ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಗರೇಟ್‌ಗಾಗಿ 12ಕಿಮೀ ಸುತ್ತಿದ ಬೆಂಗಳೂರು ಯುವಕನ ಮೇಲೆ FIR

|
Google Oneindia Kannada News

ಬೆಂಗಳೂರು, ಏಪ್ರಿಲ್ 03: ಸಿಗರೇಟ್‌ ಹುಡುಕಲು ಹೋಗಿ ಯುವಕನೊಬ್ಬ ಎಫ್‌ ಐ ಆರ್ ಹಾಕಿಸಿಕೊಂಡಿದ್ದಾನೆ. ಈ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.

ಲಾಕ್‌ ಡೌನ್‌ನಿಂದ ಮಧ್ಯ ಮಾರಾಟ ಸಂಪೂರ್ಣ ಬಂದ್ ಆಗಿದೆ. ಸರ್ಕಾರ ಸಹ ಏಪ್ರಿಲ್ 14ರ ವರೆಗೆ ಮಧ್ಯ ಸಿಗುವುದಿಲ್ಲ ಎಂದು ಹೇಳಿದೆ. ಆದರೆ, ಸಿಗರೇಟ್ ಮಾರಾಟ ಮಾತ್ರ ಅಲ್ಲಲ್ಲಿ ನಡೆಯುತ್ತಿದೆ.

ಕೊರೊನಾ ವೈರಸ್ ಹರಡುತ್ತಿರೋ ಈ ಸಮಯದಲ್ಲಿ ಸಿಗರೇಟ್ ಸೇದುವುದು ಅಪಾಯ!ಕೊರೊನಾ ವೈರಸ್ ಹರಡುತ್ತಿರೋ ಈ ಸಮಯದಲ್ಲಿ ಸಿಗರೇಟ್ ಸೇದುವುದು ಅಪಾಯ!

ಲಾಕ್‌ ಡೌನ್‌ ಇರುವ ಕಾರಣ ಸದ್ಯ ಜನರ ಅನಗತ್ಯ ಓಡಾಟಕ್ಕೆ ನಿರ್ಬಂಧ ಏರಲಾಗಿದೆ. ಹೀಗಿರುವಾಗ ಮಾರ್ಚ್ 23 ರಂದು ವ್ಯಕ್ತಿಯೊಬ್ಬ ಸಿಗರೇಟ್‌ ಬೇಕು ಎಂದು ಬೆಂಗಳೂರಿನಲ್ಲಿ 12ಕಿಮೀ ಸುತ್ತಿದ್ದಾನೆ. ರಸ್ತೆಯಲ್ಲಿ ಈತನ ಕಾರ್ ಅಡ್ಡ ಹಾಕಿದ್ದ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದ. ಈ ವ್ಯಕ್ತಿಯ ಮೇಲೆ ಈಗ ಕೋರಮಂಗಲ ಪೊಲೀಸರು ಎಫ್‌ ಐ ಆರ್ ದಾಖಲು ಮಾಡಿದ್ದಾರೆ.

ಆರೋಪಿ ಅನುಜ್ ಮೋಡಾ

ಆರೋಪಿ ಅನುಜ್ ಮೋಡಾ

ಸಿಗರೇಟ್‌ಗಾಗಿ ಎಫ್ ಐ ಆರ್ ಹಾಕಿಸಿಕೊಂಡ ಆರೋಪಿ 31 ವರ್ಷದ ಅನುಜ್ ಮೋಡಾ ಎಂದು ತಿಳಿದು ಬಂದಿದೆ. ಅನುಜ್ ಇಂದಿರಾನಗರದ ನಿವಾಸಿಯಾಗಿದ್ದ. ಈತ ಮಾರ್ಚ್ 23 ರಂದು ರಾತ್ರಿ ಸಿಗರೇಟ್‌ ಬೇಕು ಎಂದು ಅಕ್ಕ ಪಕ್ಕದ ಏರಿಯಾ ಸುತ್ತಾಡಿದ್ದಾನೆ. ಮೊದಲು ಇಂದಿರಾನಗರ ಹುಡುಕಾಡಿ ನಂತರ ಬಿಟಿಎಂ ಲೇ ಔಟ್ ಹಾಗೂ ಕೋರಮಂಗಲದಲ್ಲಿ ಕಾರ್‌ನಲ್ಲಿ ಸುತ್ತಾಟ ಮಾಡಿದ್ದಾನೆ.

ಕೋರಮಂಗಲದಲ್ಲಿ ಪೊಲೀಸರ ಕೈಗೆ ಸಿಕ್ಕ

ಕೋರಮಂಗಲದಲ್ಲಿ ಪೊಲೀಸರ ಕೈಗೆ ಸಿಕ್ಕ

ಹೀಗೆ ಸಿಗರೇಟ್ ಹುಡುಕಿಕೊಂಡು ತಿರುಗುವಾಗ ಕೋರಮಂಗಲದಲ್ಲಿ ಪೊಲೀಸರ ಕೈಗೆ ಆರೋಪಿ ಸಿಕ್ಕಿ ಹಾಕಿಕೊಂಡಿದ್ದಾನೆ. ಕೋರಮಂಗಲ ಜಂಕ್ಷನ್ ಬಳಿ ಹೆಡ್‌ ಕಾನ್‌ಸ್ಟೆಬಲ್ ಶಿವಕುಮಾರ್ ಆರೋಪಿಯ ಕಾರ್‌ ತಡೆದಿದ್ದಾರೆ. ಕಾರ್‌ ನಿಲ್ಲಿಸಿದ ಅನುಜ್ ಮೋಡಾ ಪೊಲೀಸರಿಗೆನೇ ಸಿಗರೇಟ್‌ ಎಲ್ಲಿ ಸಿಗುತ್ತದೆ ಎಂದು ಪ್ರಶ್ನೆ ಮಾಡಿದ್ದಾನೆ.

24 ಲಕ್ಷ ಮೌಲ್ಯದ ಸಿಗರೇಟ್ ಕಳ್ಳತನ: ಬಳ್ಳಾರಿಯಲ್ಲಿ ಘಟನೆ24 ಲಕ್ಷ ಮೌಲ್ಯದ ಸಿಗರೇಟ್ ಕಳ್ಳತನ: ಬಳ್ಳಾರಿಯಲ್ಲಿ ಘಟನೆ

ಎಫ್‌ ಐ ಆರ್‌ ದಾಖಲು

ಎಫ್‌ ಐ ಆರ್‌ ದಾಖಲು

ಸ್ಥಳದಲ್ಲಿಯೇ ಆತನನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದು, ಅವಾಚ್ಯ ಶಬ್ದದಿಂದ ಬೈದು ಪೊಲೀಸರನ್ನು ತಳ್ಳಿ ತಪ್ಪಿಸಿಕೊಂಡಿದ್ದಾನೆ. ಈ ಕಾರಣ ಲಾಕ್‌ ಡೌನ್‌ ನಿಷೇಧಾಜ್ಞೆ ಉಲ್ಲಂಘನೆ ಮಾಡಿದ್ದಾನೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ ಎಂದು ಆರೋಪಿ ಅನುಜ್ ಮೋಡಾ ಮೇಲೆ ಕೋರಮಂಗಲ ಪೊಲೀಸರು ಎಫ್‌ ಐ ಆರ್ ದಾಖಲು ಮಾಡಿದ್ದಾರೆ.

ಮಧ್ಯ ನಿಷೇಧ, ಸಿಗರೇಟ್ ಬೆಲೆ ಹೆಚ್ಚು

ಮಧ್ಯ ನಿಷೇಧ, ಸಿಗರೇಟ್ ಬೆಲೆ ಹೆಚ್ಚು

ಲಾಕ್‌ ಡೌನ್ ನಿಂದ ಮಧ್ಯಕ್ಕೆ ನಿಷೇಧ ತಂದಿದ್ದು, ಸಿಗರೇಟ್ ಮಾರಾಟ ನಡೆಯುತ್ತಿದೆ. ಆದರೆ, ಲಾಕ್‌ ಡೌನ್ ನಿಂದ ಸಿಗರೇಟ್ ಪೂರೈಕೆಗೆ ತೊಂದರೆ ಆಗಿದೆ. ಸಿಗರೇಟ್ ಸರಿಯಾಗಿ ಸಿಗುತ್ತಿಲ್ಲದ ಕಾರಣ ಬೇಡಿಕೆ ಹೆಚ್ಚಿದೆ. ಒಂದು ಸಿಗರೇಟ್ ಬೆಲೆ 25 ರೂಪಾಯಿ ಆಗಿದೆ. ಅಲ್ಲಲ್ಲಿ ಕೆಲವು ಅಂಗಡಿಗಳಲ್ಲಿ ಸಿಗರೇಟ್ ಮಾರಾಟ ನೆಡೆಯುತ್ತಿದೆ.

English summary
Koramangala police filed FIR against Anuj Mooda, The person was roam 12km to buy cigarette in lockdown period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X