ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವಿರುದ್ಧ ಅಲೋಕ್ ಕುಮಾರ್ ರೂಪಿಸಿದ ಪ್ಲಾನ್‌ಗೆ ಪೊಲೀಸ್ ಇಲಾಖೆ ಪ್ರಶಂಸೆ

|
Google Oneindia Kannada News

ಬೆಂಗಳೂರು, ಮೇ. 06: ಲಾಕ್ ಡೌನ್ ನಿಯಮ ಜಾರಿ, ದಂಡ ವಸೂಲಿ ಸಂಚಾರ ನಿಯಮ ಜಾರಿಯ ಜತೆಗೆ ಪೊಲೀಸರ ದಿನನಿತ್ಯದ ವಿವಾದಗಳನ್ನು ಇತ್ಯರ್ಥ ಪಡಿಸುತ್ತಿರುವ ಪೊಲೀಸರು ಮಹಾಮಾರಿ ಕೊರೊನಾಗೆ ತುತ್ತಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 600 ಹೆಚ್ಚು ಪೊಲೀಸರು ಕೊರೊನಾ ಸೊಂಕಿನಿಂದ ಬಳಲುತ್ತಿದ್ದಾರೆ. ಆದರೆ ರಾಜ್ಯ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯನ್ನು ಕೊರೊನಾ ಸೋಂಕಿನಿಂದ ಕಾಪಾಡಲು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ರೂಪಿಸಿದ ಪ್ಲಾನ್ ಯಶಸ್ವಿಯಾಗಿದೆ. ಕೊರೊನಾ ಮೊದಲನೇ ಅಲೆಗೆ ಪತರಗುಟ್ಟಿದ್ದ ರಾಜ್ಯ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ಕೊರೊನಾಂದ ಬಚಾವ್ ಮಾಡಿಸುವಲ್ಲಿ ಅಲೋಕ್ ಕುಮಾರ್ ಯಶಸ್ವಿಯಾಗಿದ್ದಾರೆ.

ಒಬ್ಬ ಪೊಲೀಸ್ ಅಧಿಕಾರಿ ಮಾಡಿದ ಯೋಜನೆ ಇದೀಗ ರಾಜ್ಯ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಕೊರೊನಾ ಮುಕ್ತರಾಗಿ ನಿಟ್ಟುಸಿರುವ ಬಿಟ್ಟಿದ್ದಾರೆ. ಕೊರೊನಾ ಮೊದಲ ಅಲೆಯ ವೇಳೆ ನೂರಾರು ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಈ ಬಾರಿ ಮುಂಜಾಗ್ರತೆ ವಹಿಸಿ ಕಠಿಣ ನಿಯಮ ರೂಪಿಸಿದ್ದರಿಂದ ಕೇವಲ 68 ಮಂದಿ ಮಾತ್ರ ಕೊರೊನಾ ಪಾಸಿಟಿವ್ ಕೇಸ್ ವರದಿಯಾಗಿದೆ. ಸಾವಿರಾರು ಪೊಲೀಸರು ಇರುವ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಕೊರೊನಾ ಸೊಂಕಿನಿಂದ ತಪ್ಪಿಸಿಕೊಂಡು ನಿಟ್ಟಿಸಿರು ಬಿಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೆಎಸ್ಆರ್‌ಪಿ ಪಡೆಯನ್ನು ಕೊರೊನಾ ಮುಕ್ತಗೊಳಿಸಲು ಪಣ ತೊಟ್ಟಿರುವ ಅಲೋಕ್ ಕುಮಾರ್ ಕಠಿಣ ನಿಯಮಗಳನ್ನು ರೂಪಿಸಿ ಜಾರಿಗೊಳಿಸಿದ್ದಾರೆ.

Know how Alok Kumar prevented KSRP police personnel from Covid 19 infection

ಕೊರೊನಾ ಎರಡನೇ ಅಲೆ ಕಾಣಿಸಿಕೊಳ್ಳುತ್ತಿದ್ದಂತೆ ದೂರದ ಊರುಗಳಿಂದ ಕೆಲಸಕ್ಕೆ ಬರುವ ಸಿಬ್ಬಂದಿಗೆ ಬ್ರೇಕ್ ಹಾಕಿದ್ದರು. ಡ್ಯೂಟಿಗೆ ಬಾರದ ಮನೆಯಲ್ಲಿಯೇ ಕಡ್ಡಾಯವಾಗಿ ಇರುವಂತೆ ಸೂಚನೆ ನೀಡಿದ್ದರು. 55 ವರ್ಷ ಮೇಲ್ಪಟ್ಟ ಕೆಎಸ್ಆರ್‌ಪಿ ಸಿಬ್ಬಂದಿಗೆ ಹೊರಗಡೆ ಕೆಲಸವನ್ನು ಸ್ಥಗಿತಗೊಳಿಸಿದರು. ಹೀಗಾಗಿ 55 ವರ್ಷ ಮೇಲ್ಪಟ್ಟವರು ಕಚೇರಿಯಲ್ಲಿಯೇ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಡುವಂತೆ ಕಟ್ಟಪ್ಪಣೆ ಮಾಡಿದ್ದರು. ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಸುರಕ್ಷಿತ ಮಾಸ್ಕ್ ಹಾಗೂ ಸಾನಿಟೈಸರ್ ಬಳಕೆ ಮಾಡುವಂತೆ ಸೂಚಿಸಿದ್ದರು. ಪೊಲೀಸ್ ಸಿಬ್ಬಂದಿ ಕೂಡ ಪೊಲೀಸ್ ಮುಖ್ಯಸ್ಥರು ಹೇಳಿದ ಮಾತುಗಳನ್ನು ಪಾಲಿಸಿದರು. ಈ ಮೂಲಕ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತನ್ನ ಸಿಬ್ಬಂದಿಯನ್ನು ಕೊರೊನಾದಿಂದ ಈವರೆಗೂ ರಕ್ಷಣೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Know how Alok Kumar prevented KSRP police personnel from Covid 19 infection

Recommended Video

Tejasvi Surya ಹೇಳಿದ ಮಾತಿಗೆ ತಿರುಗಿಬಿದ್ದ ಜನ | Oneindia Kannada

ಇನ್ನು ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗೆ ನಿರಂತರವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡ ಕೂಡಲೇ ಅವರಿಗೆ ಹೋಮ್ ಐಸೋಲೇಷನ್ ವ್ಯವಸ್ಥೆ ಮಾಡಿಸಿದ್ದಾರೆ. ಪಾಸಿಟಿವ್ ಬರುವ ಸಿಬ್ಬಂದಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಜವಾಬ್ಧಾರಿಯನ್ನು ಕಮಾಂಡಟ್‌ಗಳಿಗೆ ನೀಡಿದ್ದರು. ಇದರ ಜತೆಗೆ ಬಹುತೇಕ ಎಲ್ಲಾ ಸಿಬ್ಬಂದಿಗೆ ಎರಡು ಕಂತಿನ ವ್ಯಾಕ್ಸಿನ್ ಕೊಡಿಸುವಲ್ಲಿ ಅಲೋಕ್ ಕುಮಾರ್ ಯಶಸ್ವಿಯಾಗಿದ್ದಾರೆ. ಪ್ರತಿ ನಿತ್ಯವೂ ಸಿಬ್ಬಂದಿಯ ಆರೋಗ್ಯ ವರದಿ ತರಿಸಿಕೊಂಡು ತಪಾಸಣೆ ಮಾಡುವ ಬಿಗಿ ಕ್ರಮಗಳನ್ನು ಕೈಗೊಂಡಿದ್ದರು. ಈ ಕಾರಣಕ್ಕಾಗಿ ಇಡೀ ಪೊಲೀಸ್ ಇಲಾಖೆಯಲ್ಲಿ ಕೆಎಸ್ಆರ್‌ಪಿ ಸಿಬ್ಬಂದಿ ಕೊರೊನಾದಿಂದ ಪಾರಾಗುವಲ್ಲಿ ಮಾದರಿಯಾಗಿದ್ದಾರೆ. ಅಲೋಕ್ ಕುಮಾರ್ ಅವರು ಸಿಬ್ಬಂದಿ ಬಗ್ಗೆ ಕಾಳಜಿ ವಹಿಸಿ ತೆಗೆದುಕೊಂಡ ತೀರ್ಮಾನಗಳು ಇದೀಗ ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ನಾಂದಿ ಹಾಡಿದ್ದಾರೆ.

English summary
The plan devised by IPS officer Alok Kumar has succeeded in preventing corona infection from spreading to KSRP police personnel know more KSRP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X