ಮೆಟ್ರೋ ರೈಲು ಯೋಜನೆಗಾಗಿ ಖರೀದಿಸಿದ ಜಮೀನೆಷ್ಟು, ಕೊಟ್ಟ ಪರಿಹಾರವೆಷ್ಟು?
ಬೆಂಗಳೂರು, ಜನವರಿ 19: ರೈಲ್ವೆ ಇಲಾಖೆಯು ಜಮೀನು ಖರೀದಿಗಾಗಿಯೇ ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾ ಡೆವಲಾಪ್ಮೆಂಟ್ ಬೋರ್ಡ್ನ್ನು ನೇಮಿಸಿಕೊಂಡಿತ್ತು.
ಆದರೆ ಖರೀದಿ ಮಾಡಿದ ಜಮೀನಿಗೆ ಸಮನಾಗಿ ಜನರಿಗೆ ಪರಿಹಾರವನ್ನು ನೀಡಿರಲಿಲ್ಲ, ಹಾಗಾಗಿ ಸಾಕಷ್ಟು ಮಂದಿ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಅಂತಿಮವಾಗಿ ಹಣವು ಜಮೀನು ಕಳೆದುಕೊಂಡವರ ಬಳಿ ಸೇರಿದೆ.
ನಷ್ಟದಲ್ಲಿದ್ದ ನಮ್ಮ ಮೆಟ್ರೋಗೆ ವರವಾದ ವಿದ್ಯಾರ್ಥಿಗಳು
ನಾಗವಾರದಲ್ಲಿ ಮುಖ್ಯರಸ್ತೆಯಲ್ಲಿ ಪಡೆದುಕೊಂಡಿದ್ದ ಜಮೀನಿಗೆ 60 ಕೋಟಿ ರೂ ಪಾವತಿಸಿದೆ.30 ಚದರ ಜಮೀನು ಪಡೆದುಕೊಂಡಿದ್ದರು.ಮುಜಾಹಿದ್ ಬಿ ಮಕ್ಕಿ, ಅಬ್ದುಲ್ ರಹೀಂ, ಫಯಾಸ್ ಅಹಮದ್ ಕೋರ್ಟ್ ಮೆಟ್ಟಿಲೇರಿದ್ದರು.
ಕನಕಪುರ ರಸ್ತೆಯಾದ್ಯಂತ ವಿಸ್ತರಿಸಿದ ಹಸಿರು ಮಾರ್ಗದಲ್ಲಿನ ಐದು ನಿಲ್ದಾಣಗಳಲ್ಲಿ ಎಲ್ಲಿಯೂ ಕಾರು ಪಾರ್ಕಿಂಗ್ ಸೌಲಭ್ಯ ಇಲ್ಲದಿರುವುದು ಮತ್ತು ಈ ಮಾರ್ಗದ ಮೂರು ರೈಲು ನಿಲ್ದಾಣಗಳಲ್ಲಿ ಸಿಮೀತ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿರುವುದು ಉದ್ಘಾಟನೆ ಬಗೆಗಿನ ಆಸಕ್ತಿಯನ್ನು ಕುಂದಿಸಿದೆ. ಈ ರಸ್ತೆಯುದ್ದಕ್ಕೂ ಇರುವ ದಟ್ಟಣೆ ಪಾರ್ಕಿಂಗ್ ಸೌಲಭ್ಯ ಇಲ್ಲದಿರಲು ಕಾರಣ ಎನ್ನಲಾಗಿದೆ.
ಹಿಂದಿನ ದಿನ ಔಪಚಾರಿಕವಾಗಿ ಉದ್ಘಾಟಿಸುವುದರೊಂದಿಗೆ ಶುಕ್ರವಾರದಿಂದ ಯಲಚೇನಹಳ್ಳಿ ಮತ್ತು ಸಿಲ್ಕ್ ಸಂಸ್ಥೆ ನಡುವಣದ ಮೆಟ್ರೋ ಹಂತ -2 ರ ಮೊದಲ ವಿಸ್ತರಣೆಯ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಜಮೀನು ಸಿಗುತಿಲ್ಲ ಎಂದು ಹೇಳುತ್ತಾರೆ. ಆದಾಗ್ಯೂ, ಜಮೀನಿನ ಬೆಲೆ ನೈಜ ಸಮಸ್ಯೆಯಾಗಿದೆ. ಇಲ್ಲಿ ಜಮೀನು ಕೊಳ್ಳಲು ಪ್ರತಿ ಎಕೆರೆಗೆ 15 ಸಾವಿರ ರೂಪಾಯಿ ಪಾವತಿಸಬೇಕಾಗಿದೆ. ಎನ್ನುತ್ತಾರೆ.
ಕಾರನ್ನು ನಿಲುಗಡೆ ಮಾಡಲು, ಒಬ್ಬರಿಗೆ ಕನಿಷ್ಠ 10x10 ಚದರ ಅಡಿ ಜಾಗ ಬೇಕು. ಅಂತಹ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ವೆಚ್ಚವು ಅತಿಯಾದದ್ದು. ಆದ್ದರಿಂದ, ನಾವು ಅದರ ವಿರುದ್ಧ ನಿರ್ಧರಿಸಿದ್ದೇವೆ. 6.29 ಕಿಲೋ ಮೀಟರ್ ಉದ್ದದ ಈ ಮಾರ್ಗದಲ್ಲಿ ಕೋಣನಕುಂಟೆ ಕ್ರಾಸ್, ದೊಡ್ಡ ಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಸಿಲ್ಕ್ ಸಂಸ್ಥೆಗಳ ಐದು ಹೊಸ ನಿಲ್ದಾಣಗಳಿವೆ.