ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಜೆಪಿಗೆ ನಾನೇ ಅಧ್ಯಕ್ಷ, ಪ್ರಸನ್ನ ಕುಮಾರ್ ಹೊಸ ವರಸೆ

|
Google Oneindia Kannada News

Prasanna Kumar
ಬೆಂಗಳೂರು, ಜ.25 : ಬಿ.ಎಸ್.ಯಡಿಯೂರಪ್ಪ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿರುವುದು ಹಳೆ ಸುದ್ದಿ. ಸದ್ಯ ಕೆಜೆಪಿ ಸಂಸ್ಥಾಪಕ ಪ್ರಸನ್ನ ಕುಮಾರ್ ಪುನಃ ಪ್ರತ್ಯಕ್ಷವಾಗಿದ್ದು, ಕೆಜೆಪಿ ಪಕ್ಷಕ್ಕೆ ನಾನೇ ಅಧ್ಯಕ್ಷ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಕರ್ನಾಟಕದ 28 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಸನ್ನ ಕುಮಾರ್, ಬಿಜೆಪಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಕರ್ನಾಟಕ ಜನತಾ ಪಕ್ಷ ನಮ್ಮ ಸುರ್ಪದಿಯಲ್ಲೇ ಇದ್ದು, ಈ ಕುರಿತು ಚುನಾವಣಾ ಆಯೋಗಕ್ಕೂ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು. [ಕೆಜೆಪಿ ಮುಗಿದ ಅಧ್ಯಾಯ : ಬಿಎಸ್ವೈ]

ಶುಕ್ರವಾರ ಕೆಜೆಪಿ ಪಕ್ಷದ ಸರ್ವ ಸದಸ್ಯರ ಸಭೆಯನ್ನು ನಡೆಸಲಾಗಿದ್ದು, ಸಭೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಲ್ಲೂ ಸ್ಪರ್ಧಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಕೆಜೆಪಿ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದರು. [ಪ್ರಸನ್ನ ಕುಮಾರ್ ಅಪಹರಣದ ಕಥೆ]

ಕೆಜೆಪಿಯ ನಾಲ್ವರು ಶಾಸಕರು ಬಿಜೆಪಿ ಸೇರಿದ್ದಾರೆ. ಕೆಜೆಪಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದು, ಕೆಜೆಪಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ನಾನೇ ಕೆಜೆಪಿ ಅಧ್ಯಕ್ಷನಾಗಿದ್ದು, ಚುನಾವಣೆ ಎದುರಿಸಲಿದ್ದೇವೆ ಎಂದು ಪ್ರಸನ್ನ ಕುಮಾರ್ ಹೇಳಿದರು.

ಕೆಜೆಪಿ-ಬಿಜೆಪಿಗೆ ವಿಲೀನ ಸಾಧ್ಯವಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇನೆ. ಕೆಜೆಪಿ ಕುರಿತ ವಿವಾದದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನಾನೇ ಕೆಜೆಪಿ ಅಧಿಕೃತ ಅಧ್ಯಕ್ಷ ಎಂಬ ತೀರ್ಪು ಬರಲಿದೆ ಎಂದು ಪ್ರಸನ್ನ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

English summary
The Karnataka Janata Paksha candidates willc contest for Lok Sabha elections in 28 constituencies in Karnataka said, KJP founder Prasanna Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X