ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಗೆ ಪ್ರತ್ಯೇಕ ಬಸ್ ಲೇನ್?; ಹೇಗಿರಲಿದೆ ವ್ಯವಸ್ಥೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14 : ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್‌ಗಳಿಗೆ ಪ್ರತ್ಯೇಕ ಪಥವನ್ನು ನಿರ್ಮಾಣ ಮಾಡಲಾಗುತ್ತಿದೆ. ನವೆಂಬರ್‌ 1 ರಿಂದ ಪ್ರಾಯೋಗಿಕವಾಗಿ ಪ್ರತ್ಯೇಕ ಪಥದಲ್ಲಿ ಬಸ್ ಸಂಚಾರ ಆರಂಭವಾಗಲಿದ್ದು, ಸಿದ್ಧತೆಗಳು ನಡೆಯುತ್ತಿವೆ.

Recommended Video

ಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಹಾಡು ಕೇಳುವಂತಿಲ್ಲ | Oneindia Kannada

ನಗರದ 12 ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ರಸ್ತೆಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರಕ್ಕೆ ಪ್ರತ್ಯೇಕ ಪಥ ನಿರ್ಮಾಣವಾಗಲಿದೆ. ಬೈಯಪ್ಪನಹಳ್ಳಿ-ಕೆ. ಆರ್. ಪುರ ನಡುವಿನ 18.5 ಕಿ. ಮೀ. ಉದ್ದದ ರಸ್ತೆಯಲ್ಲಿ ಮೊದಲ ಪ್ರತ್ಯೇಕ ಪಥ ನಿರ್ಮಾಣವಾಗುತ್ತಿದೆ.

ಬಿಎಂಟಿಸಿ ವೋಲ್ವೊ ಬಸ್‌ ಬದಲು ರಸ್ತೆಗೆ ಎಲೆಕ್ಟ್ರಿಕ್ ಬಸ್ ಬಿಎಂಟಿಸಿ ವೋಲ್ವೊ ಬಸ್‌ ಬದಲು ರಸ್ತೆಗೆ ಎಲೆಕ್ಟ್ರಿಕ್ ಬಸ್

ನವೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲಾಗುತ್ತದೆ ಎಂದು ಬಿಎಂಟಿಸಿ ಹೇಳಿದೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಹ ಪಥದಲ್ಲಿ ಸಂಚಾರ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಇನ್ನೂ 2 ಕಿ. ಮೀ. ಉದ್ದದ ಒಂದು ಬದಿ ಮಾತ್ರ ಪ್ರತ್ಯೇಕ ಪಥ ನಿರ್ಮಾಣ ಮಾಡಲಾಗಿದೆ.

ಸೌರಶಕ್ತಿ ಮೊರೆ ಹೋದ ಬಿಎಂಟಿಸಿ; 4.32 ಕೋಟಿ ವಿದ್ಯುತ್ ಬಿಲ್ ಉಳಿತಾಯ ಸೌರಶಕ್ತಿ ಮೊರೆ ಹೋದ ಬಿಎಂಟಿಸಿ; 4.32 ಕೋಟಿ ವಿದ್ಯುತ್ ಬಿಲ್ ಉಳಿತಾಯ

ಪ್ರತ್ಯೇಕ ಬಸ್ ಪಥದಲ್ಲಿ ಬಸ್ ನಿಲುಗಡೆಗೆ ಯಾವ ವ್ಯವಸ್ಥೆ ಮಾಡಲಾಗುತ್ತದೆ ಎಂಬುದು ಇನ್ನು ಅಂತಿಮವಾಗಿಲ್ಲ. ಮಾರ್ಗದಲ್ಲಿ ಶೆಲ್ಟರ್ ನಿರ್ಮಾಣ ಮಾಡದಿದ್ದರೆ ಬಸ್‌ಗಾಗಿ ಕಾಯುವ ಪ್ರಯಾಣಿಕರು ಬಿಸಿಲಿನಲ್ಲಿ ನಿಲ್ಲಬೇಕಾಗಿದೆ.

ಬೆಂಗಳೂರಿನಲ್ಲಿ ಪ್ರತ್ಯೇಕ ಬಸ್ ಪಥ; ನವೆಂಬರ್‌ 1 ರಿಂದ ಜಾರಿ ಬೆಂಗಳೂರಿನಲ್ಲಿ ಪ್ರತ್ಯೇಕ ಬಸ್ ಪಥ; ನವೆಂಬರ್‌ 1 ರಿಂದ ಜಾರಿ

12 ರಸ್ತೆಗಳಲ್ಲಿ ಪ್ರತ್ಯೇಕ ಪಥ

12 ರಸ್ತೆಗಳಲ್ಲಿ ಪ್ರತ್ಯೇಕ ಪಥ

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ 12 ಮಾರ್ಗಗಳನ್ನು ಗುರುತಿಸಲಾಗಿದೆ. ಈ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಪ್ರತ್ಯೇಕ ಪಥ ನಿರ್ಮಾಣವಾಗಲಿದೆ. ಪ್ರಾಯೋಗಿಕವಾಗಿ ಬೈಯಪ್ಪನಹಳ್ಳಿ-ಕೆ. ಆರ್. ಪುರ ನಡುವಿನ 18.5 ಕಿ. ಮೀ. ಉದ್ದದ ರಸ್ತೆಯಲ್ಲಿ ಪ್ರತ್ಯೇಕ ಪಥ ನಿರ್ಮಾಣವಾಗುತ್ತಿದೆ. ಇದರ ಯಶಸ್ಸು ನೋಡಿಕೊಂಡು ಉಳಿದ 11 ಮಾರ್ಗದಲ್ಲಿ ಪ್ರತ್ಯೇಕ ಪಥ ಬರಲಿದೆ.

ಬೊಲ್ಲಾರ್ಡ್ ಅಳವಡಿಕೆ

ಬೊಲ್ಲಾರ್ಡ್ ಅಳವಡಿಕೆ

ನಗರದಲ್ಲಿ ಟೆಂಡರ್ ಶ್ಯೂರ್ ರಸ್ತೆಯ ಪಾದಾಚಾರಿ ಮಾರ್ಗದಲ್ಲಿ ಹಾಕಲಾಗಿರುವ ಬೊಲ್ಲಾರ್ಡ್‌ಗಳನ್ನು ಪ್ರತ್ಯೇಕ ಪಥದಲ್ಲಿ ಹಾಕಲಾಗುತ್ತದೆ. ಇದು ರಾತ್ರಿ ವೇಳೆ ಕಾಣುವಂತೆ ಪ್ರತಿಫಲಕ ಆಳವಡಿಕೆ ಮಾಡಲಾಗುತ್ತದೆ. ಈ ಪಥ 3.5 ಮೀಟರ್ ಇರಲಿದ್ದು, ಪ್ರತಿ 2 ಕಿ. ಮೀ.ಗೆ ಒಂದು ಬೊಲ್ಲಾರ್ಡ್ ಹಾಕಲು ಬಿಎಂಟಿಸಿ ತೀರ್ಮಾನಿಸಿದ್ದು, ಪ್ರತ್ಯೇಕ ಪಥ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಬಿಎಂಟಿಸಿ ಬಸ್ ವೇಗ ಹೆಚ್ಚಳ

ಬಿಎಂಟಿಸಿ ಬಸ್ ವೇಗ ಹೆಚ್ಚಳ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸುಮಾರು 6500 ಬಸ್‌ಗಳಿವೆ. ಇವುಗಳಲ್ಲಿ 6200 ಬಸ್‌ಗಳು ಪ್ರತಿದಿನ ರಸ್ತೆಗೆ ಇಳಿಯಲಿವೆ. ಪ್ರತ್ಯೇಕ ಬಸ್ ಪಥ ನಿರ್ಮಾಣವಾದರೆ ಬಸ್‌ಗಳು ರಸ್ತೆಯಲ್ಲಿ ಸಂಚಾರ ನಡೆಸುವ ವೇಗವೂ ಹೆಚ್ಚಾಗಲಿದೆ. ಸಂಚಾರ ದಟ್ಟಣೆಯಲ್ಲಿ ಇತರ ವಾಹನಗಳ ಜೊತೆ ಬಸ್ ಸಿಕ್ಕಿ ಬೀಳುವುದಕ್ಕೂ ತಡೆ ಬೀಳಲಿದೆ.

ಸಂಚಾರಿ ಪೊಲೀಸರ ಕಣ್ಣು

ಸಂಚಾರಿ ಪೊಲೀಸರ ಕಣ್ಣು

ಬಸ್‌ಗಾಗಿ ಮೀಸಲಿರುವ ಪ್ರತ್ಯೇಕ ಪಥದಲ್ಲಿ ಇತರ ವಾಹನಗಳು ಸಂಚಾರ ನಡೆಸುವಂತಿಲ್ಲ. ಮಾರ್ಗದಲ್ಲಿ ಬೇರೆ ವಾಹನ ಹೋದರೆ ದಂಡ ವಿಧಿಸಲಾಗುತ್ತದೆ. ಇದಕ್ಕಾಗಿ ಸಂಚಾರಿ ಪೊಲೀಸರ ನೆರವನ್ನು ಬಿಎಂಟಿಸಿ ಪಡೆಯಲಿದೆ.

English summary
Bangalore all set for separate BMTC bus priority lane in 12 roads of the city. From November 1 bus will run in separate lane on trail basic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X