ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಯೋಕಾನ್ ಮುಖ್ಯಸ್ಥೆಗೆ ಕೋವಿಡ್ 19 ಸೋಂಕು

|
Google Oneindia Kannada News

ಬೆಂಗಳೂರು, ಆಗಸ್ಟ್ 18 : ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಕರ್ನಾಟಕದಲ್ಲಿ ಸೋಮವಾರ 6317 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 2,33,283ಕ್ಕೆ ಏರಿಯಾಗಿದೆ.

Recommended Video

Chitradurgaದ ವ್ಯಕ್ತಿ ಮೇಲೆ Corona Vaccine ಪ್ರಯೋಗ | Oneindia Kannada

ಕೋವಿಡ್ ಸೋಂಕು ತಗುಲಿರುವ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿದ್ದಾರೆ. "ಕೋವಿಡ್ ಸೋಂಕಿನ ಎಣಿಕೆಯಲ್ಲಿ ನಾನು ಸೇರಿಕೊಂಡಿದ್ದೇನೆ" ಎಂದು ಹೇಳಿದ್ದಾರೆ.

ರಷ್ಯಾದ ಸ್ಪುಟ್ನಿಕ್ 5 ವಿಶ್ವದ ಮೊದಲ ಲಸಿಕೆಯಲ್ಲ: ಕಿರಣ್ ಮಜುಂದಾರ್ ಶಾ ರಷ್ಯಾದ ಸ್ಪುಟ್ನಿಕ್ 5 ವಿಶ್ವದ ಮೊದಲ ಲಸಿಕೆಯಲ್ಲ: ಕಿರಣ್ ಮಜುಂದಾರ್ ಶಾ

ವಿಶ್ವದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬಯೋಕಾನ್‌ ಸಹ ಒಂದು. ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಪ್ರತಿಷ್ಠಿತ ಉತ್ಪನ್ನಗಳನ್ನು ನೀಡುತ್ತಿರುವ ಬಯೋಕಾನ್ ಕಡಿಮೆ ಬಂಡವಾಳದಲ್ಲಿ ಆರಂಭವಾಗಿ ಬೆಳೆದ ದೊಡ್ಡ ಕಂಪನಿಯಾಗಿದೆ.

ಕೇರಳದ ಜೈಲಿನಲ್ಲಿ 350 ಕೋವಿಡ್ ಸೋಂಕಿನ ಪ್ರಕರಣ ದಾಖಲು ಕೇರಳದ ಜೈಲಿನಲ್ಲಿ 350 ಕೋವಿಡ್ ಸೋಂಕಿನ ಪ್ರಕರಣ ದಾಖಲು

Kiran Mazumdar Shaw Tested Positive For COVID 19

ಬಯೋಕಾನ್ ಸಂಸ್ಥೆಯನ್ನು ಕಟ್ಟಿದ ಕಿರಣ್ ಮಜುಂದಾರ್ ಶಾ ಅವರ ಸಾಧನೆಗಾಗಿ ಕೇಂದ್ರ ಸರ್ಕಾರ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳು ಬಂದಿವೆ. ಫೈನಾನ್ಸಿಯಲ್ ಟೈಮ್ಸ್‌ ಹೆಸರಿಸಿರುವ ಐವತ್ತು ಗಣ್ಯರ ಪಟ್ಟಿಯಲ್ಲಿ ಕಿರಣ್ ಮಜುಂದಾರ್ ಶಾ ಸಹ ಇದ್ದಾರೆ.

ಕೇರಳ-ಕರ್ನಾಟಕ ನಡುವೆ ಬಸ್ ಸಂಚಾರ; ಪ್ರಯಾಣಿಕರಿಗೆ ಸೂಚನೆ ಕೇರಳ-ಕರ್ನಾಟಕ ನಡುವೆ ಬಸ್ ಸಂಚಾರ; ಪ್ರಯಾಣಿಕರಿಗೆ ಸೂಚನೆ

ಸೋಮವಾರ ಬೆಂಗಳೂರು ನಗರದಲ್ಲಿ 2053 ಹೊಸ ಕೋವಿಡ್ ಸೋಂಕಿನ ಪ್ರಕರಣ ದಾಖಲಾಗಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 91,864ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 34,408.

English summary
Biocon executive chairperson Kiran Mazumdar Shaw tweeted that she has tested positive for COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X