ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.25ರಿಂದ ಬೆಂಗಳೂರಲ್ಲಿ ನೃತ್ಯಪ್ರಿಯರಿಗೆ ರಸದೌತಣ

By Prasad
|
Google Oneindia Kannada News

ಬೆಂಗಳೂರು, ಜ. 25 : ಭಾರತದ ಶಾಸ್ತ್ರೀಯ ನೃತ್ಯ ಕಲೆಗಳನ್ನು ಪೋಷಿಸುತ್ತ, ಪ್ರೋತ್ಸಾಹಿಸುತ್ತ, ಜನಪ್ರಿಯಗೊಳಿಸುತ್ತಿರುವ 'ಕಿಂಕಿಣಿ' ಸಂಸ್ಥೆ 'ಕಿಂಕಿಣಿ ನೃತ್ಯೋತ್ಸವ'ವನ್ನು ಬೆಂಗಳೂರಿನ ಜಯನಗರದಲ್ಲಿರುವ ಜೆಎಸ್ಎಸ್ ಆಡಿಟೋರಿಯಂನಲ್ಲಿ ಜ.25ರಿಂದ 31ರವರೆಗೆ ಆಯೋಜಿಸಿದೆ. ನೃತ್ಯೋತ್ಸವದ 30ನೇ ಆವೃತ್ತಿ ನೃತ್ಯಪ್ರಿಯರಿಗೆ ರಸದೌತಣ ಬಡಿಸಲಿದೆ.

1983ರಲ್ಲಿ ಸ್ಥಾಪನೆಯಾದ ನಂತರ ಕಿಂಕಿಣಿ ನೃತ್ಯೋತ್ಸವವನ್ನು ಪ್ರತಿವರ್ಷ ನಿರಂತರವಾಗಿ ಆಯೋಜಿಸಿಕೊಂಡು ಬರಲಾಗಿದೆ. ಭಾರತದ ಎಲ್ಲ ಖ್ಯಾತ ಮತ್ತು ಪ್ರತಿಭಾವಂತ ಯುವ ನೃತ್ಯಪಟುಗಳು ಇಲ್ಲಿ ನರ್ತನವನ್ನು ಪ್ರದರ್ಶಿಸಲಿದ್ದು, ಎಲ್ಲ ರೀತಿಯ ನೃತ್ಯ ಪ್ರಾಕಾರಗಳು ಪ್ರದರ್ಶಿತವಾಗಲಿವೆ. ಜ.25ರ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.

Kinkini Nrityotsava in Jayanagar, Bangalore

ಯಾರ್ಯಾರು ನೃತ್ಯ ಪ್ರದರ್ಶಿಸಲಿದ್ದಾರೆ? : ಚೆನ್ನೈನ ನರ್ತಕಿ ನಟರಾಜ್ ಮತ್ತು ಮೈಥಿಲಿ ಪ್ರಕಾಶ್, ಲಖನೌನ ಅನುಜ್-ಅರ್ಜುನ್ ಮಿಶ್ರಾ ಡಾನ್ಸ್ ಕಂಪನಿ (ಕಥಕ್), ಕೇರಳದ ವೀಣಾ ನಾಯರ್ ಮತ್ತು ಧನ್ಯಾ ನಾಯರ್ (ಮೋಹಿನಿಯಾಟ್ಟಂ), ತಾಂಡವ (ಭರತನಾಟ್ಯಂ), ರಸಿಕ ಡಾನ್ಸ್ (ಭರತನಾಟ್ಯಂ) ಮತ್ತು ಬೆಂಗಳೂರಿನಲ್ಲಿ ನೆಲೆಯೂರಿರುವ ಓಡಿಸ್ಸಿ ನೃತ್ಯಗಾರ್ತಿ ಮಧುಲಿತಾ ಮೋಹಾಪಾತ್ರ ನೃತ್ಯರಸಿಕರನ್ನು ರಂಜಿಸಲಿದ್ದಾರೆ.

ಇವುಗಳಲ್ಲದೆ ಬೆಂಗಳೂರಿನ ಖ್ಯಾತ ನೃತ್ಯಗಾರ್ತಿ ಲಕ್ಷ್ಮಿ ಗೋಪಾಲಸ್ವಾಮಿ ಮತ್ತು ನತ್ಯನಾರಾಯಣ ರಾಜು ಅವರು ಭರತನಾಟ್ಯದಲ್ಲಿ ಮೈಸೂರು ಅರಸರಾದ ವೊಡೆಯರ್ ಅವರ ಕಥಾನಕವನ್ನು ನೃತ್ಯರೂಪಕದಲ್ಲಿ ನಿರೂಪಿಸಲಿದ್ದಾರೆ. ಮೈಸೂರಿನ ವಸುಂಧರಾ ದೊರೆಸ್ವಾಮಿ ಅವರ ಸಮನ್ವಯ ಡಾನ್ಸ್ ಕಂಪನಿ ಕುಚಿಪುಡಿ ಡಾನ್ಸ್ ಡ್ರಾಮಾ 'ಗಂಗಾ ಗೌರಿ ವಿಲಾಸಂ' ಪ್ರದರ್ಶಿಸಲಿದ್ದಾರೆ.

ಎಲ್ಲಿ? : ಜೆಎಸ್ಎಸ್ ಆಡಿಟೋರಿಯಂ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಜಯನಗರ, ಬೆಂಗಳೂರು - 560 082.

ಕಾರ್ಯಕ್ರಮಗಳ ವಿವರ
ಜ. 25 :

ಸಂಜೆ 6 : ಉದ್ಘಾಟನೆ
6.15 : ತಾಂಡವ ನೃತ್ಯ (ಭರತನಾಟ್ಯ)
7.30 : ವಸುಂಧರಾ ದೊರೆಸ್ವಾಮಿ ತಂಡ, ಮೈಸೂರು (ಭರತನಾಟ್ಯ)

ಜ. 26
ಸಂಜೆ 6.15 : ರಸಿಕ ಡಾನ್ಸ್ ತಂಡದಿಂದ ರಸಿಕಾರ್ಪಣ, ಕಿರಣ್ ಸುಬ್ರಮಣ್ಯಂ ಮತ್ತು ಸಂಧ್ಯಾ ಕಿರಣ್
7.30 : ಅನುಜ್-ಅರ್ಜುನ್ ಮಿಶ್ರಾ ಡಾನ್ಸ್ ಕಂಪನಿ, ಲಖನೌ (ಕಥಕ್)

ಜ. 27:

ಸಂಜೆ 6.15 : ಮಧುಲಿತಾ ಮೋಹಾಪಾತ್ರ ಮತ್ತು ನೃತ್ಯಾಂತರ ಡಾನ್ಸ್ ತಂಡ (ಓಡಿಸ್ಸಿ)
7.30 : ನರ್ತಕಿ ನಟರಾಜ್ (ಭರತನಾಟ್ಯ)

ಜ. 28:

ಸಂಜೆ 6.15 : ಶ್ರೀರಂಜನಿನಿ ಉಮೇಶ್ ಅವರಿಂದ ಶ್ರೀರಂಗ ವೇಲನ್ (ಭರತನಾಟ್ಯ)
7.30 : ಡಾ. ಸಂಜಯ್ ಶಾಂತಾರಾಮ್ ಮತ್ತು ಶಿವಪ್ರಿಯ ನೃತ್ಯ ಶಾಲೆ (ಕುಚಿಪುಡಿ)

ಜ. 29:

ಸಂಜೆ 6.15 : ಮೈಥಿಲಿ ಪ್ರಕಾಶ್, ಚೆನ್ನೈ (ಭರತನಾಟ್ಯ)
7.30 : ಸಮನ್ವಯ ಡಾನ್ಸ್ ಕಂಪನಿಯಿಂದ ಕುಚಿಪುಡಿ ರಂಗರೂಪಕ ಗಂಗಾ ಗೌರಿ ವಿಲಾಸಂ. ವೀಣಾ ಮೂರ್ತಿ ವಿಜಯ್ ಅವರ ಸಂಯೋಜನೆ.

ಜ. 30:

ಸಂಜೆ 6.15 : ಮಿಥುನ ಶಾಮ್ ಮತ್ತು ಸ್ನೇಹಾ ದಯಾನಂದನ್ ಅವರಿಂದ ಶಿವ-ಶಕ್ತಿ (ಭರತನಾಟ್ಯ)
7.30 : ಲಕ್ಷ್ಮೀ ಗೋಪಾಲಸ್ವಾಮಿ ಮತ್ತು ಸತ್ಯನಾರಾಯಣ ರಾಜು ಅವರಿಂದ ವೊಡೆಯರ್ಸ್ ಆಫ್ ಮೈಸೂರು (ಭರತನಾಟ್ಯ)

ಜ. 31:

ಸಂಜೆ 6.15 : ವೀಣಾ ನಾಯರ್ ಮತ್ತು ಧನ್ಯಾ ನಾಯರ್ (ಮೋಹಿನಿಯಾಟ್ಟಂ)
7.30 : ರಾಧಾ ಅವರಿಂದ ಭಾವಕೆ ಪದ್ಮನಾಭಂ (ಭರತನಾಟ್ಯ)

English summary
30th edition of the prestigious KINKINI NRITHYOTSAVA will be held at JSS Auditorium at Jayangar, Bengaluru, from January 25th to 31st January 2014. KINKINI is one of the leading organizations in Karnataka involved in the promotion, propagation and popularization of classical dance forms of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X