ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋರಮಂಗಲ ಮೇಲ್ಸೇತುವೆ ಕಾರ್ಯ ಈ ವರ್ಷ ಅಲ್ಲ, 2020ಕ್ಕೆ ಪೂರ್ಣ

|
Google Oneindia Kannada News

ಬೆಂಗಳೂರು, ಏ.24: ಕೋರಮಂಗಲ ಮೇಲ್ಸೇತುವೆ ಕಾಮಗಾರಿ 2020ಕ್ಕೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿನನಿತ್ಯ ಸಾವಿರಾರು ವಾಹನಗಳಿಂದ ಗಿಜಿಗುಡುವ ಕೋರಮಂಗಲದಲ್ಲಿ ಫ್ಲೈಓವರ್ ನರ್ಮಾಣವಾದರೆ ಅಷ್ಟು ವಾಹನಗಳ ದಟ್ಟಣೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿತ್ತು.

ಜಯದೇವ ಮೇಲ್ಸೇತುವೆ ತೆರವು ಕಾರ್ಯ ಸದ್ಯಕ್ಕಿಲ್ಲ, ಕಾರಣಗಳು ಇಲ್ಲಿವೆ ಜಯದೇವ ಮೇಲ್ಸೇತುವೆ ತೆರವು ಕಾರ್ಯ ಸದ್ಯಕ್ಕಿಲ್ಲ, ಕಾರಣಗಳು ಇಲ್ಲಿವೆ

ಅಂತೆಯೇ 2019ರ ಡಿಸೆಂಬರ್‌ನಲ್ಲೇ ಕಾಮಗಾರಿಯೂ ಕೂಡ ಮುಗಿಯಬೇಕಿತ್ತು. ಆದರೆ 2020ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಫ್ಲೈಓವರ್ ಓಡಾಟಕ್ಕೆ ಮುಕ್ತವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Koramangala flyover unlikely to be ready before April 2020

ಡೆಡ್ ಲೈನ್ ಮುಗಿಯುವ ಆರು ತಿಂಗಳ ಮೊದಲೇ ಕಾಮಗಾರಿ ಮುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಈ ಫ್ಲೈಓವರ್ ಈಜಿಪುರದಿಂದ ಆರಂಭವಾಗುತ್ತದೆ. ಬಳಿಕ ಸೇಂಟ್ ಜಾನ್ಸ್ ಆಸ್ಪತ್ರೆ ಮೂಲಕ ಹೊಸೂರು ರಸ್ತೆಯನ್ನು ಸೇರಲಿದೆ.

ಪಿಲ್ಲರ್‌ಗಳ ಅಳವಡಿಕೆಗೆ ತಡವಾಗಿದೆ. ಈಗಿರುವ ಮಾಹಿತಿ ಪ್ರಕಾರ ಮುಂದಿನ ವರ್ಷ ಏಪ್ರಿಲ್, ಮೇ ತಿಂಗಳೊಳಗೆ ಫ್ಲೈಓವರ್ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಫ್ಲೈಓವರ್ ನಿರ್ಮಾಣದಿಂದ ಈಜಿಪುರ ಮುಖ್ಯರಸ್ತೆಯಲ್ಲಿ ಆಗುತ್ತಿದ್ದ ಟ್ರಾಫಿಕ್ ಜಾಮ್ ಕಡಿಮೆಯಾಗಲಿದೆ.ನಗರದಲ್ಲಿ ಜಯದೇವ ಮೇಲ್ಸೇತುವೆ ತೆರವು ಕಾರ್ಯ ಕೂಡ ಪ್ರಗತಿಯಲ್ಲಿದೆ.

ಅದು ಕೂಡ ಇನ್ನು ಎರಡು ಅಥವಾ ಮೂರು ತಿಂಗಳಲ್ಲಿ ಆರಂಭಗೊಳ್ಳಲಿದೆ. ಒಟ್ಟಿನಲ್ಲಿ ನಿರ್ಮಾಣ ಕಾರ್ಯವೂ ಸರಿಯಾದ ಸಮಯಕ್ಕೆ ಆಗುತ್ತಿಲ್ಲ, ತೆರವು ಕಾರ್ಯ ಕೂಡ ನಿರ್ದಿಷ್ಟ ಸಮಯದಲ್ಲಿ ಮುಗಿಯುತ್ತಿಲ್ಲ.

English summary
Wait for Koramangala flyover is likely to get Longer for commuters from Koramangala , Sarjapura, Ejipura road and surrounding area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X