ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಂಎಫ್ ನಂದಿನಿಯಿಂದ ಮತ್ತೊಂದು ಜನಸ್ನೇಹಿ ಉತ್ಪನ್ನ

By Srinath
|
Google Oneindia Kannada News

ಬೆಂಗಳೂರು, ಮೇ27: ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಮನೆ ಮಾತಾಗಿರುವ, ಮನೆ ಮನೆಗೂ ಹಾಲು ಹರಿಸುತ್ತಿರುವ ಕೆಎಂಎಫ್ ಸಂಸ್ಥೆಯು ಇದೀಗ ಮತ್ತೊಂದು ಜನಸ್ನೇಹಿ ಉತ್ಪನ್ನವನ್ನು ಬಿಡುಗಡೆ ಮಾಡುತ್ತಿದೆ.

ಕಳೆದ ವರ್ಷ 9,000 ಕೋಟಿ ರೂ ಆರ್ಥಿಕ ವಹಿವಾಟು ನಡೆಸಿರುವ KMF, ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರು ಗಳಿಸಿರುವ 'ನಂದಿನಿ' ಬ್ರ್ಯಾಂಡಿನಡಿ ವೈವಿಧ್ಯಮಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಉದ್ದೇಶಿಸಿದೆ.

'ನಂದಿನಿ' ಬ್ರ್ಯಾಂಡ್ ಹೆಸರಿನಲ್ಲಿ ಹಾಲು, ಹಾಲುತ್ಪನ್ನ, ಸಿಹಿ ಪದಾರ್ಥಗಳನ್ನು ಯಶಸ್ವಿಯಾಗಿ ಮಾರುಕಟ್ಟೆಗೆ ಬಿಟ್ಟಿರುವ ಕರ್ನಾಟಕ ಹಾಲು ಮಹಾಮಂಡಲವು ಸದ್ಯದಲ್ಲೇ ಖಾಸಗಿ ಸಹಭಾಗಿತ್ವದಲ್ಲಿ ಸರಕಾರಿ/ಸಹಕಾರಿ ಕುಡಿಯುವ ನೀರನ್ನು ಅಂದರೆ ಮಿನರಲ್ ವಾಟರ್ ಅನ್ನು ಇದೇ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಮಾರುಕಟ್ಟೆಗೆ ತರಲಿದೆ. ಸದ್ಯಕ್ಕೆ ನಂದಿನಿ ಬೂತ್ ಗಳಲ್ಲಿ ಮಾತ್ರ ಇವು ಲಭ್ಯವಾಗಲಿದೆ.

kmf-to-launch-nandini-brand-mineral-water-in-bangalore

mineral drinking water ಮಾರಾಟದಲ್ಲಿ ಇದುವರೆಗೂ ಖಾಸಗಿ ಕಂಪನಿಗಳದ್ದೇ ಪಾರುಪತ್ಯ. ಇದು ಹೆಚ್ಚು ವಿವಾದಕ್ಕೂ/ ಕುಖ್ಯಾತಿಗೂ ಸಹ ಪಾತ್ರವಾಗಿದೆ. ಖಾಸಗಿ ಕಂಪನಿಗಳದ್ದು ನೂರೆಂಟು ನೀರು ಬ್ರ್ಯಾಂಡ್ ಗಳು ಇರುವಾಗ ಸರಕಾರದ ಕಡೆಯಿಂದ ಭಾರತೀಯ ರೈಲ್ವೆಯ ರೈಲ್ ನೀರ್ ಮತ್ತು ತಮಿಳುನಾಡಿನ 'ಅಮ್ಮಾ ಕುಡಿನೀರ್' ಮಾತ್ರ ಮಾರುಕಟ್ಟೆಯಲ್ಲಿ ಲಭ್ಯ.

KMF ವ್ಯವಸ್ಥಾಪಕ ನಿರ್ದೇಶಕರಾದ ಎಎಸ್ ಪ್ರೇಮನಾಥ್ ಅವರು 'ಬೆಂಗಳೂರು ಮಿರರ್' ಆಂಗ್ಲ ಪತ್ರಿಕೆಗೆ ತಿಳಿಸಿರುವಂತೆ ಮಂಡಳಿಯು ಈ ಹಿಂದೆ ಬಳ್ಳಾರಿಯಲ್ಲಿ ನಂದಿನಿ ಮಿನರಲ್ ವಾಟರ್ ಉತ್ಪಾದಿಸಲು ಯತ್ನಿಸಿತು. ಆದರೆ ಅಲ್ಲಿ ನದಿ ನೀರನ್ನು ಸಂಸ್ಕರಿಸಲು ಸಾಧ್ಯವಾಗಿಲ್ಲ. ಇನ್ನು ಬೋರ್ ನೀರ್ ಬಳಸಿ, mineral water ತಯಾರಿಸುವುದು ಸಮಂಜಸವಲ್ಲವೆಂದು ಭಾವಿಸಿ, ಯೋಜನೆ ಕೈಬಿಡಲಾಗಿದೆ.

ಆದರೆ ಇದೀಗ ಬೇಡಿಕೆಗೆ ತಕ್ಕಂತೆ ಸಾಮರ್ಥ್ಯವುಳ್ಳ ಖಾಸಗಿ ಕಂಪನಿಯ ಜತೆ ಕೈಜೋಡಿಸಿ, KMF ಮಂಡಳಿಯು ತನ್ನದೇ ಬ್ರ್ಯಾಂಡಿನ mineral water ಅನ್ನು ಮಾರುಕಟ್ಟೆಗೆ ಬಿಡಲಿದೆ.
ಪಪ್ರಸ್ತುತ, ನಗರದಲ್ಲಿ ಒಂದು ಲೀಟರ್ ಮಿನರಲ್ ವಾಟರ್ ಬಾಟಲಿಗೆ 20 ರೂ ತೆರಬೇಕಿದೆ. ಅದೇ ರೀತಿ 2 ಲೀಟರ್ ಬಾಟಲಿಗೆ 38 ರೂ ಇದೆ. ಅಮ್ಮ ಕುಡಿನೀರ್ ಬೆಲೆ ಲೀಟರಿಗೆ 10 ರೂ ನಷ್ಟಿದೆ. 'ನಂದಿನಿ' ಮಿನರಲ್ ವಾಟರ್ ಬೆಲೆ ಇವುಗಳ ನಡುವೆ ಮಧ್ಯದ ಹಂತದಲ್ಲಿರುತ್ತದೆ ಎಂದು ಪ್ರೇಮನಾಥ್ ತಿಳಿಸಿದ್ದಾರೆ.

English summary
KMF is all set to launch Nandini brand mineral water in Bangalore likely by September-October this year. The Karnataka Milk Federation is appointing consultants to foray into the business and the packaged drinking water will be named after its popular Nandini brand. As of now, private players dominate the market and the only government-owned brands are the Indian Railways' Rail Neer and the Tamil Nadu government's Amma Kudineer says Premnath, managing director of KMF.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X