ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸಿಬಿ ದಾಳಿ : ಭ್ರಷ್ಟ ಅಧಿಕಾರಿ ಟಿ.ಆರ್.ಸ್ವಾಮಿ ಅಮಾನತು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 10 : ಕರ್ನಾಟಕ ಸರ್ಕಾರ ಕೆಐಎಡಿಬಿಯ ಮುಖ್ಯ ಇಂಜಿನಿಯರ್ ಟಿ.ಆರ್.ಸ್ವಾಮಿ ಅವರನ್ನು ಅಮಾನತು ಮಾಡಿದೆ. ಕಳೆದ ವಾರ ಟಿ.ಆರ್.ಸ್ವಾಮಿ ಮನೆ ಮೇಲೆ ಎಸಿಬಿ ದಾಳಿ ನಡೆಸಿದಾಗ ಕೋಟ್ಯಾಂತರ ರೂ. ಹಣ ಪತ್ತೆಯಾಗಿತ್ತು.

ಭ್ರಷ್ಟಾಚಾರ ನಿಗ್ರಹ ದಳ ಟಿ.ಆರ್.ಸ್ವಾಮಿ ಅವರನ್ನು ಅಮಾನತು ಮಾಡಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಶಿಫಾರಸಿನ ಅನ್ವಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಬೆಂಗ್ಳೂರಲ್ಲಿ ಎಸಿಬಿಗೆ ಸಿಕ್ಕಿದ್ದು ಕೇಜಿಗಟ್ಟಲೆ ಚಿನ್ನ, ಮೂಟೆಗಟ್ಟಲೆ ದುಡ್ಡುಬೆಂಗ್ಳೂರಲ್ಲಿ ಎಸಿಬಿಗೆ ಸಿಕ್ಕಿದ್ದು ಕೇಜಿಗಟ್ಟಲೆ ಚಿನ್ನ, ಮೂಟೆಗಟ್ಟಲೆ ದುಡ್ಡು

ಕಳೆದ ವಾರ ಟಿ.ಆರ್.ಸ್ವಾಮಿ ಅವರ ಮಲ್ಲೇಶ್ವರಂನ ಮಂತ್ರಿ ಗ್ರೀನ್ಸ್ ಅಪಾರ್ಟ್‌ಮೆಂಟ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಸ್ವಾಮಿ ಸಂಬಂಧಿಕರ ಮನೆ ಮೇಲೆಯೂ ದಾಳಿ ನಡೆಸಲಾಗಿತ್ತು. ಆಗ ಕೋಟ್ಯಾಂತರ ರೂ. ಹಣ ಪತ್ತೆಯಾಗಿತ್ತು.

ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: 5 ಕೋಟಿ ನಗದು ಪತ್ತೆಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: 5 ಕೋಟಿ ನಗದು ಪತ್ತೆ

KIADB Chief Development Officer TR Swamy suspended

ಎಸಿಬಿ ದಾಳಿ ಬಗ್ಗೆ ಮೊದಲೇ ಮಾಹಿತಿ ತಿಳಿದಿದ್ದ ಟಿ.ಆರ್‌.ಸ್ವಾಮಿ ಅಪಾರ್ಟ್‌ಮೆಂಟ್ ಬಾಗಿಲು ತೆರೆಯದೇ ಹೈಡ್ರಾಮ ನಡೆಸಿದ್ದರು. ಪಟ್ಟು ಬಿಡದ ಅಧಿಕಾರಿಗಳು ಮನೆಗೆ ಪ್ರವೇಶಿಸಿ, ಪರಿಶೀಲನೆ ನಡೆಸಿದಾಗ ಹಣ ಪತ್ತೆಯಾಗಿತ್ತು.

ಮಂಗಳೂರಿನಲ್ಲಿ ಲಂಚ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಪ್ರಾಜೆಕ್ಟ್ ಇಂಜಿನಿಯರ್ಮಂಗಳೂರಿನಲ್ಲಿ ಲಂಚ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಪ್ರಾಜೆಕ್ಟ್ ಇಂಜಿನಿಯರ್

ಟಿ.ಆರ್.ಸ್ವಾಮಿ ಮನೆಯಲ್ಲಿ 4.52 ಕೋಟಿ ಹಣ, 1.6 ಕೆಜಿ ಚಿನ್ನ, 10 ನಿವೇಶನದ ಕಾಗದ ಪತ್ರ, ಕುಟುಂಬಸ್ಥರ ಹೆಸರಿನಲ್ಲಿದ್ದ 8 ಮನೆಯ ದಾಖಲೆ, 10 ಎಕರೆ ಕೃಷಿ ಜಮೀನಿನ ಪತ್ರ, 3 ಕಾರುಗಳು ಪತ್ತೆಯಾಗಿದ್ದವು.

ಎಸಿಬಿ ಅಧಿಕಾರಿಗಳು ಮನೆಗೆ ಬರುತ್ತಿದ್ದಂತೆ 14ನೇ ಮಹಡಿಯಲ್ಲಿರುವ ಅಪಾರ್ಟ್‌ಮೆಂಟ್‌ನಿಂದ ಬ್ಯಾಗ್‌ಗಳನ್ನು ಟಿ.ಆರ್.ಸ್ವಾಮಿ ಕೆಳಗೆ ಬಿಸಾಡಿದ್ದರು. ಅದರಲ್ಲಿ ಹಣ, ದಾಖಲೆ ಪತ್ರಗಳು ಪತ್ತೆಯಾಗಿದ್ದವು. ಅಪಾರ್ಟ್‌ಮೆಂಟ್ ಪಾರ್ಕಿಂಗ್‌ ಲಾಟ್‌ನಲ್ಲಿದ್ದ ಕಾರಿನಲ್ಲಿ ಹಣ ಪತ್ತೆಯಾಗಿತ್ತು.

English summary
Karnataka government suspended Karnataka Industrial Areas Development Board (KIADB) Chief Development Officer & Chief Engineer T.R.Swamy. Anti -Corruption Bureau (ACB) conducted raid on T.R.Swamy house last week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X