ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಾರ್ನರ್ ಸೂರಿ' ಸಂಪತ್ತು ನೋಡಿ ಬೆಚ್ಚಿದ ಜನ ಸಾಮಾನ್ಯರು

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 08 : ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿರುವ ನಗದು ಹಣ, ನಗ, ನಾಣ್ಯ, ಆಭರಣಗಳನ್ನು ದೇವರ ಮುಂದಿಟ್ಟು ಪೂಜಿಸುವುದು ವಾಡಿಕೆ.

ಅದರಂತೆ, ಗಳಿಸಿದ ಮೊತ್ತವನ್ನೆಲ್ಲ ದೇವರ ಮುಂದಿಟ್ಟು ಕೈ ಮುಗಿದ ಬಿಡಿಎ ಬ್ರೋಕರ್ ಸೂರ್ಯನಾರಾಯಣ್ ಅಲಿಯಾಸ್ ಕಾರ್ನರ್ ಸೂರಿ ಈಗ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅವರ ಮನೆಯಲ್ಲಿನ ಪೂಜೆ ಚಿತ್ರಗಳು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಜನಪ್ರಿಯತೆ ಗಳಿಸಿವೆ.

ಈಗ ವಾಟ್ಸಪ್, ಫೇಸ್ ಬುಕ್ ದಾಟಿ ಟಿವಿ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ. ಇದರ ಬಗ್ಗೆ ಅಚ್ಚರಿಯಿಂದ ವರದಿಗಾರರು ಸೂರಿ ಅವರ ಮುಂದೆ ಮೈಕ್ ಹಿಡಿದರೆ, ಯಾವುದೇ ಅಳುಕಿಲ್ಲದೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದು ದುಡಿಮೆಯ ಫಲ, ಕದ್ದಿದ್ದಲ್ಲ, ಅನ್ಯಾಯವಾಗಿ ಸಂಪಾದಿಸಿದ್ದಲ್ಲ, ಹೀಗಾಗಿ ನಾನು ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಎಚ್‍ಎಸ್‍ಆರ್ ಲೇಔಟ್ ಬಿಡಿಎ ವಿಭಾಗದಲ್ಲಿ ಬ್ರೋಕರ್ ಕೆಲಸ ಮಾಡುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದು ಜೋಡಿಸಿರುವ ನೋಟಿನ ಕಂತೆಗಳ ಮೇಲೆ ಲಕ್ಷ್ಮಿಯನ್ನಿಟ್ಟು ಪೂಜೆ ಸಲ್ಲಿಸಿದ್ದರು.

ಎಷ್ಟು ಮೊತ್ತ ಇಟ್ಟು ಪೂಜೆ?

ಎಷ್ಟು ಮೊತ್ತ ಇಟ್ಟು ಪೂಜೆ?

ಸುಮಾರು 73 ಲಕ್ಷ ರು ನೋಟುಗಳು ಹಾಗೂ 1 ಕೆಜಿ ಚಿನ್ನಾಭರಣ ಅಲ್ಲಿತ್ತು. ನಂತರ ಅದರ ಮುಂದೆ ಫೋಸ್ ಕೊಟ್ಟು ಫೋಟೊ ತೆಗೆದುಕೊಂಡಿದ್ದರು. ಈಗ ಈ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಷ್ಟೊಂದು ಹಣ ಸೂರಿ ಅವರಿಗೆ ಎಲ್ಲಿಂದ ಬಂತು ಎಂಬ ಪ್ರಶ್ನೆ ಎದ್ದಿದೆ.

ಪೂಜೆ ಮಾಡಿದ್ದೇ ತಪ್ಪು ಎಂದರೆ

ಪೂಜೆ ಮಾಡಿದ್ದೇ ತಪ್ಪು ಎಂದರೆ

2004ರಿಂದ ಸರ್ಕಾರಿಂದ ಕಾನೂನು ಬದ್ಧವಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದೇನೆ. ಪೂಜೆ ಮಾಡಿದ್ದೇ ತಪ್ಪಾ? ವೈರಲ್ ಆಗಿದ್ದು, ಬೇಸರವಿಲ್ಲ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪೂಜೆ ಮಾಡಿದ್ದೇ ತಪ್ಪು ಎಂದರೆ ಏನು ಮಾಡೋದು?. ಈ ಬಗ್ಗೆ ಜನ ಮಾತನಾಡುತ್ತಿರುವುದಕ್ಕೆ ಬೇಸರವಿಲ್ಲ. ಪೂಜೆ ಬಗ್ಗೆ ಅಪಸ್ವರ ತೆಗೆದರೆ ಬೇಜಾರಾಗುತ್ತದೆ ಎಂದು ಸೂರಿ ಅವರು ಸುದ್ದಿವಾಹಿನಗಳ ಜತೆ ಮಾತನಾಡುತ್ತಾ ಹೇಳಿದರು.

ಯಾರು ಗಾಡ್ ಫಾದರ್ ಇಲ್ಲ

ಯಾರು ಗಾಡ್ ಫಾದರ್ ಇಲ್ಲ

'ನನಗೆ ಯಾರು ಗಾಡ್ ಫಾದರ್ ಇಲ್ಲ,ಅಕ್ರಮವಾಗಿ ಸಂಪಾದನೆ ಮಾಡಿದ್ದರೆ, ಕ್ರಮ ತೆಗೆದುಕೊಳ್ಳಲಿ, ಒಂದು ನಿಮಿಷಕ್ಕೆ 13 ರು ನಂತೆ ಟ್ಯಾಕ್ಸ್ ಕಟ್ಟುತ್ತಿದ್ದೇನೆ' ಎಂದು ಸೂರ್ಯ ನಾರಾಯಣ್ ಹೇಳಿದ್ದಾರೆ.
'ನಾನೇನು ಪ್ರಚಾರ ಬಯಸಿಲ್ಲ. ಆರ್ಕ್ಯುಟ್ ಕಾಲದಿಂದಲೂ ಪೂಜೆ ಮಾಡಿದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅದರಂತೆ, ಫೇಸ್ ಬುಕ್ ನಲ್ಲಿ ಹಾಕಿದ ಚಿತ್ರವನ್ನು ಯಾವುದೋ ಪೇಜ್ ನವರು ಹಂಚಿಕೊಂಡಿದ್ದು ಈಗ ವೈರಲ್ ಆಗಿದೆ' ಎಂದರು.

ಎಲ್ಲಕ್ಕೂ ಸೂಕ್ತ ದಾಖಲೆಗಳಿವೆ

ಎಲ್ಲಕ್ಕೂ ಸೂಕ್ತ ದಾಖಲೆಗಳಿವೆ

ಅಪನಗದೀಕರಣದ ನಂತರ 73 ಲಕ್ಷ ರು ನಗದು ಹೊಂದಿದ್ದರೂ ಸೂಕ್ತ ದಾಖಲೆಗಳಿವೆ ಎನ್ನುತ್ತಿರುವ ಸೂರಿ ಅವರು2015ರಲ್ಲಿ ಎಚ್ಎಸ್ ಆರ್ ಲೇ ಔಟ್ ನ ಎರಡನೇ ಹಾಗೂ ಮೂರನೇ ಸೆಕ್ಟರ್ ನಲ್ಲಿ 9 ಸೈಟುಗಳ ದಾಖಲೆ ತಿದ್ದಿದ ಆರೋಪ ಹೊಂದಿದ್ದರು.

ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಸೂರ್ಯನಾರಾಯಣ ಸೇರಿದಂತೆ ನಾಲ್ವರ ಮೇಲೆ ಎಫ್ ಐ ಆರ್ ದಾಖಲಾಗಿತ್ತು. ನಂತರ ಜಾಮೀನು ಪಡೆದುಕೊಂಡಿದ್ದರು.

English summary
Know Why Social media abuzz with BDA broker, business Suryanarayan of HSR Layout, Bengaluru. Corner Suri alias Suryanarayan and his family photo went viral after watching the lavish decoration and pooja during Varahmahalakshmi festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X