ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಕ್ತ ಮುತ್ತು ಪ್ರೇಮಿಗಳಿಗೆ ಕೆಜೆ ಜಾರ್ಜ್ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ನ.18 : ರಾಷ್ಟ್ರಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿರುವ 'ಕಿಸ್‌ ಆಫ್ ಲವ್‌' ಕಾರ್ಯಕ್ರಮ ಉದ್ಯಾನನಗರಿ ಬೆಂಗಳೂರಿಗೂ ಬಂದಿದೆ. ಕಿಸ್ ಆಫ್ ಲವ್ ಹೆಸರಿನಲ್ಲಿ ಕಾನೂನಿನ ಹೊರತಾದ ಚಟುವಟಿಕೆ ನಡೆಸಿದರೆ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಕೆ.ಜೆ.ಜಾರ್ಜ್, ಕಾನೂನಿನಲ್ಲಿ ಅವಕಾಶ ಇರುವುದಕ್ಕೆ ಮಾತ್ರ ಅನುಮತಿ ನೀಡಲಾಗುವುದು. ಕಾನೂನು ವಿರುದ್ಧವಾಗಿ ನಡೆದರೆ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಹೇಳಿದರು. [ಬೆಂಗಳೂರಿಗೂ ಬಂತು 'ಕಿಸ್ ಆಫ್ ಲವ್'!]

Kiss Of Love

ಕೇರಳದಲ್ಲಿ ನಡೆಯುತ್ತಿರುವ 'ನೈತಿಕ ಪೊಲೀಸ್‌ ಗಿರಿ' ವಿರೋಧಿಸಿ ಕೆಲವು ದಿನಗಳ ಹಿಂದೆ ಕೊಚ್ಚಿಯಲ್ಲಿ ಕೆಲವು ಪ್ರಗತಿಪರ ಸಂಘಟನೆಗಳು 'ಕಿಸ್‌ ಆಫ್ ಲವ್‌' ಆಯೋಜಿಸಿದ್ದವು. ನಂತರ ರಾಷ್ಟ್ರಮಟ್ಟದಲ್ಲಿ 'ಕಿಸ್‌ ಆಫ್ ಲವ್‌' ಪರ ಮತ್ತು ವಿರೋಧ ಚರ್ಚೆ, ಪ್ರತಿಭಟನೆಗಳು ನಡೆಯುತ್ತಿವೆ.

ಸದ್ಯ ನವೆಂಬರ್ ಅಂತ್ಯದೊಳಗೆ ಬೆಂಗಳೂರಿನಲ್ಲಿ ಕಿಸ್ ಆಫ್ ಲವ್ ಆಯೋಜಿಸುವ ಕುರಿತು ಚರ್ಚೆಗಳು ಆರಂಭವಾಗಿವೆ. ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ದಿನಾಂಕ ನಿಗದಿಯಾಗಿಲ್ಲ. ಇದಕ್ಕೆ ಅನುಮತಿ ನೀಡಬೇಕೆ? ಬೇಡವೆ? ಎಂಬ ಕುರಿತು ಚರ್ಚೆ ಆರಂಭವಾಗಿದೆ.

ಅನುಮತಿ ಕೋರಿಲ್ಲ : ಬೆಂಗಳೂರಿನಲ್ಲಿ ಕಿಸ್ ಆಫ್‌ ಲವ್ ಆಯೋಜಿಸಲು ಯಾವ ಸಂಘಟನೆಯವರು ಅನುಮತಿ ಕೇಳಿ ಮನವಿ ಸಲ್ಲಿಸಿಲ್ಲ ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ. ಮನವಿ ಸಲ್ಲಿಸಿದರೆ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

English summary
Karnataka Home Minister KJ George warns participants of 'Kiss of love' campaign in Bengaluru. Minister said, action will be taken if they indulge in immoral activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X