ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪಳ ಮೆಡಿಕಲ್ ಕಾಲೇಜು ವಿವಾದ ಹೈಕೋರ್ಟ್ ಅಂಗಳಕ್ಕೆ

By Nayana
|
Google Oneindia Kannada News

ಬೆಂಗಳೂರು, ಜೂನ್ 23: ನಾಲ್ಕನೇ ವರ್ಷದ ಎಂಬಿಬಿಎಸ್ ಕೋರ್ಸ್‌ಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನಿರಾಕರಿಸಿರುವ ಕ್ರಮ ಪ್ರಶ್ನಿಸಿ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಕಾಲೇಜು ಹೈಕೋರ್ಟ್‌ ಮೆಟ್ಟಿಲೇರಿದೆ.

ನ್ಯಾಯಮೂರ್ತಿಗಳು ಸೀಟು ಹಂಚಿಕೆಗೆ ನೀಟ್ ಜಾರಿಗೊಳಿಸುವುದು ಸ್ವಾಗತಾರ್ಹ, ಆದರೆ ಒಳ್ಳೆಯ ಮೆರಿಟ್ ಇದ್ದರೂ ಕೆಲವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟು ಸಿಗದಿರುವಂತಹ ಪರಿಸ್ಥಿತಿ ಇದೆ.

ಕೆಎಎಸ್‌ ನೇಮಕಾತಿ ಹಗರಣ: ಸಂದರ್ಶನಕ್ಕೆ ಅನುಮತಿ ಕೋರಿದ ಕೆಪಿಎಸ್‌ಸಿಕೆಎಎಸ್‌ ನೇಮಕಾತಿ ಹಗರಣ: ಸಂದರ್ಶನಕ್ಕೆ ಅನುಮತಿ ಕೋರಿದ ಕೆಪಿಎಸ್‌ಸಿ

ಅದನ್ನು ಹೇಗಾದರೂ ತಪ್ಪಿಸಬೇಕು. ಮ್ಯಾನೇಜ್‌ಮೆಂಟ್ ಕೋಟಾ ಹೆಸರಿನಲ್ಲಿ ಹೆಚ್ಚಿನ ಹಣ ವಸೂಲು ಮಾಡಲಾಗುತ್ತಿದೆ. ಒಬ್ಬ ವಿದ್ಯಾರ್ಥಿಯ ಪ್ರವೇಶ ಶುಲ್ಕ 5 ಲಕ್ಷಕ್ಕಿಂತ ಕಡಿಮೆ ಇರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

Koppal medical college files petition before HC

ಈ ಅರ್ಜಿಯು ಹಿರಿಯ ನ್ಯಾ. ಎಚ್‌.ಜಿ. ರಮೇಶ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಕೆಲ ಕಾಲ ವಾದ ಆಲಿಸಿದ ಬಳಿಕ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಈ ವರ್ಷ 150 ವೈದ್ಯ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅನುಮತಿ ಕೋರಲಾಗಿತ್ತು, ಆದರೆ 2018ರ ಮೇ 31ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಳುಹಿಸಿರುವ ಮಾಹಿತಿಯಂತೆ ಕಳೆದ ವರ್ಷ ನಡೆಸಿದ ಪರಿಶೀಲನೆಯಲ್ಲಿ ಮೂಲಸೌಕರ್ಯ ಕೊರತೆ ಇರುವುದು ಕಂಡುಬಂದಿರುವುದರಿಂದ ಈ ವರ್ಷ ಎಂಬಿಬಿಎಸ್ ಪ್ರವೇಶಕ್ಕೆ ಅನುಮತಿ ನಿರಾಕರಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

English summary
Koppal Institute of Medical Sciences and College has filed petition in high court challenging the central government order on denying admission for fourth semester of MBBS course.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X