ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದ ಯುವತಿ ಅಂಗಾಂಗ ದಾನ: ಏಳು ಜನರ ಬದುಕಿನ ನವ'ಚೈತ್ರ'

|
Google Oneindia Kannada News

ಬೆಂಗಳೂರು, ಫೆಬ್ರವರಿ 12: ವೈವಾಹಿಕ ಜೀವನದ ಹೊಸ್ತಿಲಿನಲ್ಲಿದ್ದ ಯುವತಿಯು ಆರತಕ್ಷತೆ ದಿನವೇ ಅಸ್ವಸ್ಥಗೊಂಡ ಮದುಮಗಳ ಮೆದುಳು ನಿಷ್ಕ್ರಿಯ (ಬ್ರೈನ್ ಡೆಡ್) ಆಗಿರುವಂತಹ ಮನ ಕಲಕುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ. ಬ್ರೈನ್ ಸ್ಟ್ರೋಕ್ ನಿಂದಾಗಿ ಮೃತಪಟ್ಟ ಯುವತಿ ಅಂಗಾಂಗ ದಾನದ ಮೂಲಕ ಏಳು ಜನರ ಬದುಕಿನಲ್ಲಿ ಚೈತ್ರದ ಬೆಳಕು ಮೂಡಿದೆ.
ಕಳೆದ ಫೆಬ್ರವರಿ 6ರಂದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೋಡಿಚರವು ಗ್ರಾಮದ ಕೆ ವಿ ರಾಮಪ್ಪ ದಂಪತಿಯ ಪುತ್ರಿ 26 ವರ್ಷದ ಚೈತ್ರಾ ವೈವಾಹಿಕ ಬದುಕಿನ ಹೊಸ್ತಿಲಿನಲ್ಲಿದ್ದರು. ಮದುವೆ ಆರತಕ್ಷತೆಯ ದಿನ ಸಂಬಂಧಿಕರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ವಧು ಚೈತ್ರ ದಿಢೀರನೇ ಕುಸಿದು ಬಿದ್ದರು.

ಇನ್‌ಸ್ಟಾದಲ್ಲಿ ಪರಿಚಯವಾದ ಜೋಡಿಯ ಮದುವೆಯ ಆರತಕ್ಷತೆ ಮೆಟಾವರ್ಸ್‌ನಲ್ಲಿ!ಇನ್‌ಸ್ಟಾದಲ್ಲಿ ಪರಿಚಯವಾದ ಜೋಡಿಯ ಮದುವೆಯ ಆರತಕ್ಷತೆ ಮೆಟಾವರ್ಸ್‌ನಲ್ಲಿ!

ಮದುವೆ ಮನೆಯಲ್ಲೇ ಕುಸಿದು ಬಿದ್ದ ಚೈತ್ರಾರನ್ನು ತಕ್ಷಣವೇ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿನ ವೈದ್ಯರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ ನಂತರ ವೈದ್ಯರು ಪರೀಕ್ಷೆ ನಡೆಸಿದ್ದು, ಬ್ರೈನ್ ಡೆಡ್ ಆಗಿರುವ ಬಗ್ಗೆ ಗೊತ್ತಾಗಿದೆ.

ಚಾಮರಾಜನಗರ; ಕೋವಿಡ್‌ಗೆ ಸ್ನೇಹಿತ ಬಲಿ, ವಿಧವೆ ಬಾಳಿಗೆ ಆಸರೆಯಾದ ಯುವಕ!ಚಾಮರಾಜನಗರ; ಕೋವಿಡ್‌ಗೆ ಸ್ನೇಹಿತ ಬಲಿ, ವಿಧವೆ ಬಾಳಿಗೆ ಆಸರೆಯಾದ ಯುವಕ!

ಮಗಳ ಸಾವಿನಿಂದ ಪೋಷಕರ ಆಕ್ರಂದನ:
ನವದಾಂಪತ್ಯದ ಹೊಸ್ತಿಲಿನಲ್ಲಿದ್ದ ಮಗಳನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ವೈದ್ಯರ ಈ ಮಾತನ್ನು ಕೇಳಿದ ಸಂಬಂಧಿಕರಿಗೆ ಮುಗಿಲು ಕಳಚಿ ಬಿದ್ದಂತಾಯಿತು, ಮಗಳನ್ನು ಕಳೆದುಕೊಂಡ ಆಪ್ತರ ಆಕ್ರಂದನ ಮುಗಿಲು ಮುಟ್ಟಿತ್ತು.

Kolar: Bride Dies Due to Brain Dead, Parents Donated Her Body Organs to Nimhans Bengaluru

ಮಗಳ ಅಂಗಾಂಗ ದಾನಕ್ಕೆ ಪೋಷಕರ ಸಮ್ಮತಿ:
ಚೈತ್ರಾ ಸಂಬಂಧಿಕರಲ್ಲಿ ಧೈರ್ಯ ತುಂಬಿದ ನಿಮ್ಹಾನ್ಸ್ ಆಸ್ಪತ್ರೆ ವೈದ್ಯರು, ಆಕೆ ಅಂಗಾಂಗ ದಾನ ಮಾಡುವುದರ ಮೂಲಕ ಹಲವರ ಬದುಕಿಗೆ ಬೆಳಕಾಗಬಹುದು ಎಂಬ ಸಲಹೆ ನೀಡಿದರು. ವೈದ್ಯರ ಸಲಹೆಗೆ ಒಪ್ಪಿಕೊಂಡ ಸಂಬಂಧಿಕರು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದರು. ತದನಂತರ ಮೂತ್ರಪಿಂಡ, ಕಣ್ಣು, ಹೃದಯವನ್ನು ದಾನ ಮಾಡಲಾಯಿತು. ಅಂಗಾಂಗಾ ದಾನದ ಮೂಲಕ ಸಾವಿನ ನಂತರವೂ ಹಲವರ ಬದುಕಿಗೆ ಬೆಳಕು ನೀಡುವ ಮೂಲಕ ಚೈತ್ರಾ ಜೀವಂತವಾಗಿದ್ದಾರೆ. ಮಗಳ ಅಗಲಿಕೆ ನೋವಿನ ನಡುವೆಯೂ ಅಂಗಾಂಗ ದಾನಕ್ಕೆ ಸಮ್ಮತಿಸಿದ ಪೋಷಕರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಚೈತ್ರಾ ಅಂಗಾಂಗ ದಾನದ ಬಗ್ಗೆ ಟ್ವೀಟ್:

Recommended Video

Karnatakaದ ಈ ಆಟಗಾರರು ನಾಳೆ ಯಾವ ತಂಡಗಳಿಗೆ ಮಾರಾಟವಾಗ್ತಾರೆ | Oneindia Kannada


"26 ವರ್ಷಗಳ ಚೈತ್ರಾ ಪಾಲಿಗೆ ಇದು ಒಂದು ಮಹತ್ವದ ದಿನವಾಗಿತ್ತು, ಆದರೆ ವಿಧಿಯಾಟವೇ ಬೇರೆ ಆಗಿತ್ತು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮದುವೆಯ ಆರತಕ್ಷತೆ ವೇಳೆ ಕುಸಿದು ಬಿದ್ದರು. ನಂತರ ನಿಮ್ಹಾನ್ಸ್ ನಲ್ಲಿ ಆಕೆಯ ಬ್ರೈನ್ ಡೆಡ್ ಆಗಿರುವ ಬಗ್ಗೆ ಘೋಷಿಸಲಾಯಿತು. ಹೃದಯವಿದ್ರಾವಕ ದುರಂತದ ನಡುವೆಯೂ ಆಕೆಯ ಪೋಷಕರು ಆಕೆಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ," ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

English summary
Kolar: Chitra a bride from srinivaspur dies due to brain dead during her wedding reception parents donated her body organs to Nimhans Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X