ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

5 ವರ್ಷದ ಬಳಿಕ ಅಂತೂ ಕೊಡಿಗೇಹಳ್ಳಿ ರೈಲ್ವೆ ಅಂಡರ್‌ಪಾಸ್ ಓಪನ್

|
Google Oneindia Kannada News

ಬೆಂಗಳೂರು, ಏ.3: ಅಂತೂ ಇಂತೂ ಐದು ವರ್ಷದ ಬಳಿಕ ಕೊಡಿಗೇಹಳ್ಳಿ ರೈಲ್ವೆ ಅಂಡರ್ ಪಾಸ್ ಸಂಚಾರಕ್ಕೆ ಮುಕ್ತಗೊಂಡಿದೆ.

ಈ ರೈಲ್ವೆ ಅಂಡರ್‌ಬ್ರಿಡ್ಜ್ ವಿದ್ಯಾರಣ್ಯಪುರ, ಸರಕಾರನಗರ, ಕೊಡಿಗೇಹಳ್ಳಿ, ತಿಂಡ್ಲು ಹಾಗೂ ವಿರೂಪಾಕ್ಷಪುರ ಪ್ರಯಾಣಿಕರಿಗೆ ಸಂಚಾರಕ್ಕೆ ಅನುಕೂಲವಾಗಲಿದೆ.

ಕೊಡಿಗೆಹಳ್ಳಿ ಅಂಡರ್‌ಪಾಸ್‌ ಸಮಸ್ಯೆ: ಪ್ರಧಾನಿಗೆ ಮೊರೆ ಕೊಡಿಗೆಹಳ್ಳಿ ಅಂಡರ್‌ಪಾಸ್‌ ಸಮಸ್ಯೆ: ಪ್ರಧಾನಿಗೆ ಮೊರೆ

ವಿದ್ಯಾರಣ್ಯಪುರ ರಸ್ತೆ ಹಾಗೂ ಕೊಡಿಗೇಹಳ್ಳಿಗೆ ಕ್ರಮಿಸುವ ದೂರದಲ್ಲಿ ಅರ್ಧ ಗಂಟೆ ಉಳಿತಾಯವಾಗಲಿದೆ. ಇಷ್ಟು ದಿನ ಸುತ್ತಿ ಬಳಸಿ ಓಡಾಟ ನಡೆಸಬೇಕಿತ್ತು ಇದೀಗ ಅಂಡರ್ ಪಾಸ್ ಸಂಚಾರ ಆರಂಭವಾಗಿರುವುದು ಸಂತಸ ತಂದಿದೆ. ಅಂಡರ್‌ಪಾಸ್‌ನ ಕೆಲಸಗಳು ಇನ್ನೂ ಬಾಕಿ ಇವೆ. ಕೆಲವು ದಿನಗಳಲ್ಲಿ ಎಲ್ಲವನ್ನೂ ಪೂರ್ಣಗೊಳಿಸುವ ಭರವಸೆ ಇದೆ ಎಂದು ವಿರೂಪಾಕ್ಷಪುರ ನಿವಾಸಿಯೊಬ್ಬರು ತಿಳಿಸಿದ್ದಾರೆ.

Kodigehalli underpass is finally open to commuters

ವಿದ್ಯಾರಣ್ಯಪುರದಿಂದ ಕೊಡಿಗೇಹಳ್ಳಿಗೆ ತೆರಳಬೇಕಿದ್ದರೆ ರಸ್ತೆ ದಾಟಲು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಇತ್ತು. ಹಾಗಾಗಿ ಸಂಚಾರ ದಟ್ಟಣೆ ಏರ್ಪಡುತ್ತಿತ್ತು.ಈ ಅಂಡರ್ ಪಾಸ್ ಇರುವುದು ತುಂಬಾ ಅನುಕೂಲವಾಗಿದೆ ಎಂದಿದ್ದಾರೆ.

Kodigehalli underpass is finally open to commuters

ಹೆಬ್ಬಾಳಕ್ಕೆ 4 ಕಿ.ಮೀ ಸಂಚರಿಸಬೇಕಿತ್ತು ಆದರೆ ಇದೀಗ 100 ಮೀಟರ್‌ಗೆ ಸಂಚರಿಸಿದರೆ ಸಾಕು , ಮೊದಲು 2013ರಲ್ಲಿ 700 ಮೀಟರ್ ಉದ್ದದ ಬ್ರಿಡ್ಜ್‌ಗೆ ಮನವಿ ಸಲ್ಲಿಸಲಾಗಿತ್ತು.

English summary
After four years of long wait, Kodigehalli underpass was was finally open to commuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X