ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಮ್ಮ ದಮ್ಮಯ್ಯ.. ಯಾರಾದರೂ ಸಹಾಯ ಮಾಡಿ.. ಅಪಾರ್ಟ್ಮೆಂಟ್ ನಿವಾಸಿಗಳ ಅಳಲು

|
Google Oneindia Kannada News

ಬೆಂಗಳೂರು, ಏಪ್ರಿಲ್ 8: ಮಾರಣಾಂತಿಕ ಕೊರೊನಾ ವೈರಸ್ ನ ತಡೆಗಟ್ಟಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ದೇಶವ್ಯಾಪಿ ಲಾಕ್ ಡೌನ್ ಘೋಷಿಸಲಾಗಿದೆ. ಲಾಕ್ ಡೌನ್ ನಿಂದ ಜನ ಸಂಕಷ್ಟಕ್ಕೀಡಾಗಿರುವುದು ನಿಜ. ಆದರೆ ಮಹಾಮಾರಿಗೋಸ್ಕರ ಅದಕ್ಕೂ ಸೈ ಎಂದು ಮನೆಯಲ್ಲಿ ಕೂತ ಜನರಿಗೆ ಸಿಗಬೇಕಾದ ಮೂಲಸೌಕರ್ಯಗಳೇ ಸಿಗದಾದಾಗ, ಅವರ ಗೋಳು ಕೇಳುವವರು ಯಾರು.?

ಇಂಥದ್ದೊಂದು ಸನ್ನಿವೇಶ ಇದೀಗ ಬೆಂಗಳೂರು ಉತ್ತರದಲ್ಲಿರುವ ಕೋಲ್ಟೆ ಪಾಟೀಲ್ ರಾಗಾ ಅಪಾರ್ಟ್ಮೆಂಟ್ ನಲ್ಲಿರುವ ನಿವಾಸಿಗಳಿಗೆ ಎದುರಾಗಿದೆ. ಕಷ್ಟ ಪಟ್ಟು ದುಡಿದ ದುಡ್ಡನ್ನೆಲ್ಲ ಕೂಡಿಟ್ಟು, ಸ್ವಂತ ಸೂರಿಗಾಗಿ ಲಕ್ಷಾಂತರ ರೂಪಾಯಿ ಸುರಿದು, ಕೋಲ್ಟೆ ಪಾಟೀಲ್ ರಾಗಾ ಅಪಾರ್ಟ್ಮೆಂಟ್ ನಲ್ಲಿ ಫ್ಲಾಟ್ ಖರೀದಿಸಿದವರಿಗೆ ಈಗ ಅತ್ತ ಬೀದಿಯಲ್ಲೂ ಅಲ್ಲದ, ಇತ್ತ ಮನೆಯಲ್ಲೂ ಅಲ್ಲದ ಬದುಕಾಗಿದೆ.

ಖಾಸಗಿ ಅಪಾರ್ಟ್ಮೆಂಟ್ ಈಜುಕೊಳಕ್ಕೂ ನುಗ್ಗಿದ ಕೊರೊನಾ ಭೀತಿ!ಖಾಸಗಿ ಅಪಾರ್ಟ್ಮೆಂಟ್ ಈಜುಕೊಳಕ್ಕೂ ನುಗ್ಗಿದ ಕೊರೊನಾ ಭೀತಿ!

ಕಳೆದ ಎರಡು ದಿನಗಳಿಂದ ಕರೆಂಟ್ ಇಲ್ಲದೆ ಕತ್ತಲೆಯಲ್ಲಿ ದಿನಗಳನ್ನು ಕೋಲ್ಟೆ ಪಾಟೀಲ್ ರಾಗಾ ಅಪಾರ್ಟ್ಮೆಂಟ್ ನಿವಾಸಿಗಳು ಕಳೆಯುತ್ತಿದ್ದಾರೆ. ನೀರಿಲ್ಲದೆ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇವರ ಈ ಸಮಸ್ಯೆಗೆ ಕಾರಣವಾಗಿರುವುದು ಅಪಾರ್ಟ್ಮೆಂಟ್ ನ ಬಿಲ್ಡರ್.

ಲಾಕ್ ಡೌನ್ ಸಂದರ್ಭದಲ್ಲಿ ನಿವಾಸಿಗಳ ಕೋರಿಕೆಗೆ ಸ್ಪಂದಿಸದೆ ಕೈಚೆಲ್ಲಿ ನಿಂತಿರುವ ಬಿಲ್ಡರ್ ನ ನಡೆ ಅಲ್ಲಿನ ಜನರನ್ನು ನಡು ನೀರಿನಲ್ಲಿ ಬಿಟ್ಟಂತಾಗಿಸಿದೆ.

ಕಗ್ಗತ್ತಲಲ್ಲಿ ದಿನ ದೂಡುತ್ತಿರುವ ಜನ

ಕಗ್ಗತ್ತಲಲ್ಲಿ ದಿನ ದೂಡುತ್ತಿರುವ ಜನ

50-60 ಲಕ್ಷ ರೂಪಾಯಿ ನೀಡಿ ಕೋಲ್ಟೆ ಪಾಟೀಲ್ರಾಗಾ ಅಪಾರ್ಟ್ಮೆಂಟ್ ನಲ್ಲಿ ಫ್ಲ್ಯಾಟ್ ಖರೀದಿ ಮಾಡಿದ ಜನ ಕಳೆದ ಎರಡು ದಿನಗಳಿಂದ ಕಗ್ಗತ್ತಲಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಹಾಗಂತ ಇದು ಬೆಸ್ಕಾಂ ಸಮಸ್ಯೆ ಅಲ್ಲ. ಕೋಲ್ಟೆ ಪಾಟೀಲ್ ರಾಗಾ ಅಪಾರ್ಟ್ಮೆಂಟ್ ನಲ್ಲಿ ವಿದ್ಯುತ್ ಸಂಪರ್ಕದ ವ್ಯವಸ್ಥೆಯೇ ಸರಿ ಇಲ್ಲ. ''ಈ ಬಗ್ಗೆ ಹಲವು ಬಾರಿ ಬಿಲ್ಡರ್ ಗೆ ದೂರು ನೀಡಿದ್ದರೂ, ಅದಕ್ಕೆ ಕ್ಯಾರೆ ಎಂದಿಲ್ಲ. ಲಾಕ್ ಡೌನ್ ವೇಳೆ ವಿದ್ಯುತ್ ವ್ಯವಸ್ಥೆ ಹದಗೆಟ್ಟಿದ್ದು, ಸಂಪರ್ಕ ಕಡಿತಗೊಂಡಿದೆ. ಬೆಸ್ಕಾಂ ಅವರನ್ನು ಕೇಳಿದರೆ, ಅಪಾರ್ಟ್ಮೆಂಟ್ ನಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆ ಮೊದಲು ಸರಿ ಹೋಗಬೇಕು ಅಂತಾರೆ. ಕರೆಂಟ್ ವ್ಯವಸ್ಥೆ ಸರಿ ಮಾಡಲು ಬಿಲ್ಡರ್ ಗೆ ಫೋನ್, ಈಮೇಲ್ ಮಾಡಿದರೂ ಆತ ಪ್ರತಿಕ್ರಿಯೆ ಕೊಡುತ್ತಿಲ್ಲ. ಹೀಗಾಗಿ ಕಳೆದ ಎರಡು ದಿನಗಳಿಂದ ಕರೆಂಟ್ ಇಲ್ಲದೆ ಕಗ್ಗತ್ತಲಲ್ಲಿದ್ದೇವೆ'' ಅಂತಾರೆ ಅಲ್ಲಿನ ನಿವಾಸಿಗಳು.

ನೀರೂ ಇಲ್ಲ.!

ನೀರೂ ಇಲ್ಲ.!

ಕರೆಂಟ್ ಇಲ್ಲದ ಕಾರಣ, ಲಿಫ್ಟ್ ವರ್ಕ್ ಆಗುತ್ತಿಲ್ಲ. ಇದರಿಂದ ಗರ್ಭಿಣಿ ಸ್ತ್ರೀಯರು, ವಯಸ್ಸಾದವರು ಆಯಾಸದಿಂದಲೇ ಮೆಟ್ಟಿಲು ಹತ್ತಿ-ಇಳಿದು ಹೈರಾಣಾಗುತ್ತಿದ್ದಾರೆ. ಇನ್ನೊಂದು ಕಡೆ ಕತ್ತಲಲ್ಲಿರುವ ಜನಕ್ಕೆ ಕುಡಿಯುವ ನೀರು ಸಿಗದಂತಾಗಿದೆ. ''ಕರೆಂಟ್ ಇಲ್ಲದೆ, ಮೋಟಾರು ಓಡುತ್ತಿಲ್ಲ. ಇದರಿಂದ ಮನೆಗಳಲ್ಲಿ ನೀರು ಬರುತ್ತಿಲ್ಲ'' ಎಂದು ಅಲ್ಲಿನ ನಿವಾಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕೊರೊನಾ ಭೀತಿ: ಅಪಾರ್ಟ್ಮೆಂಟ್, ಬಡಾವಣೆಗಳಿಗೆ ಮಹತ್ವದ ಸೂಚನೆಕೊರೊನಾ ಭೀತಿ: ಅಪಾರ್ಟ್ಮೆಂಟ್, ಬಡಾವಣೆಗಳಿಗೆ ಮಹತ್ವದ ಸೂಚನೆ

ಹಾಳಾದ ಫ್ರಿಡ್ಜ್, ಕಂಗೆಟ್ಟ ಮಕ್ಕಳು

ಹಾಳಾದ ಫ್ರಿಡ್ಜ್, ಕಂಗೆಟ್ಟ ಮಕ್ಕಳು

ಕರೆಂಟ್ ಕೈಕೊಟ್ಟ ಕಾರಣದಿಂದಾಗಿ ನಿವಾಸಿಗಳಿಗೆ ಸಮರ್ಪಕ ಅಹಾರ ವ್ಯವಸ್ಥೆ ಇಲ್ಲದಂತಾಗಿದೆ. ಫ್ರಿಡ್ಜ್ ನಲ್ಲಿ ಸಂಗ್ರಹಿಸಿಟ್ಟ ಆಹಾರ ಪದಾರ್ಥಗಳೆಲ್ಲವೂ ಕರೆಂಟ್ ಇಲ್ಲದೆ ಕೆಟ್ಟಿವೆ. ಮಕ್ಕಳಿಗೆ ಕೊಡುವ ಹಾಲಿಗೂ ಅಲ್ಲಿ ಬರ ಎದುರಾಗಿದೆ. ನೀರು-ಕರೆಂಟ್ ಇಲ್ಲದೆ ಅಡುಗೆಯೂ ಮಾಡದಂತಾಗಿದೆ.

ವರ್ಕ್ ಆಗದ ವರ್ಕ್ ಫ್ರಮ್ ಹೋಮ್

ವರ್ಕ್ ಆಗದ ವರ್ಕ್ ಫ್ರಮ್ ಹೋಮ್

ಕರೆಂಟ್ ಇಲ್ಲದಿರುವುದರಿಂದ ಅಲ್ಲಿನ ಟೆಕ್ಕಿಗಳು ವರ್ಕ್ ಫ್ರಮ್ ಹೋಮ್ ಮಾಡಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ಆಫೀಸ್ ಕೆಲಸ ಮಾಡುವುದಿರಲಿ, ಕರೆಂಟ್ ಮತ್ತು ನೀರಿಲ್ಲದೆ ಮನೆಗೆಲಸವೂ ಮಾಡುವುದು ಅಸಾಧ್ಯವಾಗಿದೆ. ಇನ್ನು, ವಿದ್ಯುತ್ ವ್ಯವಸ್ಥೆ ಇಲ್ಲದ ಕೋಲ್ಟೆ ಪಾಟೀಲ್ ರಾಗಾ ಅಪಾರ್ಟ್ಮೆಂಟ್ ಮಂದಿಯನ್ನು ಬಿಸಿಲ ಬೇಗೆ ಮತ್ತಷ್ಟು ಕಂಗೆಡಿಸಿದೆ. ತಿರುಗದ ಫ್ಯಾನ್, ಆನ್ ಆಗದ ಎಸಿ ಜನರ ಮಂಡೆ ಬಿಸಿ ಮಾಡಿದೆ. ಮಕ್ಕಳಂತೂ ಧಗೆಯಿಂದ ಬಳಲುತ್ತಿದ್ದಾರೆ.

ಬಿಲ್ಡರ್ ಗೆ ಜವಾಬ್ದಾರಿ ಬೇಡ್ವಾ.?

ಬಿಲ್ಡರ್ ಗೆ ಜವಾಬ್ದಾರಿ ಬೇಡ್ವಾ.?

ಅರ್ಧ ಕೋಟಿಗೊಂದರಂತೆ ಫ್ಲಾಟ್ ಮಾರಾಟ ಮಾಡಿರುವ ಬಿಲ್ಡರ್ ಮಹಾಶಯನಿಗೆ ಈ ಸಮಸ್ಯೆಗಳಾವುದು ಕಾಣುತ್ತಿಲ್ಲ. ಪ್ರತಿ ತಿಂಗಳು ನಿವಾಸಿಗಳಿಂದ ತಪ್ಪದೆ ಮೇನ್ಟೇನೆನ್ಸ್ ಚಾರ್ಜ್ ತೆಗೆದುಕೊಳ್ಳುವ ಬಿಲ್ಡರ್ ಈ ಸಂಕಷ್ಟದ ಸಮಯದಲ್ಲಿ ಸ್ಪಂದಿಸುತ್ತಲೇ ಇಲ್ಲ. ಫ್ಲಾಟ್ ಮಾರಾಟ ಮಾಡುವಾಗ ಸೆಕ್ಯೂರಿಟಿ, ನೀರು, ಕರೆಂಟ್ ಸೇರಿದಂತೆ ಎಲ್ಲಾ ವ್ಯವಸ್ಥೆ ಕೊಡ್ತೀನಿ ಅಂತ ಹೇಳಿದ್ದ ಬಿಲ್ಡರ್, ಅದ್ಯಾವುದನ್ನೂ ಕೊಡದೆ ಜನರನ್ನು ಕತ್ತಲೆಗೆ ತಳ್ಳಿದ್ದಾನೆ. ಈ ಕೋಲ್ಟೆ ಪಾಟೀಲ್ ರಾಗಾ ಅಪಾರ್ಟ್ಮೆಂಟ್ ನಲ್ಲಿ ಯಾಕಾದರೂ ಫ್ಲಾಟ್ ಖರೀದಿಸಿದ್ವೋ, ಅಂತ ಜನ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ಪರಿಹಾರ ಸಿಗುತ್ತಾ.?

ಪರಿಹಾರ ಸಿಗುತ್ತಾ.?

ಲಾಕ್ ಡೌನ್ ಗೆ ಗೌರವ ಕೊಟ್ಟು ಮನೆಯಲ್ಲೇ ಉಳಿದಿರುವ ಕೋಲ್ಟೆ ಪಾಟೀಲ್ ರಾಗಾ ಅಪಾರ್ಟ್ಮೆಂಟ್ ನಿವಾಸಿಗಳ ಸಮಸ್ಯೆಗೆ ಸ್ಪಂದಿಸುವವರು ಯಾರು.? ಬೇರೆ ಸಮಯವಾಗಿದ್ದರೆ, ಸನ್ನಿವೇಶ ಬೇರೆ ಇರುತ್ತಿತ್ತೇನೋ.. ಆದರೀಗ, ಲಾಕ್ ಡೌನ್ ನಿಂದ ಕಂಗಾಲಾಗಿರುವ ಅವರಿಗೆ ಸೂಕ್ತ ವ್ಯವಸ್ಥೆ ಒದಗಿಸುವ ಹೊಣೆ ಈಗ ಜನಪ್ರತಿನಿಧಿಗಳ ಮೇಲಿದೆ. ನಿಮ್ಮ ದಮ್ಮಯ್ಯ.. ಯಾರಾದರೂ ಸಹಾಯ ಮಾಡಿ.. ಅಂತ ಅಪಾರ್ಟ್ಮೆಂಟ್ ನಿವಾಸಿಗಳು ಬೇಡಿಕೊಳ್ಳುತ್ತಿದ್ದಾರೆ.

English summary
Kolte Patil Raaga Apartment residents are suffering without power since 2 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X