ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಪಾರ್ಕ್ ಗಳ ಆಕರ್ಷಣೆ ಹೆಚ್ಚಿಸಿದ 'ಕೂಚಿ'

By ನ್ಯೂಸ್ ಡೆಸ್ಕ್
|
Google Oneindia Kannada News

ಬೆಂಗಳೂರು, ಜೂನ್ 22: 2015ರಲ್ಲಿ ಬೆಂಗಳೂರಿನ ಪಾರ್ಕ್ ಗಳಲ್ಲಿ ಮೊದಲಿಗೆ ಕಾಣಿಸಿಕೊಂಡ ಕೂಚಿ ವ್ಯಾಯಾಮ ಪರಿಕರಗಳು ಈಗ ಹೆಚ್ಚು ಜನಪ್ರಿಯವಾಗುತ್ತಿವೆ.

ಬೆಂಗಳೂರಿನ ನಾಗರಿಕರು ತಮ್ಮ ಆರೋಗ್ಯ ರಕ್ಷಣೆ ಮತ್ತು ಉತ್ತಮ ವ್ಯಾಯಾಮ ಪದ್ಧತಿಯನ್ನು ರೂಢಿಸಿಕೊಳ್ಳಲು ಅನುಕೂಲ ಆಗುವಂತೆ ಅಂತಾರಾಷ್ಟ್ರೀಯ ಖ್ಯಾತಿಯ ಕೂಚಿ ಪ್ಲೇ ಗ್ರೂಪ್ 25 ಉದ್ಯಾನವನಗಳಲ್ಲಿ ಹೊರಾಂಗಣ ಜಿಮ್ ಸಾಧನಗಳನ್ನು ಅಳವಡಿಸಿದೆ.

ಕೂಚಿ ಪ್ಲೇ ಎಲ್ಲಾ ವರ್ಗದ ಮತ್ತು ಎಲ್ಲಾ ವಯೋಮಾನದವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಕ್ರೀಡಾ ಮತ್ತು ವ್ಯಾಯಾಮ ಸಾಧನಗಳನ್ನು ಪೂರೈಸುವ ಜಾಗತಿಕ ಮಟ್ಟದ ಸಂಸ್ಥೆಯಾಗಿದೆ.

ಗೆಟ್‍ಫಿಟ್ ಇಂಡಿಯಾ ಉಪಕ್ರಮದಡಿ ಈ ವರ್ಷ ಇನ್ನೂ 9 ಉದ್ಯಾನವನಗಳಿಗೆ ಜಿಮ್ ಸಾಧನಗಳನ್ನು ಅಳವಡಿಸುವ ಯೋಜನೆಯನ್ನು ಕೂಚಿ ಪಡೆದುಕೊಂಡಿದೆ. ಈ ಸಾಧನಗಳನ್ನು ಅತ್ಯಂತ ಸುಲಭವಾಗಿ ಬಳಸಬಹುದಾಗಿದ್ದು, ಈ ಮೂಲಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಅಲ್ಲದೇ, ಆರೋಗ್ಯವನ್ನು ಒಂದು ಸಮತೋಲಿತ ರೀತಿಯಲ್ಲಿ ಕಾಪಾಡಿಕೊಳ್ಳುವಲ್ಲಿ ಈ ಸಾಧನಗಳು ನೆರವಾಗುತ್ತವೆ.

ಹೊರಾಂಗಣ ಜಿಮ್ ಸಾಧನ

ಹೊರಾಂಗಣ ಜಿಮ್ ಸಾಧನ

ಒಬ್ಬ ವ್ಯಕ್ತಿಯ ದೇಹದ ತೂಕಕ್ಕೆ ಅನುಗುಣವಾಗಿ ಮತ್ತು ಹೊಂದಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಿರುವ ಈ ಸಾಧನಗಳ ಬಳಕೆ ಮಾಡಬಹುದಾಗಿದೆ. ಅದೇರೀತಿ ಗಾಯ ಅಥವಾ ಅನಾಹುತಗಳು ಸಂಭವಿಸದ ರೀತಿಯಲ್ಲಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಹೊರಾಂಗಣ ಜಿಮ್ ಸಾಧನಗಳಲ್ಲಿ ಕಸರತ್ತು ಅಥವಾ ವ್ಯಾಯಾಮ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಮಾಡುವ ಉದ್ದೇಶ

ಉದ್ಯಾನವನಗಳ ಆಕರ್ಷಣೆ

ಉದ್ಯಾನವನಗಳ ಆಕರ್ಷಣೆ

ಬೆಂಗಳೂರಿನ ಖ್ಯಾತ ಉದ್ಯಾನವನಗಳಾದ ಸ್ಯಾಂಕಿ ಕೆರೆ, ಸ್ವಾಮಿ ವಿವೇಕಾನಂದ ಪಾಕ್, ಕೆಸಿ ಜನರಲ್ ಆಸ್ಪತ್ರೆ ಹಿಂಭಾಗ ಇರುವ ಮಲ್ಲೇಶ್ವರಂ ಪಾರ್ಕ್, ಯಲಹಂಕ ಪಿಯು ಕಾಲೇಜು, ಯಲಹಂಕ ಪದವಿ ಕಾಲೇಜು ಸೇರಿದಂತೆ ಹಲವು ಕಡೆಗಳಲ್ಲಿ ಕೂಚಿ ವ್ಯಾಯಾಮ ಸಾಧನಗಳನ್ನು ಈಗಾಗಲೇ ಅಳವಡಿಸಲಾಗಿದೆ. ಈ ಸಾಧನಗಳನ್ನು ಬಳಸುವಾಗ ಏನೇನು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಇವುಗಳನ್ನು ಬಳಸುವ ಬಗೆ ಹೇಗೆ, ಸುರಕ್ಷತಾ ಕ್ರಮಗಳೇನು ಎಂಬುದರ ಸಂಪೂರ್ಣ ಸೂಚನೆಗಳನ್ನು ಈ ಸಾಧನಗಳಲ್ಲಿ ನಮೂದಿಸಲಾಗಿದೆ.

ಹೊರಾಂಗಣ ಜಿಮ್ ಸೌಲಭ್ಯ

ಹೊರಾಂಗಣ ಜಿಮ್ ಸೌಲಭ್ಯ

ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಹೊರಾಂಗಣ ಜಿಮ್ ಸೌಲಭ್ಯಗಳು ಅತ್ಯಂತ ಜನಪ್ರಿಯಗೊಳ್ಳುತ್ತಿವೆ. ಉತ್ತಮ ಆರೋಗ್ಯ ರಕ್ಷಣೆಯ ಗುರಿಯನ್ನು ಈ ಮೂಲಕ ಸಾಧಿಸಿದಂತಾಗುತ್ತದೆ. ಇಂತಹ ಸೌಲಭ್ಯಗಳನ್ನು ಪ್ರತಿಯೊಬ್ಬ ನಾಗರಿಕರಿಗೂ ತಲುಪಬೇಕೆಂಬುದು ಕೂಚಿ ಪ್ಲೇನ ಉದ್ದೇಶವಾಗಿದೆ.ಸರ್ಕಾರವೂ ಇಂತಹ ಉಪಕ್ರಮಗಳನ್ನು ಕೈಗೊಂಡು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ

ಫಿಟ್‍ನೆಸ್ ಪಾರ್ಕ್‍ಗಳ ಸ್ಥಾಪನೆ

ಫಿಟ್‍ನೆಸ್ ಪಾರ್ಕ್‍ಗಳ ಸ್ಥಾಪನೆ

ಪಾಶ್ಚಿಮಾತ್ಯ ದೇಶಗಳಲ್ಲಿ ಸರ್ಕಾರಗಳು ಇಂತಹ ಫಿಟ್‍ನೆಸ್ ಪಾರ್ಕ್‍ಗಳ ಸ್ಥಾಪನೆಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿವೆ. ಈ ಪಾರ್ಕ್‍ಗಳಲ್ಲಿನ ಸಾಧನಗಳನ್ನು ಬಳಸಿ ವ್ಯಾಯಾಮ ಮಾಡುತ್ತಿರುವುದರಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ಜತೆಗೆ ಉತ್ತಮ ಫಲಿತಾಂಶವೂ ಬರುತ್ತಿದೆ. ಇವುಗಳ ಬಳಕೆಯಿಂದ ಜನರ ಆರೋಗ್ಯದಲ್ಲಿ ವೃದ್ಧಿಯಾಗಿ ಅವರು ದೈಹಿಕವಾಗಿ ಫಿಟ್ ಆಗುತ್ತಿದ್ದಾರೆ.

English summary
Bengaluru-based ‘Koochie Play Systems' provides outdoor fitness equipments promoting health and fitness, among public free of cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X