ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಬಿಗ್‌ ಬಜಾರ್‌ ಮೇಲೆ ದಾಳಿ- ಮಳಿಗೆ ಬಂದ್‌

By Ashwath
|
Google Oneindia Kannada News

Big Bazaar
ಬೆಂಗಳೂರು, ಮೇ 6: ವಿವರ ಹಾಗೂ ಮುದ್ರೆ ಇಲ್ಲದ ಆಹಾರ ಪದಾರ್ಥಗಳ ಪ್ಯಾಕ್‌ಗಳನ್ನು ಮಾರಾಟ ಮಾಡುತ್ತಿದ್ದ ಕೋರಮಂಗಲದ ಬಿಗ್‌ ಬಜಾರ್‌ ಮಳಿಗೆ ಮೇಲೆ ದಿಢೀರ್‌ ದಾಳಿ ನಡೆಸಿದ ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು, ಮಳಿಗೆಯನ್ನು ಬಂದ್‌ ಮಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಕಟಗೊಂಡ ಸುದ್ದಿಯ ಮೇರೆಗೆ ಬಿಬಿಎಂಪಿಯ ಆರೋಗ್ಯ ಇಲಾಖೆ ಮತ್ತುಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಾಳಿ ನಡೆಸಿದ್ದು, ಬಿಗ್‌ ಬಜಾರ್‌ನಲ್ಲಿ ಮಾರಾಟ ಮಾಡುತ್ತಿದ್ದ ಎಲ್ಲಾ ವಸ್ತುಗಳ ವಿವರವನ್ನು ನೀಡಬೇಕು ಮತ್ತು ಮುಂದಿನ ಮುಂದಿನ ಆದೇಶ ನೀಡುವವರೆಗೂ ಮಳಿಗೆಯನ್ನು ತೆರೆಯಬಾರದು ಎಂದು ಬಿಗ್‌ ಬಜಾರ್‌ ವ್ಯವಸ್ಥಾಪಕರಿಗೆ ನೋಟಿಸ್‌ ನೀಡಿದ್ದಾರೆ.[ಬಿಬಿಎಂಪಿ: ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ]

ಸರಕುಗಳಲ್ಲಿ ಉತ್ಪಾದನೆ ದಿನಾಂಕ, ಅವಧಿ ಮುಗಿಯುವ ದಿನಾಂಕ ಬ್ಯಾಚ್ ಸಂಖ್ಯೆ ಇರಲಿಲ್ಲ. ಕೆಲವೊಂದು ವಸ್ತುಗಳಿಗೆ ಲೇಬಲ್‌ ಹಾಕದಿರುವ ವಿಚಾರ ದಾಳಿ ವೇಳೆ ಕಂಡು ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚನ್ನಾ ದಾಲ್‌ನ ಪ್ಯಾಕ್‌ಗಳ ಲೇಬಲ್‌ ಯಾಕಿಲ್ಲ ಎಂದು ಬಿಗ್‌ ಬಜಾರ್‌ ಸಿಬ್ಬಂದಿಯನ್ನು ಪ್ರಶ್ನಿಸಿದರೆ "ಅದು ಕಳಚಿ ಬಿದ್ದಿರಬಹುದು, ಅಥವಾ ಗ್ರಾಹಕರು ಉದ್ದೇಶಪೂರ್ವ‌ಕವಾಗಿ ಕಿತ್ತಿರಬಹುದು ಎಂಬ ಉತ್ತರವನ್ನು ನೀಡಿದರು" ಎಂದು ಅಧಿಕಾರಿಗಳು ತಿಳಿಸಿದರು.[ಬೆಂಗಳೂರಿನಲ್ಲಿ ತಲೆ ಎತ್ತಿದೆ ವಾಟರ್‌ ಮಾಫಿಯಾ]

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿಯಮಾವಳಿ ಪ್ರಕಾರ ಅಹಾರ ಸರಕನ್ನು ಮಾರಾಟ ಮಾಡುವಾಗ ಅವುಗಳ ಗುಣಮಟ್ಟವನ್ನು ಕಾಯ್ದುಕೊಳ್ಳದಿದ್ದರೆ ಮಾರಾಟ ಮಾಡುವ ಸಂಸ್ಥೆ ವಿರುದ್ಧ ಒಂದು ಲಕ್ಷದಿಂದ ಹತ್ತು ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ.

English summary
The BBMP’s Health department has served a notice on Big Bazaar’s Koramangala outlet for allegedly selling misbranded food items.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X