ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

#FraudTeresa ಟ್ರೆಂಡಿಂಗ್ ಏಕೆ? ತೆರೆಸಾ ಅಸಲಿಯತ್ತೇನು?

By Mahesh
|
Google Oneindia Kannada News

ಬೆಂಗಳೂರು, ಸೆ.04: ಮದರ್ ತೆರೆಸಾ ಅವರ 19ನೇ ಪುಣ್ಯ ಸ್ಮರಣೆಯ ಪ್ರಯುಕ್ತ ವ್ಯಾಟಿಕನ್ ಸಿಟಿಯ ಸೈಂಟ್ ಪೀಟರ್ಸ್ ಸ್ಕ್ವೇರ್ ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ರೋಮನ್ ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಫ್ರಾನ್ಸಿಸ್ ಅವರು ಮದರ್ ತೆರೆಸಾರನ್ನು 'ಸಂತ' ಪದವಿಗೇರಿಸಿದ್ದಾರೆ.

ನೊಬೆಲ್ ಪಾರಿತೋಷಕ ಶಾಂತಿ ಪುರಸ್ಕೃತ ಮದರ್ ತೆರೆಸಾ ಅವರನ್ನು 'ಸಂತ' ಪದವಿಗೇರಿಸಿದ್ದು, ಒಂದು ಧರ್ಮದ ನಂಬಿಕೆಯ ವಿಧಿವಿಧಾನವಾಗಿದೆ. ಆದರೆ, 'ಮದರ್' ಆಗಿ 'ಬಡವರ ಪಾಲಿನ ಸಂತ' ರಾಗಿ ಬದುಕಿದ್ದ ತೆರೆಸಾ ಅವರನ್ನು ದೇವರ ಪಟ್ಟಕ್ಕೇರಿಸಿರುವುದರ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ.[ಮದರ್ ತೆರೆಸಾ ಸಂತಳಾಗಿದ್ದು ಹೇಗೆ? ಪವಾಡಗಳೇನು?]

1997ರಲ್ಲಿ 87 ವರ್ಷ ವಯಸ್ಸಿನಲ್ಲಿ ಇಹಲೋಕ ವ್ಯಾಪಾರ ಮುಗಿಸಿದ ಮದರ್ ತೆರೆಸಾರನ್ನು 2003ರಲ್ಲಿ ಸಂತ ಪದವಿಗೇರಿಸಲು ನಿರ್ಧರಿಸಲಾಯಿತು. ಅಂದಿನ ಪೋಪ್ ಜಾನ್ ಪಾಲ್ ಅವರು ಮತ್ತೊಂದು ಬಾರಿ ಮದರ್ ತೆರೆಸಾ ಹೆಸರಿನಲ್ಲಿ ಪವಾಡ ಸಂಭವಿಸಿದರೆ ಅವರನ್ನು ನಿಯಮದ ಪ್ರಕಾರ 'ಸಂತರೆಂದು' ಕರೆಯಲಾಗುತ್ತದೆ ಎಂದಿದ್ದರು.ಕಳೆದ ಡಿಸೆಂಬರ್‌ನಲ್ಲಿ ನಡೆದ ಕ್ರೈಸ್ತರ ಸಭೆಯಲ್ಲಿಯೇ ಮದರ್ ತೆರೆಸಾ ಅವರಿಗೆ ಸಂತ ಪದವಿ ನೀಡಲು ತೀರ್ಮಾನ ಮಾಡಿಕೊಳ್ಳಲಾಗಿತ್ತು.

ಆದರೆ, ಮದರ್ ತೆರೆಸಾ ಅವರು ಭಾರತದಲ್ಲಿ ಬಡವರ, ನಿರ್ಗತಿಕರ ಪಾಲಿನ ದೇವತೆಯಷ್ಟೇ ಆಗಿರಲಿಲ್ಲ. ಸಾವಿರಾರು ಮಂದಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬಂದಿದ್ದರು. ಇದಕ್ಕಾಗಿ ರೋಮ್ ನಿಂದ ದೇಣಿಗೆ ಪಡೆಯುತ್ತಿದ್ದರು. ತೆರೆಸಾ ಒಬ್ಬ ವಂಚಕಿ ಎಂದು ಹೇಳಿ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಲಾಗಿದೆ. ಟ್ವಿಟ್ ಲೋಕ ಯಾರನ್ನು ಬಿಡುವುದಿಲ್ಲ. ದೇವರಿರಲಿ, ಸಂತರಿರಲಿ, ಮದರ್ ಆಗಿರಲಿ ಎಂಬುದಕ್ಕೆ ಇವತ್ತಿನ ಟ್ರೆಂಡಿಂಗ್ ಸಾಕ್ಷಿ.

ಮದರ್ ಆಗಿ ಬಂದು ಸಂತರಾಗಿ ಬೆಳೆದ ತೆರೆಸಾ

ಮದರ್ ಆಗಿ ಬಂದು ಸಂತರಾಗಿ ಬೆಳೆದ ತೆರೆಸಾ

1910ರಲ್ಲಿ ಅಂಜೆಜ್ಸ್ ಗೊನ್ಜೆ ಬೊಜಾಕ್ಸಿಯು ಆಗಿ ಅಲ್ಬೇನಿಯಾ ದಂಪತಿಗೆ ಜನಿಸಿದ ತೆರೆಸಾ ಅವರು ಭಾರತದ ಕಲ್ಕತ್ತಾ (ಇಂದಿನ ಕೋಲ್ಕತ್ತಾ) ಗೆ ಬಂದು ಬಡವರು, ನಿರ್ಗತಿಕರಿಗೆ ವೈದ್ಯಕೀಯ ನೆರವು ಆಶ್ರಯ ನೀಡಿ 'ಕೊಳಗೇರಿಯ ಸಂತ' ಎನಿಸಿಕೊಂಡಿದ್ದರು. ಕ್ಯಾಥೋಲಿಕ್ ಅಲ್ಲದಿದ್ದರೆ ತೆರೆಸಾರಿಗೆ ಸಂತ ಪದವಿ ಸಿಗುತ್ತಿತ್ತೆ? ಉತ್ತರ ಪೋಪ್ ಗೆ ಗೊತ್ತಿ. ಸಂತ ಪದವಿ ನೀಡುವುದು ದೊಡ್ಡ ವಿಷಯವಲ್ಲ. ಪದವಿಗೇರಿಸಲು ಬಳಸುವ ಮಾನದಂಡ ಚರ್ಚೆಯಲ್ಲಿದೆ

ಭಾರತದಿಂದ ಸದಸ್ಯರ ನಿಯೋಗ

ಭಾರತದಿಂದ ಸದಸ್ಯರ ನಿಯೋಗ

ಭಾರತದಿಂದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದ 12 ಸದಸ್ಯರ ನಿಯೋಗ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕುಮಾರ್ ವಿಶ್ವಾಸ್ ಹಾಗೂ ಬೆಂಗಾಲದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಎರಡು ರಾಜ್ಯಮಟ್ಟದ ನಿಯೋಗಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿವೆ

ಸುಶ್ರೂಷೆ ವಿಧಾನವೇ ಸರಿ ಇರಲಿಲ್ಲ

ಒಳ್ಳೆ ಆಸ್ಪತ್ರೆಗಳಿದ್ದರೂ ಮಿಷನ್ ಆಫ್ ಚಾರಿಟಿಯ ರೋಗಿಗಳಿಗೆ ತನ್ನದೇ ಆದ ವಿಧಾನದಲ್ಲಿ ಮದರ್ ಸುಶ್ರೂಷೆ ನೀಡುತ್ತಿದ್ದರು.

ಬೆಂಗಾಲ, ಕೇಂದ್ರ ಸರ್ಕಾರದ ಬೆಂಬಲ ಇತ್ತು

ತೆರೆಸಾ ಅವರ ಚಾರಿಟಿ ಸಂಸ್ಥೆಗೆ ಮತಾಂತರ ಮಾಡಲು ಅಂದಿನ ಕೇಂದ್ರ ಸರ್ಕಾರ ನೆರವಿತ್ತು.

ಬೆಂಗಾಲ, ಕೇಂದ್ರ ಸರ್ಕಾರದ ಬೆಂಬಲ ಇತ್ತು

ತೆರೆಸಾ ಅವರ ಚಾರಿಟಿ ಸಂಸ್ಥೆಗೆ ಮತಾಂತರ ಮಾಡಲು ಅಂದಿನ ಕೇಂದ್ರ ಸರ್ಕಾರ ನೆರವಿತ್ತು.

ಸಂತ ಪದವಿಗೇರಿಸುವುದು ಒಂದು ರಾಜಕೀಯ

ಸಂತ ಪದವಿಗೇರಿಸುವುದು ಒಂದು ರಾಜಕೀಯ, ಇದರಲ್ಲಿ ಯಾವುದೇ ಹೊಸ ವಿಷಯವಿಲ್ಲ.

ಆಕೆಯ ಮೂಲ ಉದ್ದೇಶ ಮತಾಂತರವಾಗಿತ್ತು

ಆಕೆಯ ಮೂಲ ಉದ್ದೇಶ ಮತಾಂತರವಾಗಿತ್ತು, ಇದು ಈಗಾಗಲೇ ಸಾಬೀತಾಗಿರುವ ವಿಷಯ. ಈ ಬಗ್ಗೆ ಚರ್ಚೆ ಅನಗತ್ಯ.

ತೆರೆಸಾ ಬಗ್ಗೆ ತಿಳಿಯಬೇಕಾದರೆ ಗೂಗಲ್ ಮಾಡಿ

ತೆರೆಸಾ ಬಗ್ಗೆ ತಿಳಿಯಬೇಕಾದರೆ ಗೂಗಲ್ ಸರ್ಚ್ ಮಾಡಿ, ಅಸಲಿ ವಿಷಯ ನಿಮ್ಮ ಕಣ್ಮುಂದೆ ಬರಲಿದೆ.

29ಸಾವಿರ ಮಂದಿ ಮತಾಂತರ ಮಾಡಿದೆ: ತೆರೆಸಾ

29ಸಾವಿರ ಮಂದಿ ಮತಾಂತರ ಮಾಡಿದ್ದೇನೆ ಎಂದು ಮದರ್ ತೆರೆಸಾ ಹೇಳಿಕೊಂಡಿದ್ದಾರೆ.

ಒಳ್ಳೆಯವರ ಹೆಸರು ಕೆಡಿಸದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ

ಒಳ್ಳೆಯವರ ಹೆಸರು ಕೆಡಿಸದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ, ತೆರೆಸಾ ವಿಷಯದಲ್ಲೂ ಕುಹಕಿಗಳು ಸುಮ್ಮನೆ ಕುಳಿತಿಲ್ಲ.

ಆಕೆ ಮಾಡಿದ ಕೆಲಸವವನ್ನು ಒಂದು ದಿನ ಮಾಡಿ ಸಾಕು

ಆಕೆಯನ್ನು ದೂಷಿಸುವ ಬದಲು ಒಂದು ದಿನ ಆಕೆ ಮಾಡಿದ ಕಾರ್ಯವನ್ನು ನೀವು ಮಾಡಿ ನೋಡಿ, ಆಗ ಕಷ್ಟದ ಅರಿವಾಗುತ್ತದೆ.

ದೇಣಿಗೆ ಹಣವೆಲ್ಲವೂ ಕಪ್ಪು ಹಣ

ಮಿಷನರಿ ಆಫ್ ಚಾರಿಟಿ ಪಡೆದ ದೇಣಿಗೆ ಹಣವೆಲ್ಲವೂ ಕಪ್ಪು ಹಣ

English summary
The micro blogging website Twitter leaves none. On Sunday (September 04) the day of Mother Teresa's canonization. ‘Fraud Teresa’ was one of the top trends on Twitter in India, with Twitterati calling out the Nobel Peace Prize winner on the eve of her 19th Death Anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X