನ್ನು "ನಿಮ್ಮ ಮೆಚ್ಚಿನ ಲೇಖಕ ಯಾರು" ಅನ್ನುವ ಪ್ರಶ್ನೆ ಕೇಳಿದರೆ ಅವರು ಕೊಡುವ ಮೊದಲ ಉತ್ತರ "ತೇಜಸ್ವಿ". ಅಂತಹದೊಂದು ಮಾಂತ್ರಿಕ ಸ್ಪರ್ಷ ಅವರ ಬರವಣಿಗೆಗೆ ಇದೆ. ಅವು ಎರಡು ತಲೆಮಾರಿನಿಂದಲೂ ಕನ್ನಡದ ಓದುಗರನ್ನು ಬಿಟ್ಟು ಬಿಡದೇ ಪ್ರಭಾವಿಸಿವೆ.

ತೇಜಸ್ವಿ ಜಾಗತೀಕರಣದ ವಿರುದ್ಧದ ಎಚ್ಚರ ಪ್ರಜ್ಞೆ: ನಾಗೇಶ್ ಹೆಗಡೆತೇಜಸ್ವಿ ಜಾಗತೀಕರಣದ ವಿರುದ್ಧದ ಎಚ್ಚರ ಪ್ರಜ್ಞೆ: ನಾಗೇಶ್ ಹೆಗಡೆ

ತೇಜಸ್ವಿ ತಮ್ಮ ಬರವಣಿಗೆಯ ಆಚೆ, ತಮ್ಮ ಖಾಸಗಿ ಮತ್ತು ಸಾರ್ವಜನಿಕ ಜೀವನದಲ್ಲೂ ತೋರಿದ ಘನತೆಯ ನಿಲುವುಗಳಿಂದಾಗಿ ಅವರ ಅಭಿಮಾನಿ ವಲಯ ಹತ್ತು ದಿಕ್ಕುಗಳಿಗೂ ಚಾಚಿದೆ. ಕನ್ನಡದ ಬಗ್ಗೆ ಸದಾ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುತ್ತಿದ್ದ ಅವರು ಇಪ್ಪತ್ತೊಂದನೇ ಶತಮಾನದಲ್ಲಿ ಬರುವ ತಂತ್ರಜ್ಞಾನದ ಬಿರುಗಾಳಿಗೆ ಎದೆ ಕೊಟ್ಟು ನಿಲ್ಲಲು ಕನ್ನಡ ಸಜ್ಜಾಗಬೇಕಾದ ರೀತಿಯ ಬಗ್ಗೆ ತುಂಬಾ ಹಿಂದೆಯೇ ಯೋಚಿಸಿ, ಚಿಂತಿಸಿ ತಮ್ಮ ಮಿತಿಯಲ್ಲಿ ಅನೇಕ ಕೆಲಸಗಳಿಗೂ ಚಾಲನೆ ಕೊಟ್ಟಿದ್ದರು.

KP Poornachandra Tejaswis Karvalo e book by Mylang App

 'ಅವರಿಂದಲೇ ನಾನು ಹೀಗೆ ಇರೋದು.. 'ಎಂದು ಭಾವುಕರಾದ ರಾಜೇಶ್ವರಿ ತೇಜಸ್ವಿ 'ಅವರಿಂದಲೇ ನಾನು ಹೀಗೆ ಇರೋದು.. 'ಎಂದು ಭಾವುಕರಾದ ರಾಜೇಶ್ವರಿ ತೇಜಸ್ವಿ

ಡಿಜಿಟಲ್ ಮಾಧ್ಯಮ ಇಂದು ಇಷ್ಟು ವ್ಯಾಪಕವಾಗಿ ಹರಡಿದ್ದಾಗಲೂ ಅವರ ಪುಸ್ತಕಗಳು ಮುದ್ರಿತ ಆವೃತ್ತಿಯೊಂದಕ್ಕೇ ನಿಂತು ಹೋಗಿತ್ತು. ಇದೇ ಮೊದಲ ಬಾರಿಗೆ ಅಧಿಕೃತವಾಗಿ ತೇಜಸ್ವಿ ಅವರ ಪುಸ್ತಕಗಳು ಇಬುಕ್ ರೂಪದಲ್ಲಿ ಡಿಜಿಟಲ್ ಪ್ರಪಂಚಕ್ಕೆ ಪ್ರವೇಶ ನೀಡುತ್ತಿದ್ದು, ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಬಿಡುಗಡೆಯಾಗಲಿವೆ. ಆಸಕ್ತ ಕನ್ನಡದ ಓದುಗರು ಪ್ರಪಂಚದ ಯಾವುದೇ ಮೂಲೆಯಿಂದ ತಮ್ಮ ಮೊಬೈಲ್/ಐಪ್ಯಾಡ್ ಬಳಸಿ ಕೂತಲ್ಲಿಯೇ ಕ್ಷಣದಲ್ಲೇ ಕರ್ವಾಲೊ ಕೃತಿಯನ್ನು ಕೊಂಡು, ಒಳ್ಳೆಯ ಓದುವ ಅನುಭವದ ಜೊತೆ ಸವಿಯುವ ಅವಕಾಶವನ್ನು ಮೈಲ್ಯಾಂಗ್ ಕಲ್ಪಿಸಿದೆ.

ಹೆಚ್ಚಿನ ವಿವರಗಳಿಗೆ:
ಭಾರತದಲ್ಲಿ: www.mylang.in
ಹೊರ ದೇಶದಲ್ಲಿ: www.mylangbooks.com ಸಂಪರ್ಕಿಸಲು ಕೋರಲಾಗಿದೆ.

English summary
Mylang Book App today released e book version of Karvalo novel by KP Poornachandra Tejaswi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X