ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲಿನಿ ರಜನೀಶ್ ಫೇಸ್ ಬುಕ್ ಪೋಸ್ಟ್ ವಿವಾದ, ಏನು? ಎತ್ತ?

By Mahesh
|
Google Oneindia Kannada News

ಬೆಂಗಳೂರು, ಜುಲೈ 26: 'ಬೆಲ್ಲವನ್ನು ಹಸಿ ಸಣ್ಣ ಈರುಳ್ಳಿಯೊಂದಿಗೆ ಸೇವಿಸಿದರೆ ರಕ್ತದಲ್ಲಿನ ಪ್ಲೇಟ್ಲೆಟ್‌ಗಳ ಪ್ರಮಾಣ ಏರಿಕೆಯಾಗಲಿದ್ದು, ಈ ಬಗ್ಗೆ ಜಾಗೃತಿ ಮೂಡಿಸಿ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಇತ್ತೀಚೆಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯಾಗಿ ಜನರಿಗೆ ಆರೋಗ್ಯದ ವಿಚಾರದಲ್ಲಿ ಅವೈಜ್ಞಾನಿಕ, ತಪ್ಪು ಮಾಹಿತಿ ನೀಡಿರುವುದು ಸರಿಯಲ್ಲ. ಇದು ಜನಸಾಮಾನ್ಯರಿಗೆ ತಪ್ಪು ಸಂದೇಶ ನೀಡುತ್ತದೆ. ಶಾಲಿನಿ ರಜನೀಶ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆರೋಗ್ಯ ಸಚಿವ ರಮೇಶ್‍ಕುಮಾರ್ ಅವರಿಗೆ ವಿಚಾರವಾದಿ ನರೇಂದ್ರ ನಾಯಕ್ ಮನವಿ ಮಾಡಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಜನಪ್ರಿಯತೆ ಪಡೆಯುವ ಏಜೆಂಟರ ರೀತಿ ವರ್ತಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಈಗಾಗಲೇ ನಾನು ಸಾಮಾಜಿಕ ಜಾಲತಾಣದಲ್ಲಿ ಬಂದ ಪೋಸ್ಟ್‌ಗೆ ಸಂಬಂಧಿಸಿದಂತೆ ಅಧಿಕೃತವಾಗಿ ಪೋಸ್ಟ್ ಹಾಗೂ ಇಮೇಲ್ ಮೂಲಕ ಆರೋಗ್ಯ ಸಚಿವರಿಗೆ ದೂರು ಸಲ್ಲಿಸಿದ್ದೇನೆ. ಕ್ರಮ ಕೈಗೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ನಾಯಕ್ ತಿಳಿಸಿದ್ದಾರೆ.

ಪೋಸ್ಟ್ ನಲ್ಲಿ ಏನಿತ್ತು?

ಪೋಸ್ಟ್ ನಲ್ಲಿ ಏನಿತ್ತು?

ಡೆಂಘೀ ಜ್ವರದಿಂದ ಬಳಲುತ್ತಿರುವವರು ಬೆಲ್ಲವನ್ನು ಸಣ್ಣ, ಹಸಿ ಈರುಳ್ಳಿಯೊಂದಿಗೆ ಸೇವಿಸಬೇಕು. ಇದು ರಕ್ತದಲ್ಲಿನ ಪ್ಲೇಟ್ಲೆಟ್ ಪ್ರಮಾಣ ವೃದ್ಧಿಗೆ ಸಹಕಾರಿಯಾಗುತ್ತದೆ. ಜತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಜ್ವರವನ್ನು ನಿವಾರಿಸುತ್ತದೆ. ಇದು ಸುಲಭವಾದ ಹಾಗೂ ಅಡ್ಡ ಪರಿಣಾಮವಿಲ್ಲದ ಪರಿಣಾಮಕಾರಿ ಪರಿಹಾರವೆನಿಸಿದೆ. ಈ ಸಂಜೀವಿನಿ ಸಂದೇಶವನ್ನು ಎಲ್ಲರಿಗೂ ತಲುಪಿಸಿ ಜೀವಗಳನ್ನು ಉಳಿಸಿ ಎಂದು ಶಾಲಿನಿ ಅವರು ಹಂಚಿಕೊಂಡಿದ್ದ ಚಿತ್ರ ಸಮೇತದ ಪೋಸ್ಟ್ ನಲ್ಲಿತ್ತು

ಇದು ಯಾವ ವಿಧಾನ?

ಇದು ಯಾವ ವಿಧಾನ?

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಹಂಚಿಕೊಂಡಿದ್ದ ಮಾಹಿತಿ ನಿಜವೇ? ಸುಳ್ಳೇ? ಹೀಗೊಂದು ಚಿಕಿತ್ಸಾ ವಿಧಾನ ಇದೆಯೇ? ಈ ವಿಧಾನಕ್ಕೆ ಮಾನ್ಯತೆ ಸಿಕ್ಕಿದೆಯೇ? ಎಂಬುದರ ಬಗ್ಗೆ ಪ್ರಶ್ನಿಸದೆ ಅನೇಕರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಚಾರವಾಗಿ ನರೇಂದ್ರ ನಾಯಕ್ ಅವರು ಮೊದಲಿಗೆ ಈ ಬಗ್ಗೆ ಪ್ರಶ್ನಿಸಿದ್ದಾರೆ.

ಮೂತ್ರ ಚಿಕಿತ್ಸೆ

ಮೂತ್ರ ಚಿಕಿತ್ಸೆ

ಯೂರಿನ್ ಥೆರಪಿ ಎಂಬ ಹೆಸರಿನ ಚಿಕಿತ್ಸಾ ವಿಧಾನದ ಬಗ್ಗೆ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರತಿಯೊಂದು ಪೋಸ್ಟ್ ಗಳು ಸಾವಿರಾರು ಬಾರಿ ಮರು ಹಂಚಿಕೆಯಾಗಿವೆ. ಮೂತ್ರ ಚಿಕಿತ್ಸಾ ವಿಧಾನದ ಬಗ್ಗೆ ಕೂಡಾ ಯಾವುದೇ ದೃಢಪಟ್ಟ ಮಾಹಿತಿ, ಮಾನ್ಯತೆ ಇಲ್ಲ ಎಂದು ಡಾ. ಶ್ರೀನಿವಾಸ್ ಕೆ, ನರೇಂದ್ರ ನಾಯಕ್ ಅವರು ಪ್ರಶ್ನಿಸಿದ್ದಾರೆ.

ಆರೋಗ್ಯ ಸಚಿವರಿಗೆ ದೂರು

ಆರೋಗ್ಯ ಸಚಿವರಿಗೆ ದೂರು

This would be very detrimental to the health care system in particular and in general encourage such people who cheat the gullible public. Yesterday she was advocating jaggery and onion as treatment for dengue which has been shred by thousands of people and is going viral on whatsapp.
-Narendra Nayak
Convenor, Consumer's Education Trust of Mangalore
President, Federation of Indian Rationalist Associations

ಮಾರಣಾಂತಿಕ ಕಾಯಿಲೆಗೆ ಮದ್ದು

ಮಾರಣಾಂತಿಕ ಕಾಯಿಲೆಗೆ ಮದ್ದು

ಎಚ್ ಐವಿ, ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸುವ ವಿಧಾನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಆದರೆ, ಯಾವುದೂ ಕೂಡಾ ವೈಜ್ಞಾನಿಕವಾಗಿ ಸಾಬೀತು ಪಡಿಸಿದ ಅಥವಾ ಮಾನ್ಯತೆ ಪಡೆದ ವಿಧಾನಗಳಲ್ಲ. ಸಾಮಾಜಿಕ ಜಾಲತಾಣದ ಮೂಲಕ ಜನಜಾಗೃತಿ ಮೂಡಿಸಲು ಶಾಲಿನಿ ಅವರು ಆಗಾಗ ಈ ರೀತಿ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಇದನ್ನು ನಂಬಿ ಯಾರಾದರೂ ದೇ ಔಷಧ ಎಂದು ತಿಳಿದು ವೈದ್ಯರ ಬಳಿ ಹೋಗದೇ ಬೆಲ್ಲ, ಹಸಿ ಈರುಳ್ಳಿ ತಿಂದು ಮನೆಯಲ್ಲೇ ಕುಳಿತರೆ ಏನು ಗತಿ ಎಂದು ವಿಚಾರವಾದಿಗಳು ಪ್ರಶ್ನಿಸಿದ್ದಾರೆ.

English summary
Know Why Principal Secretary health and family welfare, Karnataka, Shalini Rajneesh IAS, Facebook posts irked rationalists, doctors. Shalini posted about Jaggery+ onion for treatment of dengue, urine therapy and so on
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X