ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆಗೆ ಬರದೆ ಹಳ್ಳ ಹಿಡಿದ ಯುಲು ಬೈಸಿಕಲ್ ಯೋಜನೆ, ತೊಂದರೆಯೇ ಹೆಚ್ಚು

|
Google Oneindia Kannada News

ಬೆಂಗಳೂರು, ಮೇ 19: ಆಪ್ ಆಧಾರಿತ ಬಾಡಿಗೆ ಸೈಕಲ್ ವ್ಯವಸ್ಥೆ ಒದಗಿಸುವ ಯುಲು ಕಂಪನಿಯ ಯೋಜನೆ ಜಾರಿಗೆ ಬರದೆ ಹಳ್ಳ ಹಿಡಿದಿದೆ.

ಕೋರಮಂಗಲ ರಸ್ತೆಯಲ್ಲಿ ಎಲ್ಲಂದರಲ್ಲಿ ಮನಸಿಗೆ ಬಂದಂತೆ ನಿಲುಗಡೆ ಮಾಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಿಬಿಎಂಪಿ ಕಾರ್ಪೊರೇಟರ್ ಎಚ್ಚರಿಕೆ ನೀಡಿ ರಸ್ತೆಯಿಂದ ಆಚೆ ಹಾಕಿಸಿದ್ದಾರೆ.

'ಯುಲು' ಬೈಸಿಕಲ್ ಹತ್ತಿ, 10 ರು ನೀಡಿ ಬೆಂಗಳೂರು ಸುತ್ತೋದು ಹೇಗೆ? 'ಯುಲು' ಬೈಸಿಕಲ್ ಹತ್ತಿ, 10 ರು ನೀಡಿ ಬೆಂಗಳೂರು ಸುತ್ತೋದು ಹೇಗೆ?

ಒಟ್ಟು ಒಂದು ಸಾವಿರ ಬೈಸಿಕಲ್ ನ್ನು ಕಂಪನಿ ಅಭಿವೃದ್ಧಿಪಡಿಸಿತ್ತು, ಅದರಲ್ಲಿ 500 ಬೈಸಿಕಲ್ ಕೋರಮಂಗಲದಲ್ಲೇ ಇದೆ. ಫೂಟ್‌ಪಾತ್‌ ಮೇಲೆ ಬೇಕಾಬಿಟ್ಟಿ ನಿಲ್ಲಿಸುತ್ತಿದ್ದಾರೆ. ಆದರೆ ಇದೆಲ್ಲ ಆರೋಪವನ್ನು ಕಂಪನಿ ತಳ್ಳಿ ಹಾಕಿದೆ.

Koramangala corporator warns who park Yulu in a haphazard manner .

ಬಿಬಿಎಂಪಿ ಸದಸ್ಯ ಎಂ ಚಂದ್ರಪ್ಪ ಅವರು ಹೇಳುವ ಪ್ರಕಾರ ಈ ಬಾಡಿಗೆ ಬೈಸಿಕಲ್ ಗಳು ಕೋರಮಂಗಲದಲ್ಲಿ ಸಮಸ್ಯೆಯನ್ನು ಸೃಷ್ಟಿ ಮಾಡಿವೆ. ಎಲ್ಲಿ ನೋಡಿದರೂ ಫೂಟ್‌ಪಾತ್‌ಗಳ ಮೇಲೆ ಬೈಸಿಕ್ ನಿಂತಿರುತ್ತವೆ ಆದರೆ ಯೋಜನೆಯನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ, ಹಾಗಾಗಿ ಈ ಸೈಕಲ್‌ಗಳಿಂದ ಯಾವುದೇ ಪ್ರಯೋಜನವಿಲ್ಲ. ಆ ಬೈಸಿಕಲ್‌ಗಳನ್ನು ಹಿಂತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.ಡಲ್ಟ್ ಸಂಸ್ಥೆಯು ನೀಡಿರುವ ಲೊಕೇಶನ್‌ಗಳಲ್ಲಿ ಅವರು ನಿಲುಗಡೆ ಮಾಡಬೇಕು ಎಂದು ಹೇಳಿದ್ದಾರೆ.

ಡಲ್ಟ್ ರೂಪಿಸಿರುವ ಯೋಜನೆಯಂತೆ ಪ್ರತಿ 250 ರಿಂದ 350 ಮೀಟರ್ ಅಂತರದಲ್ಲಿ ಒಂದು ಸೈಕಲ್ ನಿಲುಗಡೆ ತಾಣ ನಿರ್ಮಿಸಲಾಗುತ್ತದೆ. ಅದರಂತೆ ಸುಮಾರು 25 ಕಿ.ಮೀ ವ್ಯಾಪ್ತಿಯಲ್ಲಿ 345 ಸೈಕಲ್ ನಿಲುಗಡೆ ತಾಣಗಳು ನಿರ್ಮಾಣವಾಗಲಿದೆ ಎನ್ನಲಾಗಿತ್ತು. ಆದರೆ ಯಾವ ನಿಲ್ದಾಣವೂ ಇಲ್ಲದೆ ಬೈಸಿಕಲ್‌ಗಳು ಅನಾಥವಾಗಿ ಪಾದಚಾರಿ ಮಾರ್ಗದ ಮೇಲೆ ನಿಂತಿವೆ.

English summary
Corporator of Koramangala Chandrappa warning to those who park rental bikes in a Haphazard manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X