ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗಶಂಕರದಲ್ಲಿ ಕೋವಿಗೊಂದು ಕನ್ನಡಕ ಮತ್ತೆ ಪ್ರದರ್ಶನ

|
Google Oneindia Kannada News

ಬೆಂಗಳೂರು, ಏಪ್ರಿಲ್ 12: ಕೋವಿ ಹಿಡಿದು ತನ್ನ ಶತ್ರುವನ್ನು ಮುಗಿಸಲು ಹೊರಟ ಮುದುಕನೊಬ್ಬನಿಗೆ ಕಣ್ಣಿನ ದೃಷ್ಟಿಯೇ ಸರಿಯಿಲ್ಲ. ಶತ್ರುವನ್ನು ಮುಗಿಸಲು ದೃಷ್ಟಿ ಸರಿಯಾಗಬೇಕು, ಹಾಗಾಗಿ ಆತನಿಗೊಂದು ಕನ್ನಡಕ ಬೇಕು. ಮೊಮ್ಮಗನೊಂದಿಗೆ ಕಣ್ಣಿನ ವೈದ್ಯನ ಬಳಿ ಬರುವ ಮುದುಕ ತನ್ನ ದೃಷ್ಟಿ ಸರಿಪಡಿಸಿಕೊಂಡನೇ ? ನಿಜಕ್ಕೂ ಆತನ ಸಮಸ್ಯೆ ಕನ್ನಡಕದ್ದೇ? ಕನ್ನಡಕ ಆತನಿಗೆ ಬೇಕಿತ್ತೇ, ಆತನ ಶತ್ರುವನ್ನು ಮುಗಿಸಲು ಬೇಕಾದ ಕೋವಿಗೇ ಕನ್ನಡಕ ಬೇಕಿತ್ತೇ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಲು ,ನೋಡಿ ನಾಟಕ 'ಕೋವಿಗೊಂದು ಕನ್ನಡಕ' !

ನಾಟಕ: ಸ್ಲಾವೋಮಿರ್ ಮ್ರೋಜೆಕ್ ರ ''ಚಾರ್ಲಿ'' ಆಧಾರಿತ 'ಕೋವಿಗೊಂದು ಕನ್ನಡಕ' ನಾಟಕ

ರೂಪಾಂತರ ಮತ್ತು ನಿರ್ದೇಶನ : ವೆಂಕಟೇಶ್ ಪ್ರಸಾದ್

ರಂಗ ಶಾಸ್ತ್ರ : ನಿಶಾ ಅಬ್ದುಲ್ಲಾ

ರಂಗ ವಿನ್ಯಾಸ: ಶ್ರೀಧರ್ ಮೂರ್ತಿ
ಸಂಗೀತ ಸಂಯೋಜನೆ : ಉತ್ಥಾನ ಭಾರಿಘಾಟ್
ಬೆಳಕು ವಿನ್ಯಾಸ : ವಿನಯ್ ಚಂದ್ರ ಪಿ.

Kovigondu Kannadaka Kannada drama at Ranga Shanka on April 15

ನಿರ್ಮಾಣ ನಿರ್ವಹಣೆ: ಅರುಣ್ ಡಿ.ಟಿ, ಸುಷ್ಮ
ರಂಗದ ಮೇಲೆ: ವಿಜಯ್ ಕುಲ್ಕರ್ಣಿ, ರಾಗ್ ಅರಸ್, ಸುನಿಲ್ ಕುಮಾರ್ ವಿ.
ಭಿತ್ತಿಪತ್ರ ವಿನ್ಯಾಸ : ಸತೀಶ್ ಗಂಗಯ್ಯ
ದಿನಾಂಕ: ಏಪ್ರಿಲ್ 15, 2021
ಸ್ಥಳ: ರಂಗಶಂಕರ, ಜೆಪಿ ನಗರ, ಬೆಂಗಳೂರು
ಸಮಯ: ಸಂಜೆ 7:30
ಟಿಕೆಟ್ ಗಳಿಗಾಗಿ ಸಂಪರ್ಕಿಸಿ: 99722 55400

Recommended Video

Kumba Mela 2021 : ಎಷ್ಟು ಹೇಳಿದ್ರು ಜನ ಬುದ್ದಿ ಕಲಿತಿಲ್ಲ! | Oneindia Kannada

ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಬಗ್ಗೆ:
2015 ರಲ್ಲಿ ಚೆರ್ರಿ ತೋಟ ನಾಟಕದೊಂದಿಗೆ ರೂಪುಗೊಂಡ ರಂಗ ತಂಡ 'ಬೆಂಗಳೂರು ಥಿಯೇಟರ್ ಕಲೆಕ್ಟಿವ್'. ರಂಗ ಭೂಮಿಯಲ್ಲಿ ಹೊಸತನ್ನು ಹುಡುಕಿ ಹೋರಾಟ, ಸುಮಾರು 25 ವರ್ಷ ಗಳ ಒಟ್ಟು ಅನುಭವವುಳ್ಳ 3 ಗೆಳೆಯರ ಕನಸು, ಬೆಂಗಳೂರು ಥೀಯೇಟರ್ ಕಲೆಕ್ಟಿವ್, ರೂಪುಗೊಂಡಿದ್ದು ರಂಗ ಶಂಕರದ ಯುವ ನಾಟಕೋತ್ಸವದಲ್ಲಿ ವೆಂಕಟೇಶ್ ಪ್ರಸಾದ್ ರವರಿಗೆ ನಾಟಕ ನಿರ್ದೇಶಿಸಲು ಅವಕಾಶ ದೊರೆತಾಗ. ಜಾಗತಿಕ ರಂಗಭೂಮಿಯಲ್ಲಿ ನಡೆಯುತ್ತಿರುವ ಹೊಸ ಪ್ರಕಾರಗಳನ್ನು ಅಳವಡಿಸಿಕೊಳ್ಳುವ ಮತ್ತು ಕನ್ನಡದಲ್ಲಿ ಪ್ರಯೋಗಿಸುವ ಹಂಬಲದಿಂದ ಹುಟ್ಟಿದ ಬೆಂಗಳೂರು ಥೀಯೇಟರ್ ಕಲೆಕ್ಟಿವ್ ಗೆ ಈಗ 3 ವರ್ಷ ತುಂಬಿದೆ.

English summary
Kovigondu Kannadaka Kannada drama Based on Slawomir Mrozek’s Charlie will be staged at Ranga Shankara on April 15, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X