ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಕೆಯಿಂದ ಬಂದವರಿಗೆ ಕೊವಿಡ್ 19 ಪರೀಕ್ಷೆ ಮೂಲಕ ಸ್ವಾಗತ

|
Google Oneindia Kannada News

ಬೆಂಗಳೂರು, ಜನವರಿ 10: ಭಾರತ ಮತ್ತು ಬ್ರಿಟನ್‌ ನಡುವಿನ ವಿಮಾನಗಳು ಇಂದು ಪುನರಾರಂಭಗೊಂಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿಗಳು ಭಾನುವಾರ ಬೆಳಗ್ಗೆ ಯುಕೆನಿಂದ ಆಗಮಿಸಿದವರನ್ನು ಕೊವಿಡ್ 19 ಪರೀಕ್ಷೆ ಮೂಲಕ ಸ್ವಾಗತಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ RT-PCR ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಭಾನುವಾರ ಬೆಳಗ್ಗೆ ಬೆಳಗ್ಗೆ 4 ಗಂಟೆಗೆ ಯುಕೆ ಇಂದ ಮೊದಲ ವಿಮಾನ ಲ್ಯಾಂಡ್ ಆಗಿದ್ದು, ಸುಮಾರು 320 ಮಂದಿ ಪ್ರಯಾಣಿಕರು, ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

KIAL receives First Batch of flyers from UK

ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು, ವೇಳಾಪಟ್ಟಿ ಬದಲಾವಣೆ ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು, ವೇಳಾಪಟ್ಟಿ ಬದಲಾವಣೆ

ಯುಕೆನಿಂದ ಬರುವ ಪ್ರಯಾಣಿಕರು ಕೊವಿಡ್ 19 ನೆಗಟಿವ್ ರಿಪೋರ್ಟ್ ಹೊಂದಿದರೂ ಕೆಐಎಎಲ್ ಆವರಣದಲ್ಲಿ ಪರೀಕ್ಷೆ ಕಡ್ಡಾಯ ಎಂದು ಮಾರ್ಗಸೂಚಿ ಹೊರಡಿಸಲಾಗಿದೆ. ವಿಮಾನ ನಿಲ್ದಾಣದಲ್ಲೇ ಪರೀಕ್ಷೆಗೆ ಒಳಪಟ್ಟು ನೆಗಟಿವ್ ಎಂದು ವರದಿ ಬಂದ ನಂತರವೇ ಅವರನ್ನು ನಿಲ್ದಾಣದಿಂದ ಹೊರಕ್ಕೆ ಕಳಿಸಲಾಗುತ್ತಿದೆ. ಹೀಗೆ ನೆಗಟಿವ್ ಬಂದವರು ಮನೆಗೆ ತೆರಳಿದ ಬಳಿಕ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ. ಪರೀಕ್ಷಾ ವರದಿ ಬರಲು 5 ರಿಂದ 6 ಗಂಟೆ ಅವಧಿ ಬೇಕಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಡಿಎಚ್ಒ ಡಾ. ಮಂಜುಳಾ ದೇವಿ ಹೇಳಿದ್ದಾರೆ.

KIAL receives First Batch of flyers from UK

ಬ್ರಿಟನ್‌ನಿಂದ ಭಾರತಕ್ಕೆ ಬಂದಿಳಿದ ವಿಮಾನ: ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯಬ್ರಿಟನ್‌ನಿಂದ ಭಾರತಕ್ಕೆ ಬಂದಿಳಿದ ವಿಮಾನ: ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ

ಬೇರೆ ದೇಶಗಳಿಂದ ಬಂದವರಿಗೆ 72 ಗಂಟೆಗಳ ಅಂತರದಲ್ಲಿ ನೆಗಟಿವ್ ರಿಪೋರ್ಟ್ ಇರಬೇಕು. ಇಲ್ಲದಿದ್ದರೆ ಅವರನ್ನು ಪರೀಕ್ಷೆಗೊಳಪಡಿಸಲಾಗುವುದು. ಆರೋಗ್ಯ ಇಲಾಖೆ ಸಹಯೋಗದಲ್ಲಿ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ವ್ಯವಸ್ಥೆ ಮಾಡಲಾಗಿದೆ. ಪಾಸಿಟಿವ್ ವರದಿ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

English summary
After temporary ban on flights from the UK, flight operations have resumed and KIAL received first set of passengers on Sunday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X