• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಧಾನಿ ದೆಹಲಿಗೂ ಲಗ್ಗೆ ಇಟ್ಟ ನಂದಿನಿ, ಎಷ್ಟು ಲೀಟರ್ ಪೂರೈಕೆ?

|
Google Oneindia Kannada News

ಬೆಂಗಳೂರು, ಜೂನ್ 12: ಕೆಎಂಎಫ್ ಉತ್ಪನ್ನದ ನಂದಿನಿ ಹಾಲು ಇದೀಗ ದೆಹಲಿಯನ್ನೂ ತಲುಪಿದೆ. ಪ್ರತಿನಿತ್ಯ 2 ಲಕ್ಷ ಲೀಟರ್‌ನಷ್ಟು ನಂದಿನಿ ಹಾಲನ್ನು ದೆಹಲಿಗೆ ಪೂರೈಕೆ ಮಾಡಲಾಗುತ್ತದೆ.

ದೆಹಲಿಯ ಮದರ್ ಡೇರಿ ಸಂಸ್ಥೆ ದೆಹಲಿಯಲ್ಲಿ ಹಸುವಿನ ಹಾಲನ್ನು ಚಿಲ್ಲರೆ ಪೊಟ್ಟಣ ರೂಪದಲ್ಲಿ ಮಾರಾಟ ಮಾಡಲು ಆರಂಭಿಸಿದೆ. ದೆಹಲಿ ಸುತ್ತಮುತ್ತ ಗುಣಮಟ್ಟದ ಹಸುವಿನ ಹಾಲು ದೊರೆಯುತ್ತಿಲ್ಲ. ಹೀಗಾಗಿ ಕೆಎಂಎಫ್‌ಗೆ ಬೇಡಿಕೆ ಬಂದಿದೆ.

ನಂದಿನಿ ಮೊಸರಿನ ಪಾಕೀಟಿನ ಮೇಲೆ ಇಂದಿನ ದಿನಾಂಕ 29-02-2019 ನಂದಿನಿ ಮೊಸರಿನ ಪಾಕೀಟಿನ ಮೇಲೆ ಇಂದಿನ ದಿನಾಂಕ 29-02-2019

1900ರಲ್ಲಿ ಮದರ್ ಡೇರಿ ಸಂಸ್ಥೆ ರೈಲು ಟ್ಯಾಂಕರ್‌ಗಳ ಮೂಲಕ ಪಶ್ಚಿಮ ಬಂಗಾಳದ ಕೋಲ್ಕತ್ತಕ್ಕೆ ಹಾಲು ಸರಬರಾಜು ಮಾಡುತ್ತಿತ್ತು.ಇತ್ತೀಚೆಗಷ್ಟೆ ಕೆಎಂಎಫ್ ಪ್ರಾಯೋಗಿಕವಾಗಿ ಸುಮಾರು 43 ಸಾವಿರ ಲೀಟರ್ ಸಾಂದ್ರೀಕರಿಸಿದ ನಂದಿನಿ ಹಾಲನ್ನು ಆಂಧ್ರಪ್ರದೇಶದ ರಾಣಿಗುಂಟಾ ರೈಲ್ವೆ ನಿಲ್ದಾಣದಿಂದ ರೈಲ್ವೆ ಟ್ಯಾಂಕರ್ ಮೂಲಕ ಸರಬರಾಜು ಮಾಡಿದೆ.

ದೆಹಲಿಯ ಮದರ್ ಡೈರಿಗೆ ಸರಬರಾಜು ಮಾಡುವ ನಂದಿನಿ ಹಾಲು ಗುಣಮಟ್ಟದಲ್ಲಿ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿನಿತ್ಯ ಎರಡು ಲಕ್ಷ ಲೀಟರ್ ಹಾಲು ಪೂರೈಸುವಂತೆ ಮದರ್ ಡೈರಿ ಬೇಡಿಕೆ ಇಟ್ಟಿದೆ. ಕೆಎಂಎಫ್ ಇದುವರೆಗೂ ಹೊರರಾಜ್ಯಕ್ಕೆ ಹಾಲು ಪೂರೈಸಿದ್ದು ಅಂದರೆ ಅದು ತಿರುಪತಿಗೆ ಮಾತ್ರ ಇದು ಒಂದು ಸವಾಲಿನ ಕೆಲಸವೇ ಆಗಿದೆ.

English summary
KMF ready to supply Nandini milk to Delhi, they are planning to supply 2 lakh liter milk daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X