ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಇ-ಸಂಚಾರಕ್ಕಾಗಿ ಕಾರ್ಯತಂತ್ರಗಳೇನು : ಜಾರ್ಜ್ ರಿಂದ ರೂಪುರೇಷೆ

|
Google Oneindia Kannada News

ಬೆಂಗಳೂರು, ಫೆಬ್ರುವರಿ 27: "ಭವಿಷ್ಯದ ಸಂಚಾರ ಪ್ರದರ್ಶನ (ಎಫ್‍ಎಂಎಸ್) ಸಮ್ಮೇಳನ-2019ನ್ನು ಉದ್ಘಾಟಿಸಿ ಮಾತನಾಡಿದ ಜಾರ್ಜ್ ಅವರು, ಎಫ್‍ಎಂಎಸ್-2019 ಶೂನ್ಯ ಉಗುಳುವಿಕೆ ಗುಣಮಟ್ಟದ ಅತ್ಯಾಧುನಿಕ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಇಡೀ ವಿಶ್ವದಿಂದ ಆಕರ್ಷಿಸಿದೆ. ಭವಿಷ್ಯದಲ್ಲಿ ಶೂನ್ಯ ಹೊಗೆಯುಗುಳುವಿಕೆ ವಾಹನಗಳನ್ನು ಸಂಚಾರಕ್ಕಾಗಿ ಬಳಸುವುದು, ಪರ್ಯಾಯ ವಿದ್ಯುತ್ ಪರಿಹಾರಗಳು ಮತ್ತು ಸಂಬಂಧಿತ ಮೂಲಸೌಕರ್ಯಗಳು ಈ ವಿನೂತನ ಕ್ರಮಕ್ಕೆ ಪೂರಕವಾಗಲಿವೆ ಎಂದರು.

ಬೆಂಗಳೂರಲ್ಲಿ ವಿದ್ಯುತ್ ಚಾಲಿತ ವಾಹನಗಳಿಗಾಗಿ 112 ಚಾರ್ಜಿಂಗ್ ಕೇಂದ್ರಬೆಂಗಳೂರಲ್ಲಿ ವಿದ್ಯುತ್ ಚಾಲಿತ ವಾಹನಗಳಿಗಾಗಿ 112 ಚಾರ್ಜಿಂಗ್ ಕೇಂದ್ರ

"ವಿದ್ಯುತ್ ಚಾಲಿತ ಮತ್ತು ಸುಸ್ಥಿರ ಸಂಚಾರಕ್ಕಾಗಿ ಕರ್ನಾಟಕ ನೀತಿ ಚೌಕಟ್ಟು, ವಿದ್ಯುತ್ ವಾಹನಗಳು, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಬ್ಯಾಟರಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದು ಇತರ ರಾಜ್ಯಗಳಿಗೆ ಮಾದರಿಯಾಗಲಿದೆ ಎಂಬ ಆಶಯವನ್ನು ಜಾರ್ಜ್ ವ್ಯಕ್ತಪಡಿಸಿದರು.

KJ George Inaugurates Future Mobility Show (FMS) Conference 2019

ಇದೇ ಸಂದರ್ಭದಲ್ಲಿ ಸಚಿವರು ರಾಜ್ಯದಲ್ಲಿ ಇ-ಸಂಚಾರಕ್ಕೆ ಚಾಲನೆ ನೀಡುವ ಪ್ರಮುಖ ವಿನೂತನ ಕಾರ್ಯತಂತ್ರದ ರೂಪುರೇಷೆಗಳನ್ನು ಈ ಕೆಳಗಿನಂತೆ ನೀಡಿದರು:
* ಭಾರತದ ಮೊಟ್ಟಮೊದಲ ಎಲೆಕ್ಟ್ರಿಕ್ ತಂತ್ರಜ್ಞಾನ ಉತ್ಪಾದನಾ ಹಬ್ ಬೆಂಗಳೂರಿನಲ್ಲಿ ಆರಂಭವಾಗಿದ್ದು ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಇದನ್ನು ಆರಂಭಿಸಿದೆ. ಭಾರತದ ಮೊಟ್ಟಮೊದಲ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಬೆಂಗಳೂರಿನಲ್ಲಿ ಬೆಸ್ಕಾಂ ವತಿಯಿಂದ ಆರಂಭವಾಗಲಿದೆ.
* ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಬೆಂಗಳೂರು ನಗರದಾದ್ಯಂತ 108 ಸ್ಥಳಗಳಲ್ಲಿ (ಸರ್ಕಾರಿ ಜಾಗದಲ್ಲಿ) ಇವಿ ಚಾರ್ಜಿಂಗ್ ಸ್ಟೇಷನ್‍ಗಳನ್ನು ಆರಂಭಿಸುವ ಸಲುವಾಗಿ ಗುರುತಿಸಲಾಗಿದ್ದು, ಬೆಸ್ಕಾಂ ಇದಕ್ಕೆ ಬಿಡ್‍ಗಳನ್ನು ಆಹ್ವಾನಿಸಲಿದೆ.

ವಿದ್ಯುತ್ ಚಾಲಿತ ವಾಹನ ಕ್ಷೇತ್ರಕ್ಕೆ ಭಾರೀ ಬಂಡವಾಳವಿದ್ಯುತ್ ಚಾಲಿತ ವಾಹನ ಕ್ಷೇತ್ರಕ್ಕೆ ಭಾರೀ ಬಂಡವಾಳ

* ರಾಜ್ಯ ಸರ್ಕಾರದ ಸಿಬ್ಬಂದಿ ಬಳಸುವ ಶೇಕಡ 50ರಷ್ಟು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಪರಿಸರ ಸ್ನೇಹಿ ಇಲೆಕ್ಟ್ರಿಕ್ ವಾಹನಗಳಾಗಿ 2019ರ ಅಂತ್ಯದ ಒಳಗಾಗಿ ಪರಿವರ್ತಿಸಲಾಗುತ್ತಿದೆ.
* ಎಲೆಕ್ಟ್ರಿಕ್ ವಾಹನಗಳ ನೀತಿಯ ಕಾರ್ಯಾಚರಣೆ ಮಾರ್ಗಸೂಚಿಯನ್ನು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬಿಡುಗಡೆ ಮಾಡಲಾಗಿದೆ.
* ಕರ್ನಾಟಕದ ನಗರಾಭಿವೃದ್ಧಿ ಇಲಾಖೆಯು, ಕಟ್ಟಡ ಬೈಲಾಗಳಿಗೆ ತಿದ್ದುಪಡಿ ತಂದು, ಶೇಕಡ 10-20ರಷ್ಟು ಪಾರ್ಕಿಂಗ್ ಸ್ಥಳವನ್ನು ಇಲೆಕ್ಟ್ರಿಕ್ ವಾಹನಗಳಿಗೆ ಮೀಸಲಿಡುವುದನ್ನು ಕಡ್ಡಾಯಪಡಿಸಲಿದೆ.
* ಇಲೆಕ್ಟ್ರಿಕ್ ವಾಹನಗಳ ಮಾಲೀಕರಿಗಾಗಿ ಹೊಸ ಆ್ಯಪ್ಚ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಲ್ಲಿ ಇಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯದ ಲಭ್ಯತೆಯನ್ನು ಗುರುತಿಸಲು ಮತ್ತು ಸ್ಥಳ ಗುರುತಿಸಲು ನೆರವು ನೀಡಲಾಗುತ್ತದೆ.
* ಇಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯಗೊಳಿಸಲು ಮತ್ತು ಇಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಥಳವನ್ನು ವೈವಿಧ್ಯಮಯಗೊಳಿಸಲು ಮತ್ತು ಆಕರ್ಷಕ ಲೋಗೊ ಮೂಲಕ ಅದನ್ನು ಜನಪ್ರಿಯಗಳಿಸಲು ಕ್ರಿಯಾಯೋಜನೆ ಸಿದ್ಧವಾಗುತ್ತಿದೆ. ಇದು ಇಲೆಕ್ಟ್ರಿಕ್ ವಾಹನಗಳಿಗೆ ನಗರದಲ್ಲಿ ಆದ್ಯತೆಯ ಪಾರ್ಕಿಂಗ್ ಸ್ಥಳಾವಕಾಶ ಒದಗಿಸುವ ಮತ್ತು ನಗರಾದ್ಯಂತ ಇದರ ಇರುವಿಕೆಯನ್ನು ಆಕರ್ಷಕವಾಗಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಅಂತಿಮವಾಗಿ, ಕರ್ನಾಟಕ ಸರ್ಕಾರವು, ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಒತ್ತು ನೀಡುವ ಜತೆಗೆ ಹೆಚ್ಚಿನ ಗಮನ ಹರಿಸಲಿದ್ದು, ಇ-ಸಂಚಾರವನ್ನು ಮತ್ತಷ್ಟು ಬೆಂಬಲಿಸುವ ಸಲುವಾಗಿ ನಾವು ಒಂದು ಹೆಜ್ಜೆ ಮುಂದಿರುತ್ತೇವೆ ಎಂದು ವಿವರಿಸಿದರು.

English summary
Karnataka Industry minister KJ George today (Feb 27) inaugurated in Bengaluru the prestigious 'Future Mobility Show (FMS) Conference 2019' organized by Confederation of Indian Industry (CII).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X