ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಯುಲು' ಬೈಸಿಕಲ್ ಹತ್ತಿ, 10 ರು ನೀಡಿ ಬೆಂಗಳೂರು ಸುತ್ತೋದು ಹೇಗೆ?

|
Google Oneindia Kannada News

ಬೆಂಗಳೂರು, ಫೆಬ್ರವರಿ 03: ಆಪ್ ಆಧಾರಿತ ಬಾಡಿಗೆ ಸೈಕಲ್ ವ್ಯವಸ್ಥೆ ಒದಗಿಸುವ 'ಯುಲು' ಕಂಪನಿಯು ಬೆಂಗಳೂರಿನ ಕೆಲವೆಡೆ ಕಾರ್ಯಾರಂಭ ಮಾಡಿದೆ. ಎಂ.ಜಿ.ರಸ್ತೆ ಸೇರಿದಂತೆ 19 ನಿಲ್ದಾಣಗಳನ್ನು ಘೋಷಿಸಲಾಗಿದೆ.

ನಗರದ ಕೇಂದ್ರ ಭಾಗದಲ್ಲಿ 400 ಪಾರ್ಕಿಂಗ್ ಹಬ್‌ಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಆದರೆ, ಪೈಕಿ 270 ತಾಣಗಳ ನಿರ್ಮಾಣಕ್ಕೆ ಬಿಬಿಎಂಪಿ ಟೆಂಡರ್ ಕರೆದಿದೆ. ಈ ಯೋಜನೆ ಅನುಷ್ಠಾನ ಮಾಡಲು 80.18 ಕೋಟಿ ರೂ. ಮೀಸಲಿಡಲಾಗಿದೆ.ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ನಗರದಲ್ಲಿ 345 ನಿಲ್ದಾಣಗಳನ್ನು (Docking stations) ಗುರುತಿಸಿದೆ.

ಇ ಸಿಟಿಯಲ್ಲಿ ಯೂಲೂ ಬೈಕ್ ನಿಂದ ನಿಲ್ದಾಣರಹಿತ ಸೈಕಲ್ ಯೋಜನೆ ಇ ಸಿಟಿಯಲ್ಲಿ ಯೂಲೂ ಬೈಕ್ ನಿಂದ ನಿಲ್ದಾಣರಹಿತ ಸೈಕಲ್ ಯೋಜನೆ

ಬಿಬಿಎಂಪಿಯು ಯೋಜನೆಗಾಗಿ 6 ಸಾವಿರ ಸೈಕಲ್ ಖರೀದಿಸಲು ಟೆಂಡರ್ ಆಹ್ವಾನಿಸುತ್ತಿದೆ. ಡಲ್ಟ್ ರೂಪಿಸಿರುವ ಯೋಜನೆಯಂತೆ ಪ್ರತಿ 250 ರಿಂದ 350 ಮೀಟರ್ ಅಂತರದಲ್ಲಿ ಒಂದು ಸೈಕಲ್ ನಿಲುಗಡೆ ತಾಣ ನಿರ್ಮಿಸಲಾಗುತ್ತದೆ. ಅದರಂತೆ ಸುಮಾರು 25 ಕಿ.ಮೀ ವ್ಯಾಪ್ತಿಯಲ್ಲಿ 345 ಸೈಕಲ್ ನಿಲುಗಡೆ ತಾಣಗಳು ನಿರ್ಮಾಣವಾಗಲಿದೆ.

ವಿಧಾನಸೌಧ, ಎಂ.ಜಿ.ರಸ್ತೆ, ಇಂದಿರಾನಗರ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ಮತ್ತಿತರೆ ಕಡೆಗಳಲ್ಲಿ ಸುಮಾರು 28 ಕಿ.ಮೀ.ವ್ಯಾಪ್ತಿಯಲ್ಲಿ ಸೈಕಲ್ ನಿಲುಗಡೆ ತಾಣಗಳನ್ನು ನಿರ್ಮಾಣ ಮಾಡಲು ಮುಂದಾಗುತ್ತಿದ್ದೇವೆ ಎಂದು ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ ದರ್ಪಣ್ ಜೈನ್ ತಿಳಿಸಿದ್ದಾರೆ.

ಮೆಟ್ರೋ ಬೈಕ್ ಇನ್ನು ಬೌನ್ಸ್ ಬೈಕ್ : ಜತೆಗೆ ಸಿಗುತ್ತೆ ಬೈಸಿಕಲ್ಮೆಟ್ರೋ ಬೈಕ್ ಇನ್ನು ಬೌನ್ಸ್ ಬೈಕ್ : ಜತೆಗೆ ಸಿಗುತ್ತೆ ಬೈಸಿಕಲ್

ಯುಲು ಕಂಪನಿಯು ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಇಂದಿರಾನಗರ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಒಟ್ಟು 2300 ಸೈಕಲ್‌ಗಳನ್ನು ಬಾಡಿಗೆಗೆ ಒದಗಿಸುತ್ತಿದೆ. ಉಳಿದ ಕಂಪನಿಗಳು ಸದ್ಯದಲ್ಲೆ ಸೇವೆ ಆರಂಭಿಸಲಿವೆ. ಪ್ರತಿ ಬೈಸಿಕಲ್‌ಗೆ ವಾರ್ಷಿಕ 50 ರೂ.ಶುಲ್ಕ ವಿಧಿಸಿ, ಪರವಾನಿಗೆ ನೀಡಲಾಗುತ್ತಿದೆ ಎಂದು ಹೇಳಿದರು. ಯುಲು ಬೈಸಿಕಲ್ ಗಳನ್ನು ಬಳಸುವುದು ಹೇಗೆ? ಬೈಸಿಕಲ್ ಬಳಕೆಗೆ ಎಷ್ಟು ಹಣ ನೀಡಬೇಕು? ಇನ್ನಿತರ ವಿವರಗಳನ್ನು ಮುಂದೆ ಓದಿ...

ಎರಡನೇ ಹಂತದಲ್ಲಿ ಇನ್ನಷ್ಟು ಪಾರ್ಕಿಂಗ್ ಹಬ್

ಎರಡನೇ ಹಂತದಲ್ಲಿ ಇನ್ನಷ್ಟು ಪಾರ್ಕಿಂಗ್ ಹಬ್

ಎರಡನೇ ಹಂತದಲ್ಲಿ ಜಯನಗರ, ಮಲ್ಲೇಶ್ವರ, ಹೊರವರ್ತುಲ ರಸ್ತೆ, ವೈಟ್‌ಫೀಲ್ಡ್, ಯಲಹಂಕ ಸೇರಿದಂತೆ ಹಲವೆಡೆ ಇನ್ನೂ 1000 ಪಾರ್ಕಿಂಗ್ ಹಬ್‌ಗಳನ್ನು ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಪ್ರತಿ 300 ಮೀಟರ್ ಅಂತರದಲ್ಲಿ ತಾಣಗಳು ಇರಲಿವೆ. 40 ಮೆಟ್ರೋ ನಿಲ್ದಾಣಗಳಲ್ಲೂ ಬಾಡಿಗೆಗೆ ಸೈಕಲ್‌ಗಳು ಲಭಿಸಿವೆ. ಒಟ್ಟು 125 ಕಿ.ಮೀ ಉದ್ದದ ಸೈಕಲ್ ಪಥ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

24 ಗಂಟೆಯೂ ಬೈಸಿಕಲ್ ಲಭ್ಯ

24 ಗಂಟೆಯೂ ಬೈಸಿಕಲ್ ಲಭ್ಯ

ಯುಲು ಕಂಪನಿಯು 10 ಮೆಟ್ರೊ ನಿಲ್ದಾಣ ಹಾಗೂ ನಗರದ ಇತರೆ ಪ್ರದೇಶಗಳಲ್ಲೂ ಸೇವೆ ಆರಂಭಿಸಿದ್ದು, ಎಲ್ಲೆಡೆ ದಿನದ 24 ಗಂಟೆಯೂ ಸೈಕಲ್ ಲಭ್ಯವಿರುತ್ತದೆ. ಬಳಕೆದಾರರು ಯುಲು ಆ್ಯಪ್ ಡೌನ್ಲೋಡ್ ಮಾಡಿಕೊಂಡು, ನೋಂದಣಿಯಾಗಬೇಕು. ಆನಂತರ 100 ರೂ. ಠೇವಣಿ ಇಡಬೇಕು. ಬಳಿಕ ಆಪ್ ಮೂಲಕ ಯುಆರ್ ಕೋಡ್ ಸ್ಕಾನ್ ಮಾಡಿದ ಕೂಡಲೇ ಬೀಗ ತೆಗೆದುಕೊಳ್ಳಲಿದೆ. ಆ ಬಳಿಕ ನಿಗದಿತ ಸ್ಥಳ ತಲುಪಿದ ನಂತರ ಸಮೀಪದ ಪಾರ್ಕಿಂಗ್ ಹಬ್‌ನಲ್ಲಿ ಸೈಕಲ್ ನಿಲುಗಡೆ ಮಾಡಬಹುದು.

ನಮ್ಮ ಮೆಟ್ರೋ ಮಾರ್ಗದಲ್ಲಿ ಆರಂಭವಾಗಲಿದೆ ಸೈಕಲ್ ಪಥನಮ್ಮ ಮೆಟ್ರೋ ಮಾರ್ಗದಲ್ಲಿ ಆರಂಭವಾಗಲಿದೆ ಸೈಕಲ್ ಪಥ

ಪ್ರತಿ ಸೈಕಲ್ ಕೂಡಾ ಜಿಪಿಎಸ್ ಹೊಂದಿರುತ್ತೆ

ಪ್ರತಿ ಸೈಕಲ್ ಕೂಡಾ ಜಿಪಿಎಸ್ ಹೊಂದಿರುತ್ತೆ

ಸೈಕಲ್ ಜಿಪಿಎಸ್ ವ್ಯವಸ್ಥೆ, ಕಾರ್ಡ್‌ಲೆಸ್ ತಂತ್ರಜ್ಞಾನ(ಆ್ಯಪ್ ಮೂಲಕ ಬೀಗ ತೆರೆಯುವ ವಿಧಾನ) ಹೊಂದಿದೆ. ಈ ನಿಟ್ಟನಲ್ಲಿ ಸೈಕಲ್ ಕಳ್ಳತನ ಮಾಡುವುದು ಕಷ್ಟ. ಪ್ರತಿ ನಿಲ್ದಾಣದಲ್ಲಿ 50 ಸೈಕಲ್‌ಗಳು ಬಾಡಿಗೆಗೆ ಲಭ್ಯವಿರುತ್ತವೆ. ಬೈಯಪ್ಪನಹಳ್ಳಿ, ಇಂದಿರಾನಗರ, ಹಲಸೂರು, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಕಬ್ಬನ್‌ಪಾರ್ಕ್, ವಿಧಾನಸೌಧ ಮೆಟ್ರೊ ನಿಲ್ದಾಣಗಳು ಸೇರಿ ಹಲವು ಕಡೆಗಳಲ್ಲಿ ಸೈಕಲ್ ಲಭ್ಯವಿರುತ್ತವೆ.

ನಮ್ಮ ಮೆಟ್ರೋದಂತೆ ಸ್ಮಾರ್ಟ್ ಕಾರ್ಡ್

ನಮ್ಮ ಮೆಟ್ರೋದಂತೆ ಸ್ಮಾರ್ಟ್ ಕಾರ್ಡ್

ನಮ್ಮ ಮೆಟ್ರೋದಲ್ಲಿರುವಂತೆಯೇ ಸ್ಮಾರ್ಟ್ ಕಾರ್ಡ್ ಪರಿಚಯಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮೊದಲ ಬಾರಿಗೆ ಸೈಕಲ್ ಬಾಡಿಗೆ ಪಡೆಯುವ ವೇಳೆ ಸಾರ್ವಜನಿಕರು ತಮ್ಮ ಗುರುತಿನ ಚೀಟಿ ಸಲಲ್ಇಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕಾಗುತ್ತದೆ. ಪ್ರತಿ ಬಾರಿ ಸೈಕಲ್ ತೆಗೆದುಕೊಂಡು ಹೋಗುವ ಮುನ್ನ ನಿಲುಗಡೆ ತಾಣದಲ್ಲಿನ ಯಂತ್ರದಲ್ಲಿ ತಮ್ಮ ಕಾರ್ಡ್ ಸ್ವೈಪ್ ಮಾಡಿ ತೆಗೆದುಕೊಂಡು ಹೋಗಬೇಕು.

ನಗರದಲ್ಲಿ ನಿತ್ಯ ಲಕ್ಷಾಂತರ ಜನರು ಸಂಚಾರ

ನಗರದಲ್ಲಿ ನಿತ್ಯ ಲಕ್ಷಾಂತರ ಜನರು ಸಂಚಾರ

ನಗರದಲ್ಲಿ ನಿತ್ಯ ಲಕ್ಷಾಂತರ ಜನರು ಸಂಚಾರ ಮಾಡುವುದರಿಂದ ಸೈಕಲ್ ಕೊರತೆ ಉಂಟಾಗದಿರಲು 6 ಸಾವಿರ ಸೈಕಲ್ ಖರೀದಿಸಲು ಬಿಬಿಎಂಪಿ ನಿರ್ಧರಿಸಿದೆ. ಅದರಂತೆ ಪ್ರತಿ ನಿಲುಗಡೆ ತಾಣದಲ್ಲಿ 14-15 ಸೈಕಲ್ ಇರಲಿದ್ದು, ಹೆಚ್ಚುವರಿಯಾಗಿ ಒಂದು ಸಾವಿರ ಸೈಕಲ್ ಗಳನ್ನು ಖರೀಧಿಸಲಾಗುತ್ತದೆ ಜತೆಗೆ ಸೈಕಲ್ ಗಳ ಬಾಡಿಗೆಯನ್ನು ಪ್ರತಿ ಗಂಟಗೆ 5ರೂ. ನಿಗದಿ ಪಡಿಸುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದರು. ಆದರೆ. ಮೊದಲ 30 ನಿಮಿಷಕ್ಕೆ 10 ರೂ., ಅನಂತರ ಪ್ರತಿ 30 ನಿಮಿಷಕ್ಕೆ ಐದು ರೂ ಬಾಡಿಗೆ ನಿಗದಿಪಡಿಸಲಾಗಿದೆ.

English summary
Know more about Bicycle sharing company Yulu service in Bengaluru. Bicycle sharing service Yulu having launched its services here at MG Road Metro Station. The company will provide 250 bicycles which will be parked at 19 stations of Yulu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X