ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಡ್ಡಾದಿಡ್ಡಿ ಭವಿಷ್ಯ ಹೇಳುವವರ ವಿರುದ್ಧ ಭುಗಿಲೆದ್ದ ಕಿಡಿ

|
Google Oneindia Kannada News

ಬೆಂಗಳೂರು, ಡಿ. 2: ಮೂಢನಂಬಿಕೆ ವಿರೋಧಿ ಕಾನೂನು ಜಾರಿ, ಸುದ್ದಿ ವಾಹಿಗಳಲ್ಲಿನ ಕಪಟ ಜ್ಯೋತಿಷಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಮಾನವ ಬಂಧುತ್ವ ವೇದಿಕೆ ಸದಸ್ಯರು ಬೆಂಗಳೂರಿನ ಟೌನ್ ಹಾಲ್ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧ ಊರುಗಳಿಂದ ಆರಂಭವಾದ ಅಭಿಯಾನ ಬೆಳಗಾವಿಯ ರುದ್ರಭೂಮಿಯಲ್ಲಿ ಡಿಸೆಂಬರ್ 6 ರಂದು ಸಮಾವೇಶಗೊಳ್ಳಲಿದೆ. ಹುಲಿಕಲ್ ನಟರಾಜ್ ಅವರು ಪವಾಡ ಬಯಲು ಕಾರ್ಯಕ್ರಮದ ಮೂಲಕ ಜ್ಯೋತಿಷಿಗಳ ಬಣ್ಣ ಬಯಲು ಮಾಡಲಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.[ಕಪಟ ಜ್ಯೋತಿಷಿಗಳ ವಿರುದ್ಧ ಪ್ರತಿಭಟಿಸಲು ಬನ್ನಿ]

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಿಡುಮಾಮಿಡಿ ಸ್ವಾಮೀಜಿ ಮಾತನಾಡಿ, ನಾವು ಮೂಢನಂಬಿಕೆ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಮಡೆಸ್ನಾನ, ಎಡೆಸ್ನಾನದಂಥ ಅರ್ಥವಿಲ್ಲದ ಆಚರಣೆಗಳಿಗೆ ಮುಕ್ತಿ ಕಾಣಿಸುವುದು ನಮ್ಮ ಗುರಿ. ಈ ಹೋರಾಟಕ್ಕೆ ಎಲ್ಲ ಪ್ರಗತಿಪರರ ಬೆಂಬಲವಿದೆ ಎಂದು ಹೇಳಿದರು.[ಇನ್ನಷ್ಟು ಚಿತ್ರಗಳು]

ಆಮ್ ಆದ್ಮಿ ಪಕ್ಷದ ಮುಖಂಡ ರವಿಕೃಷ್ಣ ರೆಡ್ಡಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಹಮ್ಮಿಕೊಂಡಿರುವ ಜ್ಯೋತಿಷಿಗಳನ್ನು ಕಿತ್ತೆಸೆಯುವ ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಈ ಹೋರಾಟ ಇಂದಿಗೆ ಕೊನೆಗೊಳ್ಳಲ್ಲ. ಜನರು ಇಂಥ ಕಪಟ ಸ್ವಾಮಿಗಳನ್ನು, ಜ್ಯೋತಿಷಿಗಳನ್ನು ತಿರಸ್ಕರಿಸಬೇಕು. ಮಾಧ್ಯಮಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಜನರಿಗೆ ತಪ್ಪು ಸಂದೇಶ ನೀಡುವ ಕೆಲಸ ಆಗಬಾರದು ಎಂದು ಹೇಳಿದರು[ಹುಲಿಕಲ್ ನಟರಾಜ್ ಕೈಯಲ್ಲಿ ಪವಾಡಗಳೆಲ್ಲ ಬಯಲು]

protest 1

ಸಾಹಿತಿ, ಸಾಮಾಜಿಕ ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯಕ್ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು. ಬೀದರ್, ಮಂಗಳೂರು, ಮೈಸೂರು ಮತ್ತು ಕೋಲಾರದಿಂದ ಏಕಕಾಲಕ್ಕೆ ಹೊರಟಿರುವ ಜಾಥಾ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಾಗೃತಿ ಮೂಡಿಸುತ್ತ ಸಾಗಿ ಬೆಳಗಾವಿ ತಲುಪಲಿದೆ. ಡಿಸೆಂಬರ್ 6 ಅಂಬೇಡ್ಕರ್ ಮಹಾಪರಿನಿರ್ವಾಣ ದಿನವನ್ನು ಸಮಾಜ ಪರಿವರ್ತನಾ ದಿನವನ್ನಾಗಿ ಬದಲಾಯಿಸಲಾಗುವುದು ಎಂದು ಹೋರಾಟಗಾರರು ತಿಳಿಸಿದರು.[ಡಿಸೆಂಬರ್ - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ]

ಫೇಸ್ ಬುಕ್ ಚಿಂತಕರಿಲ್ಲ
'ಭಯೋತ್ಪಾದಕ ಜ್ಯೋತಿಷಿಗಳ' ವಿರುದ್ಧ ಪ್ರತಿಭಟನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದ ಫೇಸ್ ಬುಕ್ ಚಿಂತಕರು ಮಾತ್ರ ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಅಭಿಯಾನದಲ್ಲಿ ಪಾಲ್ಗೊಂಡವರು ಮತ್ತು ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಿದ್ದ ಜನರು ಮೂಢನಂಬಿಕೆ ವಿರೋಧಿ ಘೊಷಣೆ ಕೂಗಿದರು.

English summary
Bengaluru: A protest campaign against Kannada TV Astrologers held at Town Hall on Tuesday. Government must take some steps against superstitious beliefs, Manava Bandhutva Vedike members urged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X