ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪಯ್ಯ ನೇಮಕ : ಗೃಹ ಸಚಿವ ಜಾರ್ಜ್ ಸ್ಪಷ್ಟನೆಗಳು

|
Google Oneindia Kannada News

ಬೆಂಗಳೂರು, ಆ.5 : ನಿವೃತ್ತ ಎಡಿಜಿಪಿ ಕೆಂಪಯ್ಯ ಅವರನ್ನು ಗೃಹ ಸಚಿವರ ಸಲಹೆಗಾರರನ್ನಾಗಿ ನೇಮಿಸಿರುವುದನ್ನು ಕೆ.ಜೆ.ಜಾರ್ಜ್ ಸಮರ್ಥಿಸಿಕೊಂಡಿದ್ದಾರೆ. ನನ್ನ ಮನವಿ ಮೇರೆಗೆ ಕೆಂಪಯ್ಯ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲಹೆಗಾರರನ್ನಾಗಿ ನೇಮಿಸಿದ್ದಾರೆ. ಇದು ಸಂವಿಧಾನ ಬಾಹಿರವಲ್ಲ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಗೃಹ ಸಚಿವ ಕೆ.ಜೆ.ಜಾರ್ಜ್, ನಿವೃತ್ತ ಎಡಿಜಿಪಿ ಕೆಂಪಯ್ಯ ಅವರನ್ನು ತಮ್ಮ ಸಲಹೆಗಾರರನ್ನಾಗಿ ನೇಮಿಸಿರುವುದನ್ನು ಸಮರ್ಥಿಸಿಕೊಂಡರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ದಿವಾಕರ್ ಅವರನ್ನು ತಮ್ಮ ಕಾನೂನು ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದರು. ಬೇರೆ ಬೇರೆ ವಿಚಾರಕ್ಕೆ ಬೇರೆ ಸಲಹೆಗಾರರಿದ್ದರು ಎಂದು ಹೇಳಿದರು.

KJ George

ಕೆಂಪಯ್ಯ ಅವರನ್ನು ನೇಮಕ ಮಾಡಿಕೊಂಡಿರುವುದಕ್ಕೆ ಆಕ್ಷೇಪ ಏಕೆ? ಅಷ್ಟಕ್ಕೂ ಇಲಾಖೆಯಲ್ಲಿ ಸುಧಾರಣೆ ತರಲು ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದು ಸಂವಿಧಾನ ಬಾಹಿರವೂ ಅಲ್ಲ, ಅಧಿಕಾರಿಗಳ ಬಡ್ತಿಗೂ ತೊಂದರೆ ಆಗುವುದಿಲ್ಲ, ಸಾರ್ವಜನಿಕರಿಗೂ ಹಾನಿ ಇಲ್ಲ ಎಂದು ಗೃಹ ಸಚಿವರು ಸ್ಪಷ್ಟನೆ ನೀಡಿದರು. [ಗೃಹ ಸಚಿವರ ಸಲಹೆಗಾರರಾಗಿ ಕೆಂಪಯ್ಯ ನೇಮಕ]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಡದಿಂದ ಕೆಂಪಯ್ಯ ನೇಮಕವಾಗಿದೆ ಎಂಬ ಮಾತನ್ನು ತಳ್ಳಿ ಹಾಕಿದ ಕೆ.ಜೆ.ಜಾರ್ಜ್, ನೇಮಕದ ಬಗ್ಗೆ ನಾನೇ ಸಿದ್ದರಾಮಯ್ಯನವರಿಗೆ ಪ್ರಸ್ತಾವನೆ ಕಳುಹಿಸಿದ್ದೆ. ಸಲಹೆಗಾರರನ್ನು ನೇಮಿಸಿಕೊಂಡರೆ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಬಹುದು ಎಂಬುದು ನನ್ನ ಉದ್ದೇಶವಾಗಿತ್ತು ಎಂದರು ಹೇಳಿದರು. [ಕೆಜೆ ಜಾರ್ಜ್ ನೆಪ ಮಾತ್ರಕ್ಕೆ ಗೃಹ ಸಚಿವರು]

ಯಾವುದೇ ಆಡಳಿತಾತ್ಮಕ ವಿಚಾರದಲ್ಲಿ ಕೆಂಪಯ್ಯ ಅವರು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ ಗೃಹ ಸಚಿವರು, ಈ ಹಿಂದೆ ನಡೆದ ಪೊಲೀಸ್ ವರ್ಗಾವಣೆ ವಿಚಾರದಲ್ಲಿ ಕೆಂಪಯ್ಯನವರು ಮಧ್ಯಪ್ರವೇಶ ಮಾಡಿರಲಿಲ್ಲ. ವರ್ಗಾವಣೆ ಹಾಗೂ ಇತರೆ ಆಡಳಿತಾತ್ಮಕ ವಿಚಾರವನ್ನು ನಾನು ಮತ್ತು ಸಿಎಂ ಸಿದ್ದರಾಮಯ್ಯ ನಿರ್ಧರಿಸುತ್ತೇವೆ ಎಂದರು.

ಬಿಜೆಪಿ ಮಾತು ಕೇಳಬೇಕಿಲ್ಲ : ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವವರು ನಾವು. ನೇಮಕ ಹಾಗೂ ಇತರೆ ವಿಚಾರದಲ್ಲಿ ನಾವು ಪ್ರತಿಪಕ್ಷ ಬಿಜೆಪಿಯವರ ಮಾತನ್ನು ಕೇಳಬೇಕಾಗಿಲ್ಲ. ಗೃಹ ಇಲಾಖೆಯಲ್ಲಿನ ಹಲವು ಸಮಸ್ಯೆಗಳಿಗೆ ಹಿಂದಿನ ಸರ್ಕಾರದ ಬೇಜವಾಬ್ದಾರಿತನವೇ ಕಾರಣ ಎಂದು ಜಾರ್ಜ್ ದೂರಿದರು.

ಕೆಂಪಯ್ಯ ಅವರು ನೇಮಕವಾದ ನಂತರ ನಾನು ಹಿರಿಯ ಅಧಿಕಾರಿಗಳ ಸಲಹೆ ತಿರಸ್ಕರಿಸುತ್ತೇನೆ ಎಂದು ಅರ್ಥವಲ್ಲ. ನಮ್ಮ ಅಧಿಕಾರಿಗಳು ಸಮರ್ಥರಿದ್ದಾರೆ. ಗೃಹ ಇಲಾಖೆಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳು ಇರುತ್ತವೆ. ಅಂಥ ಸಂದರ್ಭದಲ್ಲಿ ಸಲಹೆಗಾರರು ಇದ್ದರೆ ಇನ್ನಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು ಎಂದು ಜಾರ್ಜ್ ಅಭಿಪ್ರಾಯಪಟ್ಟರು.

English summary
Trying to put an end to speculations and adverse comments about Kempaiah appointment on Monday Home Minister K.J.George said, he had requested the chief minister Siddaramaiah to appoint Kempaiah as his adviser.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X