ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಹರಣವಾಗಿದ್ದ ಬಾಲಕನನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಪೊಲೀಸರು

|
Google Oneindia Kannada News

ಬೆಂಗಳೂರು, ಮಾರ್ಚ್ 20: ಅಪಹರಣವಾಗಿದ್ದ ಬಾಲಕನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ್ದಾರೆ.

ಆಟೋ ಚಾಲಕನೊಬ್ಬ ಮೂರು ವರ್ಷದ ಮಗುವನ್ನು ಅಪಹರಿಸಿದ್ದ ಸಿಸಿ ಕ್ಯಾಮರಾದ ಸುಳಿವು ಆಧರಿಸಿ ಗಿರಿನಗರ ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿದ್ದಾರೆ.

ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ತಾಯಿ-ಮಗಳು ಕಿಡ್ನ್ಯಾಪ್ ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ತಾಯಿ-ಮಗಳು ಕಿಡ್ನ್ಯಾಪ್

ಡಿಸೋಜಾನಗರ ನಿವಾಸಿಗಳಾದ ಕಲಬುರಗಿ ಮೂಲದ ಚಿನ್ನಪ್ಪ ಮತ್ತು ದೇವಮ್ಮ ದಂಪತಿ ಪುತ್ರ ಭಾಗೇಶ್ ಅಪಹರಣಕ್ಕೊಳಗಾದ ಬಾಲಕ. ಆಟೋ ಚಾಲಕ ಮದ್ದೂರು ಮೂಲದ ಸುರೇಶ್ ತಲೆ ಮರೆಸಿಕೊಂಡಿದ್ದಾನೆ.

Kidnapped boy rescued in filmy style

ಚಿನ್ನಪ್ಪ ನಗರದಲ್ಲಿ ಗಾರೆ ಕೆಲಸಗಾರ ದಂಪತಿಗೆ ಮೂವರು ಗಂಡು ಮಕ್ಕಳಿದ್ದು, ಭಾಗೇಶ್ ಕೊನೆಯವನು. ಮಾ.14ರಂದು ಚಿನ್ನಪ್ಪ ಎಂದಿನಂತೆ ಕೆಲಸಕ್ಕೆ ಹೋಗಿದ್ದ ಬೆಳಗ್ಗ 11 ಗಂಟೆ ಸುಮಾರಿಗೆ ಅಣ್ಣ ಮೌನೇಶ್ ಜೊತೆ ಭಾಗೇಶ್ ಮನೆ ಸಮೀಪ ಅಪಾರ್ಟ್‌ಮೆಂಟ್ ಆಟವಾಡುತ್ತಿದ್ದ ಆ ಸಂದರ್ಭದಲ್ಲಿ ಆಟೋದಲ್ಲಿ ಬಂದ ಸುರೇಶ್ ಆತನನ್ನು ಅಪಹರಿಸಿದ್ದ.

ಸಾಲ ವಾಪಸ್ ನೀಡದ್ದಕ್ಕೆ ಸ್ನೇಹಿತನ ಹೆಂಡತಿಯನ್ನೇ ಮದುವೆಯಾದ ಭೂಪ ಸಾಲ ವಾಪಸ್ ನೀಡದ್ದಕ್ಕೆ ಸ್ನೇಹಿತನ ಹೆಂಡತಿಯನ್ನೇ ಮದುವೆಯಾದ ಭೂಪ

ನಂತರ ಮೌನೇಶ್ ಕೈಗೆ 20 ರೂ ನೀಡಿ ಸಮೀಪದಲ್ಲಿರುವ ಜ್ಯೂಸ್ ಅಂಗಡಿಯಿಂದ ಜ್ಯೂಸ್ ತರುವಂತೆ ಸೂಚಿಸಿದ್ದ. ಅದರಂತೆ ಮೌನೇಶ್ ಜ್ಯೂಸ್ ತರಲು ಹೋಗುತ್ತಿದ್ದಾಗ ಭಾಗೇಶ್‌ನನ್ನು ಅಪಹರಿಸಿದ್ದಾನೆ. ಬಳಿಕ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

English summary
Bengaluru police rescued a kidnapped boy in filmy style. He was kidnapped by auto driver.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X