ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿಡ್ನಿ ಡಯಾಲಿಸಿಸ್ ಮನೆಯಲ್ಲೇ ಮಾಡಿಸಿ: ಮಾರ್ಚ್‌ನಿಂದ ಸೇವೆ ಆರಂಭ

|
Google Oneindia Kannada News

ಬೆಂಗಳೂರು, ಫೆಬ್ರವರಿ 15: ಇನ್ನುಮುಂದೆ ಕಿಡ್ನಿ ಸಮಸ್ಯೆ ಎದುರಿಸುತ್ತಿರುವವರು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ ಮನೆಯಲ್ಲೇ ಡಯಾಲಿಸಿಸ್ ಮಾಡಿಸಿಕೊಳ್ಳಬಹುದಾಗಿದೆ.

ಕೇರಳದ ಬಳಿಕ ಈ ಮಾದರಿಯಲ್ಲಿ ಸೇವೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ತನ್ನ ಹೆಜ್ಜೆಯನ್ನು ಮುಂದಿರಿಸಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಸಹಯೋಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗೃಹ ಆಧಾರಿತ ಡಯಾಲಿಸಿಸ್ ಯೋಜನೆ ರೂಪಿಸಿವೆ. ಇದು ಮಾರ್ಚ್ ನಿಂದ ಜಾರಿಗೆ ಬರಲಿದೆ.

ಮನೆಯಲ್ಲಿ ಚಿಕಿತ್ಸೆ ಹೇಗೆ ನಡೆಯುತ್ತೆ?: ಡಯಾಲಿಸಿಸ್ ಮಾಡಿಸಬೇಕಿರುವ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು , ಎರಡು ವಾರ ತರಬೇತಿ ನೀಡಲಾಗುತ್ತದೆ.

Kidney

ರೋಗಿಯ ಹೊಟ್ಟೆಯ ಭಾಗಕ್ಕೆ ಸಣ್ಣ ಚಿಕಿತ್ಸೆಯ ಮೂಲಕ ಟ್ಯೂಬ್ ಅಳವಡಿಸಲಾಗುತ್ತದೆ. ಅದರೊಳಗೆ ಫ್ಲುಯಿಡ್‌ಗಳನ್ನು ಹಾಕುವ ಮೂಲಕ ಡಯಾಲಿಸಿಸ್ ಮಾಡಲಾಗುತ್ತದೆ. ಈ ವಿಧಾನವನ್ನು ರೋಗಿಗಳಿಗೂ ಹೇಳಿಕೊಡಲಾಗುತ್ತದೆ. ಕಲಿತುಕೊಂಡ ಬಳಿಕ ಅಗತ್ಯವಿರುವ ದ್ರವಾಂಶವನ್ನು ನೀಡಲಾಗುತ್ತದೆ.

Coronavirus: ಚೀನಾದಲ್ಲಿ ಚಿಕಿತ್ಸೆ ನೀಡಿದ 1700 ವೈದ್ಯರಿಗೇ ಸೋಂಕುCoronavirus: ಚೀನಾದಲ್ಲಿ ಚಿಕಿತ್ಸೆ ನೀಡಿದ 1700 ವೈದ್ಯರಿಗೇ ಸೋಂಕು

ಬಿಪಿಎಲ್ ಕುಟುಂಬಗಳಿಗೆ ಉಚಿತ ಡಯಾಲಿಸಿಸ್: ಯಂತ್ರದ ಮೂಲಕ ಮಾಡುವ ರಕ್ತ ಶುದ್ಧೀಕರಣಕ್ಕೆ ಹಿಮೋಡಯಾಲಿಸಿಸ್ ಎಂದು ಕರೆಯುತ್ತಾರೆ. ಮನೆಯಲ್ಲಿ ಮಾಡುವ ಡಯಾಲಿಸಿಸ್‌ಗೆ ಪೆರಿಟೋನಿಯಲ್ ಡಯಾಲಿಸಿಸ್ ಎಂದು ಕರೆಯಾಗುತ್ತದೆ. ಗ್ಲುಕೋಸ್ ನೀಡುವ ಮಾದರಿಯಲ್ಲೇ ದ್ರವಾಂಶವನ್ನು ನೀಡುವ ಮೂಲಕ ಡಯಾಲಿಸಿಸ್ ಮಾಡಿಕೊಳ್ಳಬಹುದಾಗಿದೆ.

ಆಸ್ಪತ್ರೆಯಲ್ಲಿ ಕೆಲವೊಮ್ಮೆ ಹಾಸಿಗೆ ಕೊರತೆ, ನೀರು, ವಿದ್ಯುತ್, ವೈದ್ಯರ ಕೊರತೆ ಕಾಡುತ್ತಿರುತ್ತದೆ. ಡಯಾಲಿಸಿಸ್ ಮಾಡಿಸಿಕೊಳ್ಳಲು ಒಬ್ಬರಿಗೆ ಕನಿಷ್ಠವೆಂದರೂ 10 ರಿಂದ 15 ಸಾವಿರ ರೂ ವೆಚ್ಚಮಾಡಬೇಕಾಗುತ್ತದೆ.

English summary
Henceforth, those with kidney problems need to go to the hospital and can be dialysis at home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X