• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್

By Mahesh
|
   ಮೊಹಮ್ಮದ್ ಹ್ಯಾರಿಸ್ ನಲಪಾಡ್, ಯಾರೀತ? ಇಲ್ಲಿದೆ ಇವರ ಸಣ್ಣ ಪರಿಚಯ | Oneindia Kannada

   ನಲಪಾಡ್ ಅಹ್ಮದ್ ಹ್ಯಾರೀಸ್ -ಶಾಂತಿನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ. ಸುಮಾರು ಎರಡೂವರೆ ಲಕ್ಷ ಜನರ ಪ್ರತಿನಿಧಿ. ತಮ್ಮ ಪುತ್ರ ಮೊಹಮ್ಮದ್ ಹ್ಯಾರೀಸ್ ನಲಪಾಡ್ ಅವರ ಮೇಲೆ ತುಂಬಾ ಭರವಸೆ ಇಟ್ಟುಕೊಂಡವರು. ಕಾಂಗ್ರೆಸ್ ಪಕ್ಷದ ಯುವ ನಾಯಕರಾಗುವ ಹೊತ್ತಲ್ಲೇ ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ಆರೋಪಿಯಾಗಿ ಬಂಧಿತರಾಗಿದ್ದಾರೆ.

   ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದ ಕಾಸರಗೋಡು ಮೂಲದ ಬ್ಯಾರಿ ಎನ್.ಎ ಹ್ಯಾರೀಸ್ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. 85 ಕೋಟಿ ರು ಆಸ್ತಿ ಘೋಷಿಸಿದ್ದರು. ಈಗ 135 ಪ್ಲಸ್ ಕೋಟಿ ರು ಒಡೆಯ. ಸರಕಾರಿ ಶಾಲೆಗಳ ಕಟ್ಟಡ ನಿರ್ಮಾಣ, ವ್ಯಾಯಾಮ ಶಾಲೆ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ. ನಲಪಾಡ್ ಹೊಟೆಲ್ ಸಮೂಹದ ಅಧ್ಯಕ್ಷರಾಗಿರುವ ಹ್ಯಾರೀಸ್ ಅವರ ಕುಟುಂಬ ರಿಯಲ್ ಎಸ್ಟೇಟ್ ಉದ್ಯಮಿ ಕೂಡಾ ಹೌದು.

   ಮೊಹಮ್ಮದ್ ನಲಪಾಡ್‌ 2 ದಿನಗಳ ಕಾಲ ಪೊಲೀಸರ ವಶಕ್ಕೆ

   ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆಗಳನ್ನೊಳಗೊಂಡ ಪ್ರತಿಷ್ಟಿತ ಅಸೆಂಬ್ಲಿಯಲ್ಲಿ ಕೊಳಚೆ ಪ್ರದೇಶ, ಸ್ಲಂ ಕೂಡಾ ಇದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಐಷಾರಾಮಿ ಹೋಟೆಲ್ ಗಳು, ಪಬ್ ಗಳು, ರಸ್ತೆ ಬದಿ ದೋಸೆ ಮಾರುವ ಕೇಂದ್ರಗಳಿವೆ. ಬಿಎಂಟಿಸಿ ಕೇಂದ್ರ ಕಚೇರಿ ಸೇರಿದಂತೆ ವೈವಿಧ್ಯತೆಯನ್ನು ಮೈಗೂಡಿಸಿಕೊಂಡಿದೆ.

   ಹೇಳಿ ಕೇಳಿ ಇದು ಬ್ರಿಟಿಷರ ಕಾಲದ ಬಡಾವಣೆ, ಅನಾದಿ ಕಾಲದಿಂದಲೂ ರಾಜಕಾಲುವೆ, ಕೊಳಚೆ ಪ್ರದೇಶಗಳನ್ನು ಜತೆಯಲ್ಲೇ ಹೊಂದಿದೆ. ಕೊಳಗೇರಿ ನಿರ್ಮೂಲನೆ, ಈಜಿಪುರ ನಿವಾಸಿಗಳ ಪುನರ್ವಸತಿಯ ಹ್ಯಾರೀಸ್ ಗೂ ದೊಡ್ಡ ತಲೆನೋವಾಗಿದ್ದು ಸುಳ್ಳಲ್ಲ. ರಾಜಕೀಯವಾಗಿ ಇದೊಂದು ಕಪ್ಪುಚುಕ್ಕೆಯಾಗಿದೆ. ಹದಗೆಟ್ಟ ರಸ್ತೆಗಳನ್ನು ಸರಿ ಪಡಿಸುವುದಿರಲಿ ಬೆಳೆದ ಇಬ್ಬರು ಮಕ್ಕಳು ಅಪಖ್ಯಾತಿ ಮೂಲಕ ಅಪ್ಪನ ಮುಖಕ್ಕೆ ಮಸಿ ಬಳಿದಿದ್ದಾರೆ.

   ಹ್ಯಾರೀಸ್ ಸಂಕ್ಷಿಪ್ತ ಪರಿಚಯ

   ಹ್ಯಾರೀಸ್ ಸಂಕ್ಷಿಪ್ತ ಪರಿಚಯ

   ತಂದೆ: ಎನ್.ಎ ಮಹಮದ್

   ತಾಯಿ: ಸುರಯಾ ಮಹಮದ್

   ಹುಟ್ಟಿನ ದಿನಾಂಕ : 27/05/1966

   ಹುಟ್ಟಿದ ಊರು: ಭದ್ರಾವತಿ

   ಪತ್ನಿ : ತಹಿರಾ ಹ್ಯಾರೀಸ್

   ಮಕ್ಕಳು : ಮೊಹಮ್ಮದ್, ಉಮರ್ ಎಂಬ ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು.

   ವಿದ್ಯಾರ್ಹತೆ: ಎಂ.ಎ

   ವಿಳಾಸ: ನಲಪಾಡ್ ಹೌಸ್, 23, 1ನೇ ಅಡ್ಡರಸ್ತೆ,ಮೆಗ್ರಾಥ್ ರಸ್ತೆ, ಬೆಂಗಳೂರು-25

   ಹವ್ಯಾಸ: ತೋಟಗಾರಿಕೆ

   ಸ್ಥಾನಮಾನ

   ಸ್ಥಾನಮಾನ

   2003-2004 : ಮೈಸೂರು ಪೇಪರ್ ಮಿಲ್ಸ್ ನಿಯಮಿತ ಅಧ್ಯಕ್ಷರು

   2005 : ಅಂಜುಮಾನ್ ಇ ನಿಸ್ಸಾನ್ ಮದರಸಾ ಆಡಳಿತಾಧಿಕಾರಿ

   2008 ರಿಂದ 2013 : ವಿಧಾನಸಭಾ ಸದಸ್ಯ

   2013ರಲ್ಲಿ 14ನೇ ವಿಧಾನಸಭೆಗೆ ಶಾಂತಿನಗರ ಕ್ಷೇತ್ರದಿಂದ ಆಯ್ಕೆ.

   ಹ್ಯಾರೀಸ್ 54, 342 ಮತಗಳು, ಜೆಡಿಎಸ್ ನ ಕೆ ವಾಸುದೇವ ಮೂರ್ತಿ (ಈಗ ಬಿಜೆಪಿ) 34,155 ಮತಗಳು

   ಆಸ್ತಿ ವಿವರ -ವಸತಿ

   ಆಸ್ತಿ ವಿವರ -ವಸತಿ

   ವಸತಿ

   * ಕಾಸರಗೋಡಿನಲ್ಲಿ 48 ಲಕ್ಷ ಮೌಲ್ಯದ ವಸತಿ ಕಟ್ಟಡ

   * ಮುಂಬೈನ ಆಂಧೇರಿಯಲ್ಲಿ ಓಶಿವಾರದಲ್ಲಿ ಫ್ಲಾಟ್ 15 ಲಕ್ಷ

   ವಾಣಿಜ್ಯ:

   * ನಲಪಾಡ್ ಚೇಂಬರ್ಸ್ (61 ಲಕ್ಷ), ಮಹದೇವಪುರದಲ್ಲಿ ಶಾಪಿಂಗ್ ಆರ್ಕೇಡ್ ಮಳಿಗೆಗಳು (2ಕೋಟಿ ರು +35 ಕೋಟಿ ರು)

   * ಬೆಂಗಳೂರಲ್ಲಿ 16 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ,

   ಕೃಷಿ ಭೂಮಿ

   * ಕಾಸರಗೋಡಿನ ಚೆಂಗಲ, ಹೊಸಬೆಟ್ಟು, ತೆಕೈಲು, ತೆಲಿಚ್ಚೆರಿ, ಬೆಂಗಳೂರು ಸೇರಿದಂತೆ ವಿವಿಧೆಡೆ ಇರುವ ಭೂಮಿಯ ಒಟ್ಟು ಮೌಲ್ಯ 70 ಲಕ್ಷ ರು.

   ಆಸ್ತಿ ವಿವರ 2 ಚರಾಸ್ತಿ- ಬ್ಯಾಂಕ್ ವಿವರ

   ಆಸ್ತಿ ವಿವರ 2 ಚರಾಸ್ತಿ- ಬ್ಯಾಂಕ್ ವಿವರ

   ನಗದು-1,75, 700 ರು

   * ಅಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್ ವಿಜಯಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಗಳಲ್ಲಿ ಠೇವಣಿ.

   * ಚಾಮರಾಜಪೇಟೆ, ಕೊಳ್ಳೇಗಾಲ, ಮೈಸೂರು, ಕದ್ರಿ ಮುಂತಾದೆಡೆ ಬ್ಯಾಂಕ್ ಗಳಲ್ಲಿ ಹಣ ಹೂಡಿದ್ದಾರೆ- ಒಟ್ಟು 2 ಕೋಟಿ ರು

   * ಮ್ಯೂಚುವಲ್ ಫಂಡ್, ಚಿಟ್ ಫಂಡ್, ಷೇರು, ವೈಯಕ್ತಿಕ ಹಾಗೂ ಸಂಸ್ಥೆಯ ಬಾಂಡ್ ಗಳ ಮೊತ್ತ 1 ಕೋಟಿ ರು.

   * ಎಲ್ಐ ಸಿ, ರಿಲಯನ್ಸ್ ವಿಮೆ- ಆಯೇಷಾ- ಸುರಯಾ ಹೆಸರಿನಲ್ಲಿ 59 ಲಕ್ಷ ರು

   ಸಾಲ ಸೋಲ, ಆಭರಣ

   ಸಾಲ ಸೋಲ, ಆಭರಣ

   * ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಸುಮಾರು ಸಾಲ, ಅಡ್ವಾನ್ಸ್ ಮೊತ್ತ 82 ಕೋಟಿ ರು ನೀಡಿದ್ದಾರೆ. ಅವರು 3 ಕೋಟಿ ರು ಸಾಲ ಮಾಡಿದ್ದಾರೆ.

   * ಆಭರಣಗಳು 1 ಕೋಟಿ ರು.ಮೌಲ್ಯ.

   * ಟಿವಿ, ಡಿವಿಡಿ, ಪೀಠೋಪಕರಣ, ಇನ್ನಿತರ ಆಸ್ತಿ ಮೌಲ್ಯ 5 ಕೋಟಿ ರು

   -ಒಟ್ಟಾರೆ 93 ಕೋಟಿ ರು ಚರಾಸ್ತಿಯನ್ನು ಅಫಿಡವಿಟ್ ಆಗಿ ನೀಡಿದ್ದಾರೆ.

   -ಒಟ್ಟಾರೆ ಸ್ಥಿರಾಸ್ತಿ ಮೌಲ್ಯ 40 ಕೋಟಿ ರು ಮೀರುತ್ತದೆ. ಒಟ್ಟಾರೆ 135 ಪ್ಲಸ್ ಕೋಟಿ ರು ಆಸ್ತಿ ಹೊಂದಿದ್ದಾರೆ.

   ರಾಜಕೀಯವಾಗಿ ಮಗ ಬೆಳೆಯಲಿ

   ರಾಜಕೀಯವಾಗಿ ಮಗ ಬೆಳೆಯಲಿ

   ರಾಜಕೀಯವಾಗಿ ಮಗ ಬೆಳೆಯಲಿ ಎಂದು ಹ್ಯಾರೀಸ್ ಬಯಸಿದ್ದರು. ಕಳೆದ ವರ್ಷ ವಿಜೃಂಭಣೆಯಿಂದ ಮದುವೆ ಕೂಡಾ ಮಾಡಿದ್ದರು. ಮೊಹಮ್ಮದ್ ಕೂಡಾ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆದರೆ, ಯುಬಿ ಸಿಟಿಯಲ್ಲಿ ವಿದ್ವತ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿ ಈಗ ಬಂಧಿತರಾಗಿದ್ದಾರೆ. ವಿದ್ವತ್ ತಂದೆ ಉದ್ಯಮಿ ಲೋಕನಾಥ್ ಹಾಗೂ ಹ್ಯಾರೀಸ್ ಇಬ್ಬರು ಪರಿಚಿತರು.

   2016ರ ಏಪ್ರಿಲ್‌ನಲ್ಲಿ ಬೌರಿಂಗ್ ಇನ್‌ಸ್ಟಿಟ್ಯೂಟ್‌ನ ಸೆಕ್ಯೂರಿಟಿ ಮೇಲೆ ಮೊಹಮ್ಮದ್ ಹಲ್ಲೆ ನಡೆಸಿದ್ದ ಆರೋಪ ಕೇಳಿಬಂದಿತ್ತು. ಪಾರ್ಕಿಂಗ್ ವಿಚಾರದಲ್ಲಿ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

   ಮತ್ತೊಬ್ಬ ಮಗನಿಂದಲೂ ಅಪಖ್ಯಾತಿ

   ಮತ್ತೊಬ್ಬ ಮಗನಿಂದಲೂ ಅಪಖ್ಯಾತಿ

   2016ರಲ್ಲಿ ಹ್ಯಾರಿಸ್ ಅವರ ಮತ್ತೊಬ್ಬ ಮಗ ಉಮರ್ ಅವರು ರಿಚ್ಮಂಡ್‌ ರಸ್ತೆಯ 'ಪ್ಲಾನ್ ಬಿ' ಪಬ್ ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪ ಕೇಳಿಬಂದಿತ್ತು. ಆದರೆ, ಪಬ್ ಮಾಲೀಕರು ಮತ್ತು ಹಲ್ಲೆಗೊಳಗಾದ ವ್ಯಕ್ತಿ ಗಲಾಟೆಯಲ್ಲಿ ಉಮರ್ ಭಾಗಿಯಾಗಿರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದರಿಂದ ಕೇಸು ಖಲಾಸ್ ಆಯಿತು. ಈ ಎಲ್ಲಾ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಎಸ್ ಐ ಆಗಿದ್ದವರು ವಿಜಯ್ ಹಡಗಲಿ ಎಂಬುದು ವಿಶೇಷ. ಇದೇ ಇನ್ಸ್ ಪೆಕ್ಟರ್ ಕಬ್ಬನ್ ಪಾರ್ಕ್ ಠಾಣೆಯಲ್ಲಿರುವಾಗ ಈ ಕೇಸ್ ಬಂದಿದೆ. ಮೊಹಮ್ಮದ್ ಉಳಿಸಲು ಹೋಗಿ ಅಮಾನತುಗೊಂಡಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Know more about Shanthinagar assembly constituency MLA N.A. Harris of Indian National Congress. N.A. Harris is Businessman turned politician, Managing Director of Nalapad Group of Companies.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more